ಸ್ವಂತ ಮನೆ ಮತ್ತು ಜಮೀನು ಇಲ್ಲದವರಿಗೆ ಬಂಪರ್ ಗುಡ್ ನ್ಯೂಸ್, ಈಗಲೇ ಅರ್ಜಿ ಸಲ್ಲಿಸಿ ಮನೆ ಪಡೆದುಕೊಳ್ಳಿ.

ಈಗಿನ ಕಾಲದಲ್ಲಿ ಅದೆಷ್ಟೋ ಜನರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಸ್ವಂತ ಆಸ್ತಿ ಇರುವವರು ಕೈಯಲ್ಲಿ ಹಣ ಇಲ್ಲದೆ ಸ್ವಂತ ಮನೆಯನ್ನ ಕಟ್ಟಲಾಗದೆ ಬಹಳ ಕಷ್ಟದಲ್ಲಿ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಸರ್ಕಾರದಿಂದ ಬರುವ ಕೆಲವು ಯೋಜನೆಗಳು ಅದೆಷ್ಟೋ ಜನರಿಗೆ ಇನ್ನು ಕೂಡ ತಲುಪಿಲ್ಲ ಎಂದು ಹೇಳಬಹುದು. ಇನ್ನು ಈಗ ಹೊಸ ಮನೆಗಾಗಿ ಕಾಯುತ್ತಿರುವವರಿಗೆ ರಾಜ್ಯದ ವಸತಿ ಸಚಿವರಾದ ವಿ ಸೋಮಣ್ಣ ಅವರು ಬಂಪರ್ ಸಿಹಿ ಸುದ್ದಿಯನ್ನ ನೀಡಿದ್ದಾರೆ ಎಂದು ಹೇಳಬಹುದು. ಹಾಗಾದರೆ ಏನದು ಸಿಹಿಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ರಾಜ್ಯದ ವಸತಿ ಸಚಿವರಾದ ವಿ ಸೋಮಣ್ಣನವರು ನಿಜವಾದ ಫಲಾನುಭವಿಗಳಿಗೆ ಹೊಸ ಮನೆಯನ್ನ ಕಟ್ಟಿಸಿಕೊಡಲು ಜೂನ್ 30 ನೇ ತಾರೀಕಿನಿಂದ ಹೊಸ ಅರ್ಜಿಯನ್ನ ಕರೆಯಲಾಗುತ್ತಿದೆ. ಹೌದು ಸ್ನೇಹಿತರೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಬಡವರಿಗೆ ವಿತರಣೆ ಮಾಡಲು ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ಮಾಣ ಮಾಡುತ್ತಿರುವ ಒಂದು ಲಕ್ಷ ಬಹುಮಹಡಿ ಮನೆಗಳ ಮಂಜೂರಾತಿಗೆ ಸಂಬಂಧಿಸಿದಂತೆ ಮುಂದಿನ ಬುಧವಾರದಿಂದ ಹೊಸ ಅರ್ಜಿಯನ್ನ ಕರೆಯಲಾಗುತ್ತಿದೆ ಮತ್ತು ಆಗಸ್ಟ್ 15 ನೇ ತಾರೀಕಿನಂದು ಮುಖ್ಯ ಮಂತ್ರಿಗಳು 5 ಸಾವಿರ ಮನೆಯಗಳನ್ನ ವಿತರಣೆ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

awas application news

ಇನ್ನು ಈಗ ಹೊಸ ಅರ್ಜಿಯನ್ನ ಕರೆಯಲಾಗುತ್ತಿದ್ದು ಯಾರು ಸ್ವಂತ ಮನೆ ಮತ್ತು ಜಮೀನು ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೋ ಅವರು ಮನೆಗಳಿಗಾಗಿ ಅರ್ಜಿಯನ್ನ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ. ಇನ್ನು ಈ ಹಿಂದೆ ಅರ್ಜಿಯನ್ನ ಸಲ್ಲಿಸಿ ಕೂಡ ಮನೆಯನ್ನ ಪಡೆದುಕೊಳ್ಳದೇ ಇರುವವರು ಕೂಡ ಹೊಸ ಅರ್ಜಿಯನ್ನ ಸಲ್ಲಿಸಬಹುದು ಎಂದು ಸಚಿವರು ಹೇಳಿದರು. ಪ್ರಧಾನ ಮಂತ್ರಿಗಳ ಆಶಯದಂತೆ ಬಡವರಿಗೆ ಮನೆಗಳನ್ನ ವಿತರಣೆ ಮಾಡುವ ಈ ಯೋಜನೆಯ ಅಡಿಯಲ್ಲಿ ಸರ್ಕಾರೀ ಕಂದಾಯ ಮತ್ತು ಇತರೆ ಸಂಸ್ಥೆಗಳಿಂದ 500 ಎಕರೆ ಭೂಮಿಯನ್ನ ಪಡೆದುಕೊಳ್ಳಲಾಗಿದೆ ಮತ್ತು ಮೊದಲ ಹಂತದಲ್ಲಿ 46968 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದ್ದು 42361 ಮನೆಗಳ ನಿರ್ಮಾಣ ಕಾರ್ಯಾ ಪ್ರಗತಿಯಲ್ಲಿ ಇದೆ ಎಂದು ಅವರು ಹೇಳಿದ್ದಾರೆ.

2020 ಡಿಸೆಂಬರ್ ವೇಳೆಗೆ 82 ಸಾವಿರ ಮನೆಗಳನ್ನ ನಿರ್ಮಾಣ ಮಾಡಿ ಅರ್ಹ ಬಡವರಿಗೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಮನೆ ನಿರ್ಮಾಣ ಮತ್ತು ವಿತರಣೆ ಕಾರ್ಯ ಅತ್ಯಂತ ಪಾರದಕ್ಷತೆಯಿಂದ ನಡೆಯುತ್ತಿದ್ದು ವಾಸ ಮಾಡಲು ಮನೆಯನ್ನ ಹೊಂದಿರದ ಬಡವರು ಹಾಗು ಆಶಕ್ತರು ಸ್ವಂತ ಸುರುಗಳನ್ನ ಹೊಂದಿರಬೇಕು ಅನ್ನುವುದು ಬದ್ಧತೆಯಾಗಿದೆ ಎಂದು ಸಚಿವರಾದ ವಿ ಸೋಮಣ್ಣನವರು ಹೇಳಿದ್ದಾರೆ. ಸ್ನೇಹಿತರೆ ನೀವು ಕೂಡ ಸ್ವಂತ ಮನೆಯನ್ನ ಹೊಂದಿದವರಾಗಿಲ್ಲದೆ ಇದ್ದರೆ ನೀವು ಕೂಡ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ಸ್ವಂತ ಮನೆ ಮತ್ತು ಜಮೀನು ಹೊಂದಿಲ್ಲದ ಎಲ್ಲಾ ಬಡವರಿಗೆ ತಲುಪಿಸಿ.

Join Nadunudi News WhatsApp Group

awas application news

Join Nadunudi News WhatsApp Group