Ram Mandir: ಅಯೋಧ್ಯೆಗೆ ಬಂತು ದೇಶದ ಅತೀ ದೊಡ್ಡ ಘಂಟೆ, ಈ ಬೃಹತ್ ಘಂಟೆಯ ಬೆಲೆ ಎಷ್ಟು ಗೊತ್ತಾ…?
ಅಯೋಧ್ಯೆಗೆ ಬಂತು ದೇಶದ ಅತೀ ದೊಡ್ಡ ಘಂಟೆ, ಇದರ ಬಗ್ಗೆ ತಿಳಿದರೆ ನೀವು ಅಚ್ಚರಿ ಪಡುವುದಂತೂ ನಿಜ
Ayodhya Ram Mandir Ghanta Bell: ಜನವರಿ 22 2024 ರಂದು ಕೋಟ್ಯಾಂತರ ಭಕ್ತರ ಬಹುನಿರೀಕ್ಷಿತ ಕನಸು ನೆರವೇರಲಿದೆ. ರಾಮ ಮಂದಿರ (Ram Mandir) ಉದ್ಘಾಟನೆಯ ಸುಂದರ ಕ್ಷಣಕ್ಕಾಗಿ ಜನರು ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಇಡೀ ದೇಶದ ಜನತೆ ರಾಮ ಮಂದಿರ ಉದ್ಘಾಟನೆಗಾಗಿ ಕಾಯುತ್ತಿದ್ದು, ರಾಮನ ಭಕ್ತರು ರಾಮ ಮಂದಿರಕ್ಕೆ ಸಾಕಷ್ಟು ಕಾಣಿಕೆಯನ್ನು ನೀಡುತ್ತಿದ್ದಾರೆ. ಸದ್ಯ ರಾಮ ಮಂದಿರಕ್ಕೆ ಬಹುದೊಡ್ಡ ಕಾಣಿಕೆಯೊಂದು ಬಂದು ತಲುಪಿದೆ. ಇದರ ಬಗ್ಗೆ ತಿಳಿದರೆ ನೀವು ಅಚ್ಚರಿ ಪಡುವುದಂತೂ ನಿಜ.
ಅಯೋಧ್ಯೆಗೆ ಬಂತು ದೇಶದ ಅತೀ ದೊಡ್ಡ ಘಂಟೆ
ಈಗಾಗಲೇ ದೇಶ ವಿದೇಶಗಳಿಂದ ಅಯೋಧ್ಯ ರಾಮನ ಮಂದಿರಕ್ಕೆ ಹಲವಾರು ಕಾಣಿಕೆಗೆ ಬಂದು ತಲುಪಿದೆ. ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದ್ದೆ. ಇನ್ನು ರಾಮ ಮಂದಿರಕ್ಕೆ ದೇಶದ ಅತಿ ದೊಡ್ಡ ಘಂಟೆ (Ghanta Bell) ಅಯೋದ್ಯೆಯನ್ನು ತಲುಪಿರುವ ಬಗ್ಗೆ ವರದಿಯಾಗಿದೆ. ಅಷ್ಟಕ್ಕೂ ದೇಶದ ಅತಿ ದೊಡ್ಡ ಗಂಟೆಯ ವಿನ್ಯಾಸ ಹೇಗಿರಬಹುದು..? ಗಂಟೆಯ ತೂಕ ಎಷ್ಟಿರುತ್ತದೆ..? ಎನ್ನುವ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಈ ಬೃಹತ್ ಘಂಟೆಯ ತೂಕ ಎಷ್ಟು ಗೊತ್ತಾ…?
ಇನ್ನು 2,400 ಕೆಜಿ ತೂಕದ ಈ ಬೃಹತ್ ಗಂಟೆ Etah ಜಿಲ್ಲೆಯ ಜಲೇಸರ್ ಪಟ್ಟಣದಿಂದ ಅಯೋಧ್ಯೆಗೆ ತಲುಪಿದೆ. ಇದನ್ನು ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಇರಿಸಲಾಗಿದ್ದು, ಮೆರವಣಿಗೆ ಮಾಡಿ ನಂತರ ರೈಲಿನಲ್ಲಿ ಅಯೋಧ್ಯೆಗೆ ಸಾಗಿಸಲಾಗುತ್ತದೆ. ಸುಮಾರು 30 ಕಾರ್ಮಿಕರ ತಂಡವು 1 ವರ್ಷದ ಅವಧಿಯಲ್ಲಿ ಈ ಗಂಟೆಯನ್ನು ತಯಾರಿಸಿದೆ.
ಇದು ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ, ಪಾದರಸ ಮುಂತಾದ ಒಟ್ಟು 8 ಲೋಹಗಳಿಂದ ಮಾಡಲ್ಪಟ್ಟಿದೆ. ಗಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ. ಲೋಹದ ಉದ್ಯಮಿ ಆದಿತ್ಯ ಮಿತ್ತಲ್, ಅವರ ಸಹೋದರ, ಜಲೇಸರ್ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿಕಾಸ್ ಮಿತ್ತಲ್ ಈಗ ನಮ್ಮೊಂದಿಗಿಲ್ಲ. ಅವರು ದೇವಾಲಯಕ್ಕೆ ಗಂಟೆಯನ್ನು ದಾನ ಮಾಡಲು ಬಯಸಿದ್ದರು. ಇದರ ಪ್ರಕಾರ ಅಯೋಧ್ಯೆಗೆ ಈ ಉಡುಗೊರೆ ನೀಡಿದ್ದೇವೆ ಎಂದು ಈ ಕುರಿತು ಮಾಹಿತಿ ನೀಡಿದ್ದಾರೆ. ಉಡುಗೊರೆ ನೀಡಿದ ಕಾರಣ ಈ ಘಂಟೆಯ ಬೆಲೆ ಎಷ್ಟು ಎಂದು ವರದಿ ಮಾಡಲಾಗಿಲ್ಲ. ಚಿನ್ನ ಮತ್ತು ತಾಮ್ರ ಸೇರಿದಂತೆ ಹಲವು ಲೋಹಗಳಿಂದ ಮಾಡಿದ ಕಾರಣ ಈ ಘಂಟಾ ಬೆಲ್ ಬೆಲೆ ತುಂಬಾ ದುಬಾರಿ ಎಂದು ಹೇಳಲಾಗುತ್ತಿದೆ.