Ayushman Card: ಮೋದಿ ಸರ್ಕಾರದಿಂದ ಉಚಿತವಾಗಿ ಸಿಗಲಿದೆ 5 ಲಕ್ಷ ರೂ, 24 ಘಂಟೆಯಲ್ಲಿ ಸಿಗಲಿದೆ ಕಾರ್ಡ್

ಕೇವಲ 24 ಗಂಟೆಯಲ್ಲಿ ಸಿಗಲಿದೆ Ayushman Card

Ayushman Card Online Apply Process: ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಪ್ರಧಾನ ಮಂತ್ರಿ Ayushman Bharat ಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಈ ಯೋಜನೆಯಡಿ ದೇಶದ ಬಡ ಮತ್ತು ನಿರ್ಗತಿಕ ವರ್ಗದವರು ಉಚಿತ ಚಿಕಿತ್ಸೆಯನ್ನು ಪಡೆಯಬಹುದುದಾಗಿದೆ. ಅರ್ಹ ಫಲಾನುಭವಿಗಳು ವಾರ್ಷಿಕವಾಗಿ ತಲಾ 5,00,000 ರೂ. ಗಳ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಆಯುಷ್ಮಾನ್ ಭಾರತ್ ಯೋಜನೆಯ ಅರ್ಜಿ ಸಲ್ಲಿಕೆಯ ಬಗ್ಗೆ ನಿಮಗೆ ಮಾಹಿತಿ ತಿಳಿದಿಲ್ಲವಾದರೆ ಈ ಲೇಖನದಲ್ಲಿ ನಾವೀಗ ಇದರ ಉಚಿತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಯಾವುದೇ ಕಚೇರಿಗೆ ಭೇಟಿ ನೀಡದೆಯೇ ಮನೆಯಲ್ಲಿಯೇ ಉಚಿತ ಚಿಕಿತ್ಸೆಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಅದು ಹೇಗೆ..? ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Ayushman Card Online Apply Process
Image Credit: Rightsofemployees

5 ಲಕ್ಷ ಉಚಿತ ಚಿಕಿತ್ಸೆ ಪಡೆಯಲು ಚಿಂತಿಸಬೇಡಿ
ಕೇದ್ರದಿಂದ ಉಚಿತ ಚಿಕಿತ್ಸೆಯ ಅಡಿಯಲ್ಲಿ 5 ಲಕ್ಷ ರೂ. ಪಡೆಯಲು Ayushman Card ಅನ್ನು ಹೊಂದುವುದು ಮುಖ್ಯವಾಗಿದೆ. ಕೇಂದ್ರ ಸರ್ಕಾರ ಆಯುಷ್ಮನ್ ಕಾರ್ಡ್ ಪಡೆಯಲು ಕೆಲವು ಅರ್ಹತಾ ಮಾನದಂಡವನ್ನು ವಿಧಿಸುವುದರ ಜೊತೆಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ನೀವು ಆಯುಷ್ಮನ್ ಕಾರ್ಡ್ ಪಡೆಯಲು ಹೆಚ್ಚು ಚಿಂತಿಸುವ ಅಗತ್ಯ ಇಲ್ಲ.

ಅರ್ಜಿದಾರರು Aadhaar card, Ration card, Mobile number, Address proof ದಾಖಲೆಗಳನ್ನೂ ನೀಡುವ  Ayushman Card ಅನ್ನು ಪಡೆಯಬಹುದಾಗಿದೆ. ನಿಮ್ಮ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ನೀವು ಈ ಯೋಜನೆಗೆ Online ಅಥವಾ Offline ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ನೀವು ಮನೆಯಲ್ಲೇ ಕುಳಿತು ಅಯುಷ್ಮಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಈ ಕೆಳಗಿನ ಹಂತವನ್ನು ಅನುಸರಿಸಿ.

Ayushman Card Online Apply
Image Credit: Morningnewsindia

ಕೇವಲ 24 ಗಂಟೆಯಲ್ಲಿ ಸಿಗಲಿದೆ ಅಯುಷ್ಮಾನ್ ಕಾರ್ಡ್
•ಅಧಿಕೃತ ವೆಬ್ ಸೈಟ್ http://beneficiary.nha.gov.in ಲಾಗಿನ್ ಆಗುವ ಮೂಲಕ ಸುಲಭವಾಗಿ ಆಯುಷ್ಮಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

•ಅಲ್ಲಿ ನೀಡಲಾದ ಫಲಾನುಭವಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್‌ ನಲ್ಲಿ ಸ್ವೀಕರಿಸಿದ OTP ಅನ್ನು ಪರಿಶೀಲಿಸಿ.

•ಅಲ್ಲಿ ಆಯುಷ್ಮಾನ್ ಕಾರ್ಡ್‌ ಗಾಗಿ ರೇಷನ್ ಕಾರ್ಡ್ ಆಯ್ಕೆಯನ್ನು ನೀವು ನೋಡುತ್ತೀರಿ. ನಿಮ್ಮ ಕುಟುಂಬದ ಹೆಸರನ್ನು ಇಲ್ಲಿ ಹುಡುಕಿ ನಂತರ ಕಾರ್ಡ್ ಅನ್ನು ಯಾರ ಹೆಸರಿನಲ್ಲಿ ಮಾಡಬೇಕೋ ಅವರ ಹೆಸರು ಮತ್ತು ವಿವರಗಳನ್ನು ನಮೂದಿಸಿ.

•ವಿವರಗಳಲ್ಲಿ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಪರಿಶೀಲಿಸಿ. ಸಮ್ಮತಿಯ ನಮೂನೆಯು ತೆರೆಯುತ್ತದೆ, ಅದರ ಎಲ್ಲಾ ಆಯ್ಕೆಗಳನ್ನು ಟಿಕ್ ಮಾಡಿ ಮತ್ತು ಬಲಭಾಗದಲ್ಲಿರುವ ಅನುಮತಿಸು ಬಟನ್ ಕ್ಲಿಕ್ ಮಾಡಬೇಕು.

•ಬಾಕ್ಸ್‌ ನ ಕೆಳಗೆ E-KYC ಆಧಾರ್ OTP ಆಯ್ಕೆಯನ್ನು ಆಯ್ಕೆಮಾಡಿ. ಆಧಾರ್ ಪರಿಶೀಲನೆಯನ್ನು ನಿರ್ವಹಿಸಿದ ನಂತರ, ಪುಟದ ಬಲಭಾಗದಲ್ಲಿರುವ ಕ್ಯಾಪ್ಚರ್ ಫೋಟೋ ಕೆಳಗಿನ ಐಕಾನ್ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.

•ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯಿರಿ ಮತ್ತು ಪ್ರೊಸೀಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

•ನಂತರ ಫಾರ್ಮ್‌ ನಲ್ಲಿ ನೀಡಲಾದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ಸರಿ ಬಟನ್ ಕ್ಲಿಕ್ ಮಾಡಿದರೆ ನೀವು ಸುಲಭವಾಗಿ ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು.

Ayushman Card Latest News
Image Credit: Prabhatkhabar

Join Nadunudi News WhatsApp Group