Ayushman Apply: ಮೊಬೈಲ್ ಮೂಲಕ ಸುಲಭವಾಗಿ ಆಯುಷ್ಮನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ, ಇಲ್ಲಿದೆ ಸುಲಭ ವಿಧಾನ.
ಆನ್ಲೈನ್ ಮೂಲಕ ನೀವು ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
Ayushman Card Online Apply: ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತ ದೇಶದ ಜನತೆಗೆ ಆರ್ಥಿಕವಾಗಿ ಬೆಂಬಲವನ್ನು ನೀಡುತ್ತಿದೆ. ದೇಶದ ಬಡ ನಾಗರೀಕರಿಗಾಗಿ ಹಾಗೂ ನಿರ್ಗತಿಕರಿಗಾಗಿ ಕೇಂದ್ರ ಸರ್ಕಾರ (Central Govt) ಕಲ್ಯಾಣ ಯೋಜನೆಯನ್ನು ಪರಿಚಯಿಸುತ್ತಿವೆ. ಬಡವರು ಹಾಗೂ ನಿರ್ಗತಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ.
ಇನ್ನು ಇತ್ತೀಚೆಗಷ್ಟೇ ಕೇಂದ್ರದ ಮೋದಿ ಸರ್ಕಾರ Ayushman Bharat ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಡಿ ಅರ್ಹರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆಯ ಬಗ್ಗೆ ಸಾಕಷ್ಟು ಅಪ್ಡೇಟ್ ನೀಡಿದೆ. ಸದ್ಯ ನೀವು ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಹರಾಗಿದ್ದರೆ, ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಲು ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ಆನ್ಲೈನ್ ಸುಲಭ ಮಾರ್ಗದ ಮೂಲಕ ನೀವು ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
Pradhan Mantri Ayushman Bharat
Ayushman Bharat ಯೋಜನೆಯ ಮೂಲಕ BPL Ration Card ಹೊಂದಿರುವವರು ಮತ್ತು ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
APL ಕಾರ್ಡ್ ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರ್ಕಾರೀ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ. ವರೆಗೆ ಪಡೆಯಬಹುದಾಗಿದೆ. ಭೂಮಿಯನ್ನು ಹೊಂದಿಲ್ಲದವರು, ಮನೆ ಇಲ್ಲದವರು, ದಿನಗೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಅಥವಾ ಪಂಗಡದಿಂದ ಬಂದವರು ಆಯುಷ್ಮಾನ್ ಯೋಜನೆಯಡಿ ಪ್ರಯೋಜನವನ್ನು ಪಡೆಯಬಹುದು.
ಮೊಬೈಲ್ ಮೂಲಕ ಸುಲಭವಾಗಿ ಆಯುಷ್ಮನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ
*ಆನ್ ಲೈನ್ ನಲ್ಲಿ ಆಯುಷ್ಮಾನ್ ಕಾರ್ಡ್ ಪಡೆಯಲು ಮೊದಲು http://beneficiary.nha.gov.in ಲಾಗಿನ್ ಆಗಬೇಕು.
*ಅಲ್ಲಿ ನೀಡಲಾದ ಫಲಾನುಭವಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್ ನಲ್ಲಿ ಸ್ವೀಕರಿಸಿದ OTP ಅನ್ನು ಪರಿಶೀಲಿಸಿ.
*ಅಲ್ಲಿ ಆಯುಷ್ಮಾನ್ ಕಾರ್ಡ್ ಗಾಗಿ ರೇಷನ್ ಕಾರ್ಡ್ ಆಯ್ಕೆಯನ್ನು ನೀವು ನೋಡುತ್ತೀರಿ. ನಿಮ್ಮ ಕುಟುಂಬದ ಹೆಸರನ್ನು ಇಲ್ಲಿ ಹುಡುಕಿ ನಂತರ, ಕಾರ್ಡ್ ಅನ್ನು ಯಾರ ಹೆಸರಿನಲ್ಲಿ ಮಾಡಬೇಕೋ ಅವರ ಹೆಸರು ಮತ್ತು ವಿವರಗಳನ್ನು ನಮೂದಿಸಿ.
*ವಿವರಗಳಲ್ಲಿ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಪರಿಶೀಲಿಸಿ. ಸಮ್ಮತಿಯ ನಮೂನೆಯು ತೆರೆಯುತ್ತದೆ, ಅದರ ಎಲ್ಲಾ ಆಯ್ಕೆಗಳನ್ನು ಟಿಕ್ ಮಾಡಿ ಮತ್ತು ಬಲಭಾಗದಲ್ಲಿರುವ ಅನುಮತಿಸು ಬಟನ್ ಕ್ಲಿಕ್ ಮಾಡಬೇಕು.
*ಆಯುಷ್ಮಾನ್ ಕಾರ್ಡ್ ಅನ್ನು ಯಾರ ಹೆಸರಿನಲ್ಲಿ ಮಾಡಬೇಕೋ ಅವರ ಹೆಸರನ್ನು ಫಲಾನುಭವಿ ಎಂದು ಪರದೆಯ ಮೇಲೆ ನೀಲಿ ಬಾಕ್ಸ್ ನಲ್ಲಿ ಪ್ರದರ್ಶಿಸಲಾಗುತ್ತದೆ.
*ಬಾಕ್ಸ್ ನ ಕೆಳಗೆ E-KYC ಆಧಾರ್ OTP ಆಯ್ಕೆಯನ್ನು ಆಯ್ಕೆಮಾಡಿ. ಆಧಾರ್ ಪರಿಶೀಲನೆಯನ್ನು ನಿರ್ವಹಿಸಿದ ನಂತರ, ಪುಟದ ಬಲಭಾಗದಲ್ಲಿರುವ ಕ್ಯಾಪ್ಚರ್ ಫೋಟೋ ಕೆಳಗಿನ ಐಕಾನ್ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
*ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯಿರಿ ಮತ್ತು ಪ್ರೊಸೀಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
*ನಂತರ ಫಾರ್ಮ್ ನಲ್ಲಿ ನೀಡಲಾದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ಸರಿ ಬಟನ್ ಕ್ಲಿಕ್ ಮಾಡಿದರೆ ನೀವು ಸುಲಭವಾಗಿ ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು.