Ayushman Card: ಆಯುಷ್ಮಾನ್ ಕಾರ್ಡ್ ಇದ್ದವರಿಗೆ ಇನ್ನೊಂದು ಗುಡ್ ನ್ಯೂಸ್, ಮೋದಿ ಸರ್ಕಾರದ ಇನ್ನೊಂದು ಘೋಷಣೆಗೆ ಸಿದ್ಧತೆ

ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಇನ್ನುಮುಂದೆ ಸಿಗಲಿದೆ ಈ ಸೇವೆ

Ayushman Card Health Insurance: ದೇಶದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ಕಾರ್ಡ್ (Ayushman Card) ವ್ಯವಸ್ಥೆ ಬಹಳ ಉತ್ತಮ ಆದ ಯೋಜನೆ ಆಗಿದೆ. ಆಯುಷ್ಮನ್ ಯೋಜನೆಯಡಿ ಕೋಟ್ಯಂತರ ಜನರು ಸರ್ಕಾರದಿಂದ ಉಚಿತ ಚಿಕೆತ್ಸೆ ಪಡೆಯುತ್ತಿದ್ದು, ಯೋಜನೆಯ ಫಲಾನುಭವಿಗಳಿಗೆ ಈ ಸುದ್ದಿ ಬಹಳ ಉಪಯುಕ್ತಕರ ಆಗಿದೆ.

ಫೆಬ್ರವರಿ 1 ರಂದು ಸರ್ಕಾರ ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಆಯುಷ್ಮಾನ್ ಭಾರತ್‌ ನ ಕೋಟ್ಯಂತರ ಫಲಾನುಭವಿಗಳಿಗೆ ಒಳ್ಳೆಯ ಸುದ್ದಿ ಬರಲಿದೆ ಎಂದು ಹೇಳಬಹುದು. ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ‘ಆಯುಷ್ಮಾನ್ ಭಾರತ್ ಯೋಜನೆ’ ಅಡಿಯಲ್ಲಿ ಸರ್ಕಾರವು ಒದಗಿಸುವ ವಿಮಾ ರಕ್ಷಣೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸಿದ್ಧತೆಗಳು ನಡೆಯುತ್ತಿವೆ ಎಂಬ ವರದಿ ಹೊರಬಿದ್ದಿದೆ.

Ayushman Card Latest Update
Image Credit: Jobavsar

ಆಯುಷ್ಮಾನ್ ಯೋಜನೆಯ ಬಗ್ಗೆ ಸಂಪೂರ್ಣ ವಿವರ

ಆಯುಷ್ಮಾನ್ ಭಾರತ ಸರ್ಕಾರದ ಒಂದು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಆರೋಗ್ಯ ನೀತಿ-2017 ರ ಅಡಿಯಲ್ಲಿ ಸೆಪ್ಟೆಂಬರ್ 23, 2018 ರಂದು ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ, 16 ರಿಂದ 59 ವರ್ಷ ವಯಸ್ಸಿನವರಿಗೆ ಪಿಎಂಜೆಎವೈ ಯೋಜನೆಯನ್ನು ಆರಂಭಿಸಲಾಗಿದೆ.

ಈ ಯೋಜನೆಯಡಿ ಇದುವರೆಗೆ 25.21 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 30 ಕೋಟಿ ಮೀರುವ ನಿರೀಕ್ಷೆ ಇದೆ. ಇದರ ಅಡಿಯಲ್ಲಿ ಫಲಾನುಭವಿಗಳು 5.68 ಕೋಟಿಗೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆಯುಷ್ಮಾನ್ ಭಾರತ್ ಅಡಿಯಲ್ಲಿ, ಆರೋಗ್ಯ ಸಂಬಂಧಿತ ಸೇವೆಗಳನ್ನು ಒದಗಿಸಲು 26,617 ಆಸ್ಪತ್ರೆಗಳ ಜಾಲವನ್ನು ಪಟ್ಟಿ ಮಾಡಲಾಗಿದೆ.

Join Nadunudi News WhatsApp Group

ಆಯುಷ್ಮಾನ್ ಯೋಜನೆಯಡಿ ವಿಮಾ ಸೌಲಭ್ಯ ಇದೆ

ಪ್ರಸ್ತುತ, ಈ ಯೋಜನೆಯಡಿ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ. ಈ ವಿಮಾ ರಕ್ಷಣೆಯನ್ನು ಶೇ.50 ರಷ್ಟು ಹೆಚ್ಚಿಸುವಂತೆ ಸೂಚಿಸಲಾಗಿದೆ. ಈ ಕುರಿತು ನಿರ್ಧಾರ ಕೈಗೊಂಡ ಬಳಿಕ ಆಯುಷ್ಮಾನ್ ಭಾರತ್ ವ್ಯಾಪ್ತಿ ಹೆಚ್ಚಿಸುವ ಕುರಿತು ಬಜೆಟ್ ನಲ್ಲಿ ಘೋಷಣೆಯಾಗಬಹುದು. ಆದರೆ ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.

Ayushman Card Health Insurance
Image Credit: Business-standard

ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ಆಯುಷ್ಮಾನ್ ಭಾರತ್ ವೆಬ್‌ಸೈಟ್ mera.pmjay.gov.in ಗೆ ಲಾಗಿನ್ ಮಾಡಿ. ಈಗ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪರದೆಯ ಮೇಲೆ ನೀಡಲಾದ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಬರುವ OTP ಅನ್ನು ನಮೂದಿಸಿ, ಅದು ನಿಮ್ಮನ್ನು PMJAY ಲಾಗಿನ್ ಪರದೆಗೆ ಕರೆದೊಯ್ಯುತ್ತದೆ. ಈಗ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುತ್ತಿರುವ ರಾಜ್ಯವನ್ನು ಆಯ್ಕೆ ಮಾಡಿ.

ನೀವು ಅರ್ಹತಾ ಮಾನದಂಡಗಳು, ಮೊಬೈಲ್ ಸಂಖ್ಯೆ, ಹೆಸರು, ರೇಷನ್ ಕಾರ್ಡ್ ಸಂಖ್ಯೆ ಇತ್ಯಾದಿಗಳನ್ನು ಹೇಗೆ ಪರಿಶೀಲಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ. ಇದೀಗ ನಿಮ್ಮ ಹೆಸರು ಅಲ್ಲಿ ಗೋಚರಿಸುತ್ತದೆ. ‘ಕುಟುಂಬ ಸದಸ್ಯರು’ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಫಲಾನುಭವಿಯ ವಿವರಗಳನ್ನು ಪರಿಶೀಲಿಸಬಹುದು. ಇದರ ಹೊರತಾಗಿ, ಪಟ್ಟಿ ಮಾಡಲಾದ ಆರೋಗ್ಯ ರಕ್ಷಣೆ ಒದಗಿಸುವವರನ್ನು (EHCP) ಸಂಪರ್ಕಿಸುವ ಮೂಲಕ ಒಬ್ಬರು ಅರ್ಹತೆಯನ್ನು ಪರಿಶೀಲಿಸಬಹುದು.

Join Nadunudi News WhatsApp Group