Baby Birth: ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗಾಗಿ ಹೊಸ ವ್ಯವಸ್ಥೆ, ಮಕ್ಕಳ ಪೋಷಕರಿಗಾಗಿ ಹೊಸ ವ್ಯವಸ್ಥೆ.

ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗಾಗಿ ಹೊಸ ಬೇಬಿ ಬರ್ತ್ ವ್ಯವಸ್ಥೆಯನ್ನ ಮಾಡಿದೆ ಭರಷಯ ರೈಲ್ವೆ.

Indian Railway Baby Birth: ಭಾರತೀಯ ರೈಲ್ವೆ (Indian Railway) ಇಲಾಖೆಯು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಪ್ರತಿನಿತ್ಯ ಸಾವಿರಾರು ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅವರು ದೂರದ ಸ್ಥಳಗಳಿಗೆ ಹೋಗುತ್ತಾರೆ.

ಆದರೆ ಮಕ್ಕಳೊಂದಿಗೆ ಪ್ರಯಾಣ ಮಾಡುವುದು ಸ್ವಲ್ಪ ಕಷ್ಟ ಎನ್ನಬಹುದು. ಯಾಕೆಂದರೆ ತಾಯಿ ಮಕ್ಕಳು ಸಿಂಗಲ್ ಬರ್ತ್ ನಲ್ಲಿ ಹೊಂದಿಕೊಂಡು ಪ್ರಯಾಣಿಸಬೇಕು. ಹೀಗಾಗಿ ಇದೀಗ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಎಲ್ಲಾ ರೈಲುಗಳಲ್ಲಿ ಬೇಬಿ ಬರ್ತ್‌ಗಳನ್ನು ಅಳವಡಿಲು ನಿರ್ಧರಿಸಿದೆ.

Indian Railway Baby Birth
Image Source: Begusarai

ಭಾರತೀಯ ರೈಲ್ವೆಯಲ್ಲಿ ಬೇಬಿ ಬರ್ತ್ ಅಳವಡಿಕೆ
ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಈ ಬಾರಿ ಮಕ್ಕಳ ಪ್ರಯಾಣಕ್ಕೆ ಸಂಬಂಧಿಸಿದಂತೆ ಬದಲಾವಣೆ ಮಾಡಲಾಗಿದ್ದು ಶೀಘ್ರವೇ ಜಾರಿಗೆ ಬರಲಿದೆ. ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ರೈಲ್ವೆ ಸುಲಭಗೊಳಿಸಿದೆ.

ನೀವು ಕೂಡ ನಿಮ್ಮ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸಲು ಹೊರಟಿದ್ದರೆ, ಈ ಬದಲಾವಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕು. ಐದು ವರ್ಷದೊಳಗಿನ ಮಕ್ಕಳಿಗಾಗಿ ವಿಶೇಷ ಬೇಬಿ ಬರ್ತ್‌ಗಳನ್ನು ಮಾಡಲು ರೈಲ್ವೆ ಇಲಾಖೆ ಅಧ್ಯಯನ ಪ್ರಾರಂಭಿಸಿದೆ. ಶೀಘ್ರದಲ್ಲೇ ಬೇಬಿ ಬರ್ತ್​ ಬಗ್ಗೆ ಎರಡನೇ ಟ್ರಯಲ್ ಆರಂಭಿಸಲಿದೆ.​

Indian Railway Baby Birth
Image Source: India Today

ಭಾರತೀಯ ರೈಲ್ವೆ ಹೊಸ ನಿಯಮ
ಬೇಬಿ ಬರ್ತ್ ಮೊದಲಿಗಿಂತ ಹೆಚ್ಚು ಆರಾಮದಾಯಕವಾಗಿರುತ್ತದೆ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ. ನಿತಿನ್ ದೇವ್ರೇ, ರೈಲು ಪ್ರಯಾಣದ ಸಮಯದಲ್ಲಿ ತಾಯಿ ಮಗುವಿನ ಬರ್ತ್ ನಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಸಮಸ್ಯೆಯಾಗಿತ್ತು ಎಂದು ಹೇಳಿದರು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಬೇಬಿ ಬರ್ತ್​ ಸಿದ್ಧಪಡಿಸಲಾಗಿದೆ.

Join Nadunudi News WhatsApp Group

Indian Railway Baby Birth
Image Source: NDTV.COM

Join Nadunudi News WhatsApp Group