Axis Bank Interest Rate: ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ, FD ಬಡ್ಡಿದರ ಹೆಚ್ಚಿಸಿದ ಆಕ್ಸಿಸ್ ಬ್ಯಾಂಕ್.

Axis Bank FD Interest Rate: ಆಕ್ಸಿಸ್ ಬ್ಯಾಂಕ್ ಇದೀಗ ತಮ್ಮ ಗ್ರಾಹಕರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿದೆ. ಇದೀಗ ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ನಿಷ್ಚಿತ ಠೇವಣಿಯ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಾಗಿ ಆಕ್ಸಿಸ್ ಬ್ಯಾಂಕ್ ಘೋಷಿಸಿದೆ.

ನಿಗದಿತ ಕಾಲಮಿತಿಯೊಂದಿಗೆ ಸ್ಥಿರ ಠೇವಣಿಗಳ ಮೇಲೆ 40 ಬೇಸಿಸ್ ಪಾಯಿಂಟ್ ಗಳಷ್ಟು ದರವನ್ನು ಹೆಚ್ಚಿಸಲಾಗಿದೆ.

Axis Bank FD Interest Rate
Image Source: News18 Kannada

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಹೆಚ್ಚಿಸಿದ ನಂತರ ಆಕ್ಸಿಸ್ ಬ್ಯಾಂಕ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಆಕ್ಸಿಸ್ ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿರುವುದು ಇದು ಎರಡನೇ ಬಾರಿ ಎಂಬುವುದು ಗಮನಾರ್ಹವಾಗಿದೆ. ರೂ. 2 ಕೋಟಿಗಿಂತ ಕಡಿಮೆ ಠೇವಣಿ ಮೊತ್ತದ ಎಫ್ ಡಿ ಗಳ ಮೇಲಿನ ಬಡ್ಡಿ ದರವನ್ನು ಶೇ. 6 .75 ಕ್ಕೆ ಹೆಚ್ಚಿಸುತ್ತಿದೆ ಎಂದು ಆಕ್ಸಿಸ್ ಬ್ಯಾಂಕ್ ಬಹಿರಂಗಪಡಿಸಿದೆ.

Axis Bank FD Interest Rate
Image Source: India Today

13 ತಿಂಗಳಿನಿಂದ 2 ವರ್ಷಗಳ ನಡುವಿನ ಮುಕ್ತಾಯ ಅವಧಿಯೊಂದಿಗೆ FD ಗಳಿಗೆ ಇತ್ತೀಚಿನ ಬಡ್ಡಿ ದರಗಳನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಿದೆ. ಆಕ್ಸಿಸ್ ಬ್ಯಾಂಕ್ 2 ವರ್ಷಕ್ಕಿಂತ ಹೆಚ್ಚು ಮತ್ತು 30 ತಿಂಗಳಿಗಿಂತ ಕಡಿಮೆ ಅವಧಿಯ ಎಫ್ ಡಿ ಗಾಲ ಮೇಲೆ ಶೇ. 7 .25 ರಷ್ಟು ಹೆಚ್ಚಿನ ಬಡ್ಡಿ ದರವನ್ನು ವಿದಿಸುತ್ತಿದೆ.

Join Nadunudi News WhatsApp Group

ಆಕ್ಸಿಸ್ ಬ್ಯಾಂಕ್ 6 ತಿಂಗಳಿಂದ 9 ತಿಂಗಳ ಎಫ್ ಡಿಯಲ್ಲಿ ಶೇ. 5.75 ರ ಬಡ್ಡಿದರವನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇ. 6.00 ಬಡ್ಡಿ ಸಿಗುತ್ತದೆ. 9 -12 ತಿಂಗಳಿಗೆ ಶೇ. 6 ಮತ್ತು ಹಿರಿಯ ನಾಗರಿಕರಿಗೆ ಶೇ. 6.25 ರಷ್ಟು ಬಡ್ಡಿ ಸಿಗುತ್ತದೆ. ಆಕ್ಸಿಸ್ ಬ್ಯಾಂಕ್ 1 ವರ್ಷದಿಂದ 1 ವರ್ಷ 24 ದಿನಗಳವರೆಗೆ ಅದೇ ಅವಧಿಗೆ 6.75 ಶೇ. ಮತ್ತು ಹಿರಿಯ ನಾಗರಿಕರಿಗೆ 7.50 ಶೇ. ಬಡ್ಡಿಯನ್ನು ನೀಡುತ್ತಿದೆ.

Axis Bank FD Interest Rate
Image Source: India Today

Join Nadunudi News WhatsApp Group