Ayushman Card: ಯಾರು ಯಾರಿಗೆ ಸಿಗಲಿದೆ ಮೋದಿ ಅಯುಷ್ಮಾನ್ 3.0 ಕಾರ್ಡ್, ಕೇಂದ್ರದ ಹೊಸ ನಿಯಮ.
ಪ್ರಧಾನಮಂತ್ರಿ ಅಯುಷ್ಮಾನ್ ಯೋಜನೆಗೆ ಯಾರು ಯಾರು ಅರ್ಹರು.
Ayushman Card Eligibility: ದೇಶದ ಬಡವರಿಗಾಗಿ ಹಾಗೂ ನಿರ್ಗತಿಕ ವರ್ಗದವರಿಗಾಗಿ ಕೇಂದ್ರದ ಮೋದಿ ಸರ್ಕಾರ Ayushman Bharat ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ದೇಶದ ಕೋಟ್ಯಾಂತರ ಬಡವರು ಪ್ರಯೋಜನ ಪಡೆಯಲಿದ್ದಾರೆ.
ಈ ಆಯುಷ್ಮನ್ ಭಾರತ್ ಯೋಜನೆಯ ಅಡಿಯಲ್ಲಿ ಸಾಕಷ್ಟು ಬಡಜನರು ಆರೋಗ್ಯ ಸವಲತ್ತುಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಈ ಆರೋಗ್ಯ ಯೋಜನೆಯು ಅರ್ಹರಿಗೆ ಮಾತ್ರ ಲಭ್ಯವಾಗಲಿದೆ.
Pradhan Mantri Ayushman Bharat
ಸರ್ಕಾರವು ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿಯನ್ನು ಹೊಂದಿದೆ. ದೇಶದ ಜನರು ಆಯುಷ್ಮನ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವ ಮೂಲಕ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. ಆದರೆ ಈ ಆಯುಷ್ಮನ್ ಭಾರತ್ ಯೋಜನೆಯ ಲಾಭ ಪಡೆಯಲು ಕೆಲವರು ಮಾತ್ರ ಅರ್ಹರಾಗಿರುತ್ತಾರೆ. Ayushman Bharat ಯೋಜನೆಯ ಲಾಭ ಪಡೆಯಲು ಯಾರು ಅರ್ಹರು ಎನ್ನುವ ಬಗ್ಗೆ ವಿವರ ಇಲ್ಲಿದೆ.
ಯಾರು ಯಾರಿಗೆ ಸಿಗಲಿದೆ ಮೋದಿ ಆಯುಷ್ಮಾನ್ 3.0 ಕಾರ್ಡ್
*ಭೂಮಿಯನ್ನು ಹೊಂದಿಲ್ಲದವರು, ಮನೆ ಇಲ್ಲದವರು, ದಿನಗೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಅಥವಾ ಪಂಗದಿಂದ ಬಂದವರು ಆಯುಷಮಂ ಯೋಜನೆಯಡಿ ಪ್ರಯೋಜನವನ್ನು ಪಡೆಯಬಹುದು.
*Ayushman Bharat ಯೋಜನೆಯ ಮೂಲಕ BPL Ration Card ಹೊಂದಿರುವವರು ಮತ್ತು ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
*ಎಪಿಎಲ್ ಕಾರ್ಡ್ ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರ್ಕಾರೀ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ. ವರೆಗೆ ಪಡೆಯಬಹುದಾಗಿದೆ.
ಆಯುಷ್ಮನ್ ಭಾರತ್ ಯೋಜನೆಗೆ ನೀವು ಅರ್ಹರೇ ಎನ್ನುವುದನ್ನು ಪರಿಶೀಲಿಸಿಕೊಳ್ಳುವ ವಿಧಾನ
*ಆಯುಷ್ಮನ್ ಭಾರತ್ ಯೋಜನೆಯ ಅರ್ಹತೆ ಪರಿಶೀಲಿಸಿಕೊಳ್ಳಲು ನೀವು ಮೊದಲು www.mera.pmjay.gov.in ಪಿಎಂ ಜನ ಆರೋಗ್ಯ ಯೋಜನೆಯ ಅಧಿಕ್ರತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
* ನಂತರ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚ್ಯಾ ಕೋಡ್ ಹಾಕಿದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
*OTP ನಮೂದಿಸಿದ ನಂತರ ನೀವು ನಿಮ್ಮ ಜಿಲ್ಲೆ ಹಾಗೂ ಊರು, ನಿಮ್ಮ ಹೆಸರು ಹಾಗೂ ನಿಮ್ಮ ತಂದೆಯ ಹೆಸರನ್ನು ನಮೂದಿಸುವ ಮೂಲಕ ನೀವು ಸುಲಭವಾಗಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬಹುದು.