BPL Card Benefits: BPL ಕಾರ್ಡ್ ಇರುವವರಿಗೆ ಸರ್ಕಾರದಿಂದ ಯಾವ ಯಾವ ಸೇವೆ ಉಚಿತವಾಗಿ ಸಿಗಲಿದೆ…? ಇಲ್ಲಿದೆ ಡೀಟೇಲ್ಸ್
ಬಡ ವರ್ಗದ ಜನರಿಗಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಹೊಸ ಸೇವೆ ಉಚಿತವಾಗಿ ಸಿಗಲಿದ್ದು, ಅರ್ಹರು ಇಂದೇ ಅರ್ಜಿ ಹಾಕಿ
BPL Ration Card Benefits: ದೇಶದಲ್ಲಿ ಬಡ ಹಾಗು ಮಧ್ಯಮ ವರ್ಗದ ಜನರಿಗಾಗಿ ರಾಜ್ಯ ಹಾಗು ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದ ಬಜೆಟ್ ನಲ್ಲಿ ಬಡ ಜನರಿಗಾಗಿ ಸೌಲಭ್ಯ ನೀಡಲು ಸರಕಾರ ಅನುಮೋದನೆ ಮಾಡಿದೆ. ಇಂತಹ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಪಡಿತರ ಚೀಟಿ ಬಹಳ ಮುಖ್ಯ ಆಗಿದೆ.
ಪಡಿತರ ಚೀಟಿ ಇಲ್ಲದವರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ. ಹಾಗೆಯೇ ದೇಶದ ಜನರ ಆರೋಗ್ಯ ಬಹಳ ಮುಖ್ಯ ಆಗಿದ್ದು, ಆರೋಗ್ಯ ಸಮಸ್ಯೆಗಳ ಬಗೆಹರಿಕೆಗಾಗಿ ಸರ್ಕಾರ ಕೆಲವು ಆರೋಗ್ಯ ವಿಮಾ ಯೋಜನೆಯನ್ನು ಪರಿಚಯಿಸಿದೆ.
ಆರೋಗ್ಯ ವಿಮಾ ಬಗ್ಗೆ ಮಾಹಿತಿ
ಪ್ರತಿಯೊಬ್ಬರಿಗೂ ಆರೋಗ್ಯ ವಿಮಾ ಮುಖ್ಯ ಆಗಿದ್ದು, ಅನಾರೋಗ್ಯ ಸಂದರ್ಭದಲ್ಲಿ ಈ ವಿಮೆಗಳು ಸಹಾಯ ಆಗಲಿದೆ. ಹಾಸ್ಪಿಟಲ್ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಈ ವಿಮೆಗಳು ಬಹಳ ಸಹಾಯಕ ಆಗುತ್ತದೆ. ಈ ಆರೋಗ್ಯ ವಿಮೆಯಲ್ಲಿ ಆಯುಷ್ಮಾನ್ ಯೋಜನೆ ಒಂದಾಗಿದ್ದು, ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಬಹುದು. ಹಾಗಾಗಿ ಪ್ರತಿಯೊಬ್ಬರು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಿ .
ಆಯುಷ್ಮಾನ್ ಕಾರ್ಡ್ ನಿಂದ ಆಗುವ ಪ್ರಯೋಜನಗಳು
ಆಯುಷ್ಮಾನ್ ಕಾರ್ಡ್ ಇದು ಆರೋಗ್ಯ ವಿಮಾ ಕಾರ್ಡ್ ಆಗಿದ್ದು, ಅನಾರೋಗ್ಯ ಸಮಯದಲ್ಲಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಗಾಗಿ ಪ್ರವೇಶ ಪಡೆದು ಅಡ್ಮಿಟ್ ಆದರೆ ಈ ಕಾರ್ಡ್ ಮೂಲಕ ಉಚಿತ ಚಿಕಿತ್ಯೆ ಪಡೆಯಬಹುದಾಗಿದೆ. ಹಾಸ್ಪಿಟಲ್ ಗೆ ಹೋಗುವ ಮೂರೂ ದಿನದ ಮೊದಲು ಹಾಗು ನಂತರದ 15 ದಿನಗಳ ವರೆಗಿನ ಸಂಪೂರ್ಣ ಖರ್ಚು ವೆಚ್ಚಗಳನ್ನು ಈ ಮೂಲಕ ಸಂಪೂರ್ಣವಾಗಿ ಭರಿಸಬಹುದು. ಒಂದು ಕುಟುಂಬಕ್ಕೆ ಐದು ಲಕ್ಷ ತನಕ ಉಚಿತ ಚಿಕಿತ್ಯೆ ಪಡೆಯಬಹುದಾಗಿದೆ.
ಆಯುಷ್ಮಾನ್ ಕಾರ್ಡ್ ಪಡೆಯಲು ಬೇಕಾಗಿರುವ ದಾಖಲೆಗಳು
ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಹಾಕಲು ಕುಟುಂಬದ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಸ್ಥಳದ ಪುರಾವೆ, ಬ್ಯಾಂಕ್ ಖಾತೆಯ ವಿವರ ಕಡ್ಡಾಯ ಆಗಿರುತ್ತದೆ.
ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳುವ ಬಗ್ಗೆ ವಿವರ
BPL ಕಾರ್ಡ್ ಹೊಂದಿರುವವರು ಸರಕಾರದ ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಹಾಕಬಹುದಾಗಿದೆ. ನಿಮ್ಮಲಿ BPL ಕಾರ್ಡ್ ಇದ್ದರೇ https://bis.pmjay.gov.in/ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಹತ್ತಿರದ ಗ್ರಾಮ್ ಒನ್ ಪ್ರಧಾನ ಮಂತ್ರಿ ಜನಾರೋಗ್ಯ ಕೇಂದ್ರ ಗಳಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇದೆ. ಬಡ ಜನರ ಆರೋಗ್ಯಕ್ಕಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರ ಗಳು ಜಂಟಿಯಾಗಿ ಆರಂಭಿಸಿದ ಯೋಜನೆ ಇದಾಗಿದೆ. ಆಯುಷ್ಮಾನ್ ಕಾರ್ಡ್ ಗಾಗಿ ರಾಜ್ಯ ಸರ್ಕಾರ 66 % ಹಾಗು ಕೇಂದ್ರ ಸರ್ಕಾರ 34 % ನಷ್ಟು ಅನುದಾನ ನೀಡುತ್ತಿದೆ.