Ads By Google

Arogya Card: ಈ ಕಾರ್ಡ್ ಮಾಡಿಕೊಂಡರೆ ಸಿಗಲಿದೆ ಉಚಿತವಾಗಿ 5 ಲಕ್ಷ, ಕೇಂದ್ರದ ಯೋಜನೆಗೆ ಇಂದೇ ಸೇರಿಕೊಳ್ಳಿ.

Ayushman Arogya Card

Image Source: The Week

Ads By Google

Ayushman Arogya Card: ಭಾರತದಲ್ಲಿ ಆರ್ಥಿಕವಾಗಿ ದುರ್ಬಲ ಜನರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಬಡತನದಿಂದಾಗಿ ಈ ಜನರಿಗೆ ಮೂಲಭೂತ ಅರೋಗ್ಯ ಸೌಲಭ್ಯಗಳು ಸಿಗುವುದಿಲ್ಲ. ಈ ಜನರು ಯಾವುದೇ ರೀತಿಯ ಗಂಭೀರ ಕಾಯಿಲೆಯನ್ನು ಹೊಂದಿದ್ದರೆ. ಈ ಪರಿಸ್ಥಿತಿಯಲ್ಲಿ ಹಣದ ಕೊರತೆಯಿಂದಾಗಿ ಈ ಜನರಿಗೆ ತಮ್ಮ ಚಿಕಿತ್ಸೆಯನ್ನು ಸರಿಯಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಅನೇಕ ಬಾರಿ ಸರಿಯಾದ ಚಿಕಿತ್ಸೆಯ ಕೊರತೆಯಿಂದಾಗಿ ಈ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೇಶದ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಎಂಬ ಅದ್ಭುತ ಯೋಜನೆಯನ್ನು ನಿರ್ವಹಿಸುತ್ತಿದೆ.

Image Credit: Gomedii

ಆಯುಷ್ಮಾನ್ ಭಾರತ್ ಯೋಜನೆ
ಆಯುಷ್ಮಾನ್ ಭಾರತ್ ಯೋಜನೆಯಡಿ ಭಾರತ ಸರ್ಕಾರವು ದೇಶದ ಬಡ ಕಾರ್ಮಿಕರಿಗಾಗಿ ಐದು ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಒದಗಿಸುತ್ತಿದೆ. ಕಾರ್ಮಿಕರು ಅಯುಷ್ಮಾನ್ ಭಾರತ್ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅಯುಷ್ಮಾನ್ ಭಾರತ್ ಕಾರ್ಡ್ ಮಾಡಿದ್ದಾರೆ 5 ಲಕ್ಷ ರೂಪಾಯಿಯ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ.

ಅಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆಯುವುದು ಹೇಗೆ
ಅನಾರೋಗ್ಯದ ಸಂದರ್ಭದಲ್ಲಿ ಕಾರ್ಮಿಕರು ಚಿಕಿತ್ಸೆಯನ್ನು ಪಡೆಯಲಿರುವ ಆಸ್ಪತ್ರೆ. ಈ ಆಸ್ಪತ್ರೆ ಭಾರತ್ ಯೋಜನೆಯಲ್ಲಿ ನೋಂದಾಯಿಸಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂದು ಅಲ್ಲಿಗೆ ಹೋಗಿ ಕಂಡುಹಿಡಿಯಬಹುದು. ಸರ್ಕಾರದ ಸಮಿತಿಯಲ್ಲಿ ಸೇರಿಸಲಾದ ಆಸ್ಪತ್ರೆಗಳು ಆ ಆಸ್ಪತ್ರೆಗಳಲ್ಲಿ ಆಯುಷ್ಮಾಅನ್ ಹೆಲ್ಪ್ ಡೆಸ್ಕ್ ಗಳಿವೆ.

Image Credit: Srbpost

ಆಯುಷ್ಮಾನ್ ಸಹಾಯ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಗುರುತನ್ನು ಪರಿಶೀಲಿಸಬೇಕು. ಇದರ ನಂತರ ನಿಮ್ಮ ದಾಖಲೆಗಳನ್ನು ಪರಿಶೀಲಿಸುವ ಮೂಲಕ ನೀವು ಯೋಜನೆಯನ್ನು ಸುಲಭವಾಗಿ ಕ್ಲೈಮ್ ಮಾಡಬಹುದು. ಇದರಲ್ಲಿ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಈ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ.

ಆಯುಷ್ಮಾನ್ ಆರೋಗ್ಯ ಕಾರ್ಡ್ ಪಡೆಯುವುದು ಹೇಗೆ
ಅಯುಷ್ಮಾನ್ ಭಾರತ್ ಅರೋಗ್ಯ ಕಾರ್ಡ್ ಅನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ 10 ರೂಪಾಯಿ ಶುಲ್ಕದೊಂದಿಗೆ ನೀಡಲಾಗುತ್ತದೆ. ಸಮುದಾಯ ಅರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in