ಹಣ ಯಾರಿಗೆ ತಾನೇ ಬೇಡ ಹೇಳಿ. ಹುಟ್ಟಿದ ಪ್ರತಿಯೊಬ್ಬ ಮಾನವ ಜೀವನ ಮಾಡಬೇಕು ಅಂದರೆ ಹಣ ಬಹಳ ಅವಶ್ಯಕ ಎಂದು ಹೇಳಬಹುದು ಮತ್ತು ಹಣ ಇಲ್ಲ ಈಗಿನ ಕಾಲದಲ್ಲಿ ಜೀವನವನ್ನ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಈಗಿನ ಕಲಾಡ್ನಲ್ಲಿ ಎಷ್ಟೇ ಓದಿದರೂ ಅದಕ್ಕೆ ಸರಿಯಾದ ಸಂಬಳ ಸಿಗುವುದಿಲ್ಲ ಮತ್ತು ಈಗಿನ ಕಾಲದಲ್ಲಿ ಹೆಚ್ಚಿನ ಸಂಬಳವನ್ನ ಪಡೆದುಕೊಳ್ಳಬೇಕು ಅಂದರೆ ಹಲವು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ದುಡಿಯಬೇಕು ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ, ಈ ಪುಟ್ಟ ಮಟಿಗೂ ಒಂದು ತಿಂಗಳಿಗೆ ಬರೋಬ್ಬರಿ 75 ಸಾವಿರ ರೂಪಾಯಿ ಸಂಬಳವನ್ನ ಪಡೆದುಕೊಳ್ಳುತ್ತಿದ್ದು ಈ ಪುಟ್ಟ ಮಾಡುವ ಕೆಲಸ ಏನು ಅನ್ನವುದು ಜನರ ತಲೆಬಿಸಿಗೆ ಕಾರಣವಾಗಿದೆ.
ಸದ್ಯ ಈ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಹಾಗಾದರೆ ಈ ಮಗುವಿಗೆ ಇಷ್ಟು ಮೊತ್ತದ ಸಂಬಳವನ್ನ ಕೊಡುತ್ತಿರುವವರು ಯಾರು ಮತ್ತು ಈ ಮಗು ಮಾಡುತ್ತಿರುವ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ಚಿತ್ರದಲ್ಲಿ ಕಾಣುತ್ತಿರುವ ಮಗುವಿನ ಹೆಸರು ಬ್ರಿಗ್ಸ್. ಅಮೆರಿಕಾದ ವಾಷಿಂಗ್ಟನ್ ನಿವಾಸಿಯಾಗಿರುವ ಈ ಮಗುವಿಗೆ ಸರಿಸುಮಾರು ಒಂದು ವರ್ಷ ವಯಸ್ಸು, ಆದರೆ ಈ ವಯಸ್ಸಿನಲ್ಲಿಯೇ ಈ ಮಗು ತಿಂಗಳಿಗೆ ಏನಿಲ್ಲವೆಂದರೂ 75 ಸಾವಿರ ರೂಪಾಯಿ ಸಂಪಾದನೆ ಮಾಡುತ್ತದೆ.
ಒಂದು ವರ್ಷದ ಈ ಮಗು ಈಗಾಗಲೇ 45 ಹೆಚ್ಚು ದೇಶಗಳನ್ನ ಸುತ್ತಾಡಿ ಬಂದಿದೆ. ಸ್ನೇಹಿತರೆ ಈ ಮಗುವಿನ ತಾಯಿಯ ಹೆಸರು ಜೆಸ್, ಈಕೆ ತನ್ನ ಮಗುವಿನ ವಿವಿಧ ಭಂಗಿಗಳ ಹಲವಾರು ರೀತಿಯ ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಮಗುವಿನ ಆಟೋಟ ಮಾತ್ರವಲ್ಲದೇ ಅದು ಮಲಗುವುದು ಹೇಗೆ, ತಿರುಗಾಟದ ವೇಳೆ ತಾನು ಮಗುವಿಗಾಗಿ ಬಳಸುವ ವಸ್ತುಗಳು ಏನೇನು ಮತ್ತು ಅದನ್ನು ಹೇಗೆ ಉಪಯೋಗಿಸುತ್ತೇನೆ ಮತ್ತು ಇದರಿಂದ ಮಗುವಿಗೆ ಹೇಗೆ ಪ್ರಯೋಜನವಾಗುತ್ತದೆ, ಮಗು ತಿರುಗಾಟದ ವೇಳೆ ಏನೆಲ್ಲಾ ಚೇಷ್ಠೆಗಳನ್ನು ಮಾಡುತ್ತದೆ ಇತ್ಯಾದಿ ಸಂಪೂರ್ಣ ಮಾಹಿತಿಗಳ ವಿಡಿಯೋ ಮಾಡುತ್ತಾಳೆ ಮತ್ತು ಅದನ್ನ ಇನ್ಸ್ಟಾಗ್ರಾಮ್ ಮತ್ತು ಯು ಟ್ಯೂಬ್ ನಲ್ಲಿ ಹಾಕುತ್ತಾಳೆ.
ಇನ್ನು ಈ ಮುದ್ದುಮೊಗದ ಕಂದನ ಚೇಷ್ಠೆ, ತುಂಟಾಟ ಹಾಗೂ ಆಟೋಟಗಳನ್ನು ನೋಡಲು ಜನರು ಕಾತರದಿಂದ ಕಾಯುತ್ತಿರುತ್ತಾರೆ. ಈ ಇನ್ಸ್‌ಸ್ಟಾಗ್ರಾಂನಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್ ಇದ್ದು ಯುಟ್ಯೂಬ್‌ನಲ್ಲಿಯೇ ಸಾವಿರಾರು ಅಭಿಮಾನಿಗಳು ಇದ್ದಾರೆ ಮತ್ತು ಅವರು ಈ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹೀಗೆ ಲಕ್ಷ ಲಕ್ಷ ವೀಕ್ಷಣೆ ಬಂದು ಜಾಹಿರಾತು ಭರಪೂರ ಬಂದು ಕನಿಷ್ಠ 75 ಸಾವಿರ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದಾಳೆ. ಇದು ನಾನು ದುಡಿಯುತ್ತಿರುವುದು ಅಲ್ಲ, ಬದಲಿಗೆ ಇವೆಲ್ಲವೂ ನನ್ನ ಕಂದನಿಗೆ ಸೇರಬೇಕಾದದ್ದು ಎನ್ನುತ್ತಾಳೆ ಜೇಸ್. ಇದು ನಿಜ ಕೂಡ, ಹೀಗೆ ಒಂದು ವರ್ಷದ ಬ್ರಿಗ್ಸ್ ಈಗಾಗಲೇ ಇಷ್ಟೊಂದು ಸಂಪಾದನೆ ಮಾಡುತ್ತಿದ್ದಾನೆ.