Ads By Google

Ayodhya Tour: ಅಯೋಧ್ಯೆಗೆ ರಾಮನ ದರ್ಶನ ಮಾಡುತ್ತೀರಾ…? ಹಾಗಾದರೆ ಅಯೋಧ್ಯೆಯ ಬಗ್ಗೆ ಅವಶ್ಯವಾಗಿ ತಿಳಿದುಕೊಳ್ಳಿ

ayodhya ram mandir details

Image Credit: Original Source

Ads By Google

Ayodhya Tour: ದೇಶದಲ್ಲಿ ಜನವರಿ 22 ,2024 ಇದು ಬಹಳ ಮಹತ್ವಕಾಂಶೆಯ ದಿನ ಆಗಲಿದೆ. ಈ ದಿನದಂದು ಅಯೋಧ್ಯೆಯಲ್ಲಿ ಶ್ರೀರಾಮನ ರಾಮಮಂದಿರ (Ayodhya Ram Mandir) ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದ್ದು, ಕೋಟ್ಯಂತರ ಜನರ ಕನಸು ನನಸಾಗುವ ಸಮಯ ಬರುತ್ತಿದೆ. ಜನರಲ್ಲಿ ಶ್ರೀರಾಮನ ಮಂದಿರ ನೋಡುವ ಕುತೂಹಲ ಹಾಗು ಕಾತುರ ಇದ್ದು ಇನ್ನೇನು ಸ್ವಲ್ಪ ದಿನದಲ್ಲಿ ಬ್ರಹತ್ ರಾಮಮಂದಿರ ಅನಾವರಣಗೊಳ್ಳಲಿದೆ.

ಈಗಾಗಲೇ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಇಡೀ ಅಯೋಧ್ಯೆ ಸಂಭ್ರಮದಿಂದ ಕಂಗೊಳಿಸಲಿದೆ.ಆದರೆ ನೀವು ಅಯೋಧ್ಯೆಗೆ ಹೋಗಬೇಕಾದರೆ ಹೇಗೆ ಹೋಗಬೇಕು? ದೇವರ ದರ್ಶನ ಹಾಗೂ ಪ್ರಸಾದ ಎಲ್ಲಿ ಪಡೆಯಬೇಕು? ಸುತ್ತಮುತ್ತಲು ಬೇರೆ ಯಾವ ಸ್ಥಳಗಳಿವೆ? ಈ ಬಗ್ಗೆಯಾ ಹಲವು ಪ್ರಶ್ನೆಗಳಿದ್ದರೆ ಇವುಗಳಿಗೆ ಉತ್ತರ ಇಲ್ಲಿದೆ.

Image Credit: Thequint

ಅಯೋಧ್ಯೆಗೆ ವಿಮಾನದ ಮೂಲಕ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ

ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆ ವಿಮಾನ ನಿಲ್ದಾಣ ಅಥವಾ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇತೀಚೆಗಷ್ಟೇ ಉದ್ಘಾಟಿಸಿದ್ದನು ನಾವು ಕೇಳಿದ್ದೇವೆ. ಪ್ರಸ್ತುತ ದೆಹಲಿ ಮತ್ತು ಅಹಮದಾಬಾದ್‌ ನಿಂದ ಅಯೋಧ್ಯೆಗೆ ವಿಮಾನಗಳಿವೆ. ನೆರೆಯ ನಗರಗಳಾದ ಲಕ್ನೋ, ಗೋರಖ್‌ಪುರ ಮತ್ತು ವಾರಣಾಸಿಯ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ಮೂಲಕ ನೀವು ಬಸ್ ಮತ್ತು ರೈಲಿನ ಮೂಲಕ ಅಯೋಧ್ಯೆಯನ್ನು ತಲುಪಬಹುದು. ರಾಮಮಂದಿರ ವಿಮಾನ ನಿಲ್ದಾಣದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ.

ರೈಲು ನಿಲ್ದಾಣ ಹಾಗು ರಾಮಮಂದಿರಕ್ಕೂ ಇರುವ ದೂರದ ಬಗ್ಗೆ ಮಾಹಿತಿ

ಅಯೋಧ್ಯೆಗೆ ರೈಲು ಮೂಲಕ ಪ್ರಯಾಣ ಮಾಡಿದರೆ, ರೈಲ್ವೆ ನಿಲ್ದಾಣದಿಂದ ಕೇವಲ ಐದು ಕಿಲೋಮೀಟರ್ ಪ್ರಯಾಣಿಸಿದ ನಂತರ ನೀವು ರಾಮ ಮಂದಿರವನ್ನು ತಲುಪುತ್ತೀರಿ. ಇಲ್ಲಿಗೆ ತಲುಪಲು ಹಲವು ಮಾರ್ಗಗಳು ಲಭ್ಯವಿರುತ್ತವೆ. ಇದಲ್ಲದೆ ಲಕ್ನೋ ಮತ್ತು ದೆಹಲಿ ಸೇರಿದಂತೆ ಅನೇಕ ಪ್ರಮುಖ ನಗರಗಳಿಂದ ನೇರ ಬಸ್ ಸೇವೆಯ ಮೂಲಕ ಅಯೋಧ್ಯೆಯನ್ನು ತಲುಪಬಹುದು.

Image Credit: prabhatkhabar

ರಾಮ ಮಂದಿರಕ್ಕೆ ಭೇಟಿ ನೀಡುವ ಕುರಿತು ಮಾಹಿತಿ

ದೇವಾಲಯದ ಪೂರ್ವ ದಿಕ್ಕಿನಿಂದ ಭಕ್ತರು ದರ್ಶನಕ್ಕೆ ಬರುತ್ತಾರೆ. ಅವರು ಸಿಂಹದ್ವಾರದ ಮೂಲಕ ಚಲಿಸಿದ ತಕ್ಷಣ, ಶ್ರೀರಾಮನ ದರ್ಶನ ಪಡೆದು ಎಡಕ್ಕೆ ತಿರುಗಿ ಹೊರಗೆ ಹೋಗಬೇಕು. ಅಯೋಧ್ಯೆಯ ಕುಬೇರ್ ತಿಲಾ ದೇವಸ್ಥಾನ ಹೋಗಲು ಅನುಮತಿ ಪತ್ರವನ್ನು ಹೊಂದಿರಬೇಕು. ಶ್ರೀರಾಮನ ಪ್ರತಿಮೆಯನ್ನು ದೇವಾಲಯದಿಂದ 30 ಅಡಿ ದೂರದಿಂದ ನೋಡಬಹುದು ಹಾಗು ರಾಮನ ದರ್ಶನ ಪಡೆದು ಹಿಂದಿರುಗುವಾಗ ದರ್ಶನ ಮಾರ್ಗದ ಬಳಿಯ ಉದ್ಯಾನವನದಿಂದ ಪ್ರಸಾದ ಸ್ವೀಕರಿಸಬಹುದು.

ಅಯೋಧ್ಯೆಯಲ್ಲಿ ಇವುಗಳನ್ನು ಖರೀದಿಸಿ

ಅಯೋಧ್ಯೆ ರಾಮನ ಯಾತ್ರಾ ನಗರವಾಗಿರುವುದರಿಂದ, ಅಯೋಧ್ಯೆಯಲ್ಲಿ ಮರ ಮತ್ತು ಅಮೃತಶಿಲೆಯಿಂದ ಮಾಡಿದ ರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಹೆಚ್ಚು ಖರೀದಿಸಲಾಗುತ್ತದೆ. ಇದಲ್ಲದೆ, ನೀವು ಧಾರ್ಮಿಕ ಚಿಹ್ನೆಗಳು, ಕೀ ಚೈನ್‌ಗಳು ಮತ್ತು ರಾಮ ಮಂದಿರದ ಪೋಸ್ಟರ್‌ಗಳನ್ನು ಹೊಂದಿರುವ ಟೀ ಶರ್ಟ್‌ಗಳನ್ನು ಸಹ ಖರೀದಿಸಬಹುದು.

Image Credit: Livehindustan

ಅಯೋಧ್ಯೆಯಲ್ಲಿರುವ ಪ್ರಮುಖ ದೇವಾಲಯಗಳು

ಅಯೋಧ್ಯೆಯಲ್ಲಿ ರಾಮಮಂದಿರ ಹೊರತುಪಡಿಸಿ ಹನುಮಾನ್‌ ಗರ್ಹಿ ದೇವಸ್ಥಾನ, ನಾಗೇಶ್ವರನಾಥ ದೇವಸ್ಥಾನ, ಕನಕ್ ಭವನ, ಗುಪ್ತರ್ ಘಾಟ್ ಮತ್ತು ರಾಮ್‌ ಕೋಟೆಗೆ ಭೇಟಿ ನೀಡಬಹುದು. ಹನುಮಾನ್‌ಗರ್ಹಿ ಮಹಾಬಲಿ ಹನುಮಾಂತನ ಪ್ರಸಿದ್ಧ ದೇವಾಲಯವಾಗಿದ್ದು ಇದನ್ನು 10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಹನುಮಂತನು ಇಲ್ಲಿ ನೆಲೆಸಿದ್ದಾನೆ ಮತ್ತು ಅವನು ಅಯೋಧ್ಯೆಯನ್ನು ರಕ್ಷಿಸುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in