Ayushman Cards: ಆಯುಷ್ಮನ್ ಕಾರ್ಡಿಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್, ರಾಜ್ಯ ಸರ್ಕಾರದ ಇನ್ನೊಂದು ಘೋಷಣೆ.
ರಾಜ್ಯದ ಪ್ರತಿ ಮೂಲೆ ಮೂಲೆಯಲ್ಲಿರುವ ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ.
Ayushman Bharat Arogya Karnataka Yojana: ರಾಜ್ಯದಲ್ಲಿ ಸಾಲು ಸಾಲು ಯೋಜನೆಗಳು ಅನುಷ್ಠಾನಗೊಳುತ್ತಿದೆ. ಸರ್ಕಾರ ಪರಿಚಯಿಸುತ್ತಿರುವ ಎಲ್ಲ ಯೋಜನೆಗಳು ಕೂಡ ಜನರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದೆ. ಇನ್ನು ಕೇಂದ್ರ ಸರ್ಕಾರ ಜನರ ಆರೋಗ್ಯದ ರಕ್ಷಣೆಗಾಗಿ Ayushman Bharat ಯೋಜನೆಯನ್ನ ಪರಿಚಯಿಸಿತ್ತು. ಸದ್ಯ ಕರ್ನಾಟಕ ರಾಜ್ಯದ ಪ್ರತಿ ಬಡ ಜನರಿಗೆ ಆಯುಷ್ಮನ್ ಭಾರತ್ ಯೋಜನೆಯ ಲಾಭ ದೊರೆಯಲಿದೆ.
ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ
ಇದೀಗ ರಾಜ್ಯದಲ್ಲಿ ಆಯುಷ್ಮನ್ ಭಾರತ್ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಕಾರ್ಡ್ ವಿತರಸಿಸಲು ಸುತ್ತೋಲೆ ಹೊರಡಿಸಲಾಗಿದೆ. ಈ ಮೂಲಕ ರಾಜ್ಯದ ಜನತೆಗೆ ಸಿಹಿಸುದ್ದಿ ನೀಡಿದೆ. ರಾಜ್ಯದ ಪ್ರತಿ ಬಡ ಜನರಿಗೆ ಆರೋಗ್ಯ ಯೋಜನೆಯ ಲಾಭ ದೊರೆಯಬೇಕೆನ್ನುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ರಾಜ್ಯದ ಪ್ರತಿ ಮೂಲೆ ಮೂಲೆಯಲ್ಲಿರುವ ಜನರಿಗೆ ಆರೋಗ್ಯ ಸವಲತ್ತನ್ನು ನೀಡುವ ಉದ್ದೇಶದಿಂದ ಆಯುಷ್ಮಾನ್ ಕಾರ್ಡ್ ವಿತರಣೆ ಸರ್ಕಾರ ಮುಂದಾಗಿದೆ.
ರಾಜ್ಯದ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ
ಆಯುಷ್ಮಾನ್ ಭಾರತ್ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದಲ್ಲಿ 5.69 ಕೋಟಿ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗುವುದು. ಈವರೆಗೆ ಕೇವಲ 1.54 ಕೋಟಿ ಕಾರ್ಡ್ ವಿತರಿಸಲಾಗಿದ್ದು, ಉಳಿದ 4.15 ಕೋಟಿ ಜನರಿಗೆ ಶೀಘ್ರ ಕಾರ್ಡ್ ನೀಡುವ ಉದ್ದೇಶದಿಂದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಆಯುಷ್ಮಾನ್ ಭಾರತ್ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್ ನೋಂದಣಿ ಮಾಡಿ ಎಲ್ಲರಿಗೂ ಸಾಫ್ಟ್ ಕಾಪಿ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಆಯುಷ್ಮಾನ್ ಭಾರತ್-ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ಅನ್ನು ಎಲ್ಲಾ ಗ್ರಾಮೀಣ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲು ಕ್ರಮಕೈಗೊಳ್ಳಲು ಆದೇಶಿಸಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಡ್ ವಿತರಿಸಲು ವ್ಯವಸ್ಥೆ ಮಾಡಬೇಕು. ಈಗಿರುವ ವ್ಯವಸ್ಥೆಯ ಮೂಲಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್ ನೋಂದಣಿ ಸಾಧ್ಯವಿಲ್ಲ. ಆದ್ದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಸದ್ಯದಲ್ಲೆ ರಾಜ್ಯದ ಜನತೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆಯ ಲಾಭ ದೊರೆಯಲಿದೆ.