Ads By Google

Kantara: ಬಾಹುಬಲಿ ದಾಖಲೆ ಮುರಿದ ಕಾಂತಾರ, ಹೊಸ ಮೈಲಿಗಲ್ಲು

Baahubali record breaking Kantara, new milestone

Image Source: India Today

Ads By Google

Kantara: ಕನ್ನಡ ಚಿತ್ರರಂಗದ ಸೂಪರ್ ಸಿನಿಮಾ ಕಾಂತಾರ ಚಿತ್ರ ಗಳಿಕೆಯ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದ್ದು ಈಗ ಈ ಚಿತ್ರವು ಐದನೇ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ(Indian) ಚಿತ್ರವಾಗಿದೆ. ಹೌದು ಇದು ಬಾಹುಬಲಿ 2(Bahubali 2): ದಿ ಕನ್‌ಕ್ಲೂಷನ್(The Conclusion) ದಾಖಲೆಯನ್ನು ಮುರಿದಿದ್ದು ನಟ ನಿರ್ದೇಶಕ(Director) ರಿಷಬ್ ಶೆಟ್ಟಿ (Rishab Shetty)ಅಭಿನಯದ ಕಾಂತಾರ ಚಿತ್ರ ಐದನೇ ವಾರಾಂತ್ಯದಲ್ಲಿ ಸುಮಾರು 29 ಕೋಟಿ ರೂ ಗಳಿಸಿದೆ.

ಹೌದು ಪ್ರಭಾಸ್(Prabhas) ಅಭಿನಯದ ಬಾಹುಬಲಿ 2 ಸುಮಾರು 250 ಕೋಟಿ ರೂ.ಗೆ ನಿರ್ಮಾಣಗೊಂಡಿದ್ದರೆ ಇತ್ತ ಐದನೇ ವಾರದಲ್ಲಿ ಸುಮಾರು 24.50 ಕೋಟಿ ರೂ ಗಳಿಕೆ ಮಾಡಿತ್ತು. ಐದನೇ ವಾರಾಂತ್ಯದಲ್ಲಿ ಕಾಂತಾರ ಗಳಿಸಿದಷ್ಟು ಸಾಧನೆ ಮಾಡಲು ಯಾವುದೇ ಭಾರತೀಯ ಚಿತ್ರಕ್ಕೆ ಸಾಧ್ಯವಾಗಿಲ್ಲ.ಅಂದಹಾಗೆ ಚಿತ್ರದ ಐದನೇ ವಾರಾಂತ್ಯದ ಕಲೆಕ್ಷನ್ ದಿನದ ಸಂಗ್ರಹ ನೋಡುವುದಾದರೆ

5ನೇ ಶುಕ್ರವಾರ 5.65 ಕೋಟಿ ರೂ
5ನೇ ಶನಿವಾರ 10.55 ಕೋಟಿ ರೂ
5ನೇ ಭಾನುವಾರ 12.9 ಕೋಟಿ ರೂ
ಒಟ್ಟು ವಾರಾಂತ್ಯ 29.1 ಕೋಟಿ ರೂ

Image Source: Times Of India

ಹೌದು 5ನೇ ಸೋಮವಾರದಂದು ಚಿತ್ರದ ಕಲೆಕ್ಷನ್ ಕೂಡ ಭರ್ಜರಿಯಾಗಿದ್ದು ಈ ಚಿತ್ರವು ಅಕ್ಟೋಬರ್ 31 ರಂದು ಮೊದಲ ದಿನದ ಸಂಗ್ರಹಣೆಗಿಂತ ಎರಡು ಪಟ್ಟು ಹೆಚ್ಚು ಗಳಿಸಿತು. ಇನ್ನು ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ದಿನವೇ ಸರಿ ಸುಮಾರು 1.95 ಕೋಟಿ ರೂಪಾಯಿ ಗಳಿಸಿದ್ದು ಆದರೆ 32ನೇ ದಿನ ಅಂದರೆ 5ನೇ ಸೋಮವಾರದಂದು ಸುಮಾರು 4.50 ಕೋಟಿ ಕಲೆಕ್ಷನ್ ಆಗಿದೆ.

ಇನ್ನು 5ನೇ ಸೋಮವಾರದಂದು ರಾಮ ಸೇತು ಗಿಂತ ಹೆಚ್ಚು ಗಳಿಸುತ್ತಿದೆ ಕಲೆಕ್ಷನ್ ವಿಚಾರದಲ್ಲಿ ರಿಷಬ್ ಶೆಟ್ಟಿ ಕಾಂತಾರ ಮುಂದಿದ್ದು ಅಕ್ಷಯ್ ಕುಮಾರ್ ಅಭಿನಯದ ರಾಮ್ ಸೇತು ಮತ್ತು ಅಜಯ್ ದೇವಗನ್ ಅಭಿನಯದ ಥ್ಯಾಂಕ್ ಗಾಡ್ ಸಿನಿಮಾಗಳು 7 ದಿನಗಳ ಹಿಂದೆ ಬಿಡುಗಡೆಯಾಗಿದ್ದು ಈ ಎರಡೂ ಚಿತ್ರಗಳು ಕೂಡ ಸೋಮವಾರದ ಪರೀಕ್ಷೆಯಲ್ಲಿ ಹೀನಾಯವಾಗಿ ಸೋತಿವೆ.

Image Source: Times Of India

ಹೌದು ಅಭಿಷೇಕ್ ಶರ್ಮಾ ನಿರ್ದೇಶನದ ರಾಮಸೇತು ಸೋಮವಾರದಂದು ಸುಮಾರು 2.70 ಕೋಟಿ ಕಲೆಕ್ಷನ್ ಮಾಡಿದ್ದರೆ ಇಂದ್ರಕುಮಾರ್ ನಿರ್ದೇಶನದ ಥ್ಯಾಂಕ್ ಗಾಡ್ ಗಳಿಕೆ 1.65 ಕೋಟಿಗೆ ಇಳಿದಿದೆ .ಕಾಂತಾರ ಸುಮಾರು 16 ಕೋಟಿ ರೂ.ಗೆ ನಿರ್ಮಾಣವಾಗಿದ್ದು ಇದುವರೆಗೆ ವಿಶ್ವಾದ್ಯಂತ ಸುಮಾರು 293 ಕೋಟಿ ರೂ ಕಲೆಕ್ಷನ್‌ ಮಾಡಿದೆ.

ಹೌದು ಅದು ಸುಮಾರು 277 ಕೋಟಿ ರೂಪಾಯಿಗಳು ಲಾಭ ಮಾಡಿದ್ದು ಅಂದರೆ ಇದು ಸುಮಾರು 1731 ಪ್ರತಿಶತದಷ್ಟು ಲಾಭಗಳಿದೆ ಮತ್ತು ಬಹುಶಃ ಹೆಚ್ಚು ಲಾಭದಾಯಕ ಕನ್ನಡ ಚಿತ್ರ ಎಂದು ಸಾಬೀತಾಗಿದೆ.

ಇನ್ನು ಲಾಭದ ವಿಚಾರದಲ್ಲಿ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಕಾಂತಾರ ಸೋಲಿಸಿದ್ದು ಸುಮಾರು 100 ಕೋಟಿ ರೂಪಾಯಿಗಳಲ್ಲಿ ತಯಾರಾದ ಕೆಜಿಎಫ್ 2 ವಿಶ್ವಾದ್ಯಂತ ಸುಮಾರು 1250 ಕೋಟಿ ರೂಪಾಯಿ ಗಳಿಸಿದೆ. ಅದರ ಪ್ರಕಾರವಾಗಿ ಅದರ ಲಾಭವು 1150 ಕೋಟಿ ರೂಪಾಯಿಗಳು ಅಥವಾ ಶೇಕಡಾ 1150 ರಷ್ಟಿದೆ ಎನ್ನಲಾಗಿದೆ.

Image Source: India Today
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field