3.0 Scheme: ಇನ್ನುಮುಂದೆ ಮನೆ ಬಾಗಿಲಿಗೆ ಬರಲಿದ್ದಾರೆ ವೈದ್ಯರು ಮತ್ತು ನರ್ಸ್, ಕೇಂದ್ರದ 3.0 ಯೋಜನೆ ಜಾರಿಗೆ.
ದೇಶದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ.
Ayushman 3.0: ಕೇಂದ್ರ ಸರ್ಕಾರ ಜನರಿಗೆ ಬೇಕಾಗುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳುವುದು ಉತ್ತಮವಾಗಿದೆ. ಕೇಂದ್ರ ಸರ್ಕಾರ ಆಗಸ್ಟ್ 1 ರಂದು ಮಹತ್ವದ ಕಾರ್ಯಕ್ರಮವನ್ನು ಕೈಗೊಳ್ಳಲಿದೆ. ದೇಶದ ಜನರು ಇದರ ಅಂಗವಾಗಿ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಅಯುಷ್ಮಾನ್ ಭವ 3.0 ಕಾರ್ಯಕ್ರಮ
ಆಗಸ್ಟ್ 1 ರಿಂದ ಕೇಂದ್ರ ಸರ್ಕಾರದಿಂದ ಮಹತ್ವಾಕಾಂಕ್ಷೆಯ ಅಯುಷ್ಮಾನ್ ಭವ 3.0 ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ದೇಶದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ವಹಿಸಲಾಗುತ್ತಿದೆ.
ಕೇಂದ್ರ ಅರೋಗ್ಯ ಸಚಿವಾಲಯವು ಆಯುಷ್ಮನ್ ಭವ ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಚಿಸುತ್ತಿದೆ. ಇದು ಎಲ್ಲಾ ಸರ್ಕಾರೀ ಅರೋಗ್ಯ ಯೋಜನೆಗಳನ್ನು ಕೊನೆಯ ಮೈಲಿಯಲ್ಲಿರುವವರು ಸೇರಿದಂತೆ ಪ್ರತಿಯೊಬ್ಬ ಉದ್ದೇಶಿತ ಫಲಾನುಭವಿಗೆ ಗರಿಷ್ಠ ಪ್ರಮಾಣದಲ್ಲಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಯೋಚಿಸುತ್ತಿದೆ.
ಆಯುಷ್ಮಾನ್ ಅಪ್ಕೆ ದ್ವಾರ್ 3.0, ಆಯುಷ್ಮಾನ್ ಸಭಾ, ಆಯುಷ್ಮಾನ್ ಮೇಳ ಮತ್ತು ಆಯುಷ್ಮಾನ್ ಗ್ರಾಮ್ ಈ ಕಾರ್ಯಕ್ರಮದ ಅಡಿಯಲ್ಲಿ ಯೋಜಿಸಲಾದ ಕೆಲವು ಚಟುವಟಿಕೆಗಳಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಎಲ್ಲಾ ಆರೋಗ್ಯ ಯೋಜನೆಗಳ ಸಮಗ್ರ ಮತ್ತು ಸಂತೃಪ್ತ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳುವುದು ಅಭಿಯಾನದ ಉದ್ದೇಶವಾಗಿದೆ.
ಇದರಿಂದ ಪ್ರತಿಯೊಬ್ಬ ಅರ್ಹ ಫಲಾನುಭವಿ ತಮ್ಮ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆಯುಷ್ಮಾನ್ ಆಪ್ಕೆ ದ್ವಾರ್ 1 ಮತ್ತು 2 ಡ್ರೈವ್ ಗಳನ್ನೂ ಯಶಸ್ವಿಯಾಗಿ ನಡೆಸಲಾಗಿದೆ. ಅಯುಷ್ಮಾನ್ ಆಪ್ಕೆ ದ್ವಾರ್ 3 .0 ಅಡಿಯಲ್ಲಿ ಸ್ಯಾಚುರೇಶನ್ ಅನ್ನು ಖಚಿತಪಡಿಸಿಕೊಳ್ಳಲು ಆಗಸ್ಟ್ 1 ರಿಂದ ತೀವ್ರವಾದ ಡ್ರೈವ್ ಪ್ರಾರಂಭವಾಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಆಯುಷ್ಮಾನ್ ಸಭಾ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಸಮಿತಿಯ ನೇತೃತ್ವದಲ್ಲಿ ಗ್ರಾಮ ಮಟ್ಟದ ಅಭಿಯಾನವಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಆರೋಗ್ಯ ಯೋಜನೆಗಳ ಪ್ರಯೋಜನಗಳು ಉದ್ದೇಶಿತ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸುತ್ತದೆ ಎಂದು ತಿಳಿಸಲಾಗಿದೆ.