Ads By Google

ನಿಮ್ಮ ಮೊಬೈಲ್ ನಲ್ಲಿ ಈ 10 ಆಪ್ ಇದ್ದರೆ ಈಗಲೇ ಡಿಲೀಟ್ ಮಾಡಿ, ಇಲ್ಲ ಅಂದರೆ ನಿಮ್ಮ ಖಾತೆ ಖಾಲಿಯಾಗಲಿದೆ.

Bad application 1
Ads By Google

ಮೊಬೈಲ್ ಫೋನ್ ಗಳನ್ನ ಸಾಮಾನ್ಯವಾಗಿ ಎಲ್ಲರೂ ಕೂಡ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಹೌದು ಈ ಭೂಮಿಯ ಮೇಲೆ ಚಿಕ್ಕ ಮಕ್ಕಳಿಂದ ದೊಡ್ಡ ಮುದುಕರ ತನಕ ಮೊಬೈಲ್ ಫೋನ್ ಗಳನ್ನ ಬಳಕೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಕರೆ ಮಾಡಲು ಮತ್ತು ಇತರೆ ಕೆಲಸಗಳಿಗಾಗಿ ಸಾಮಾನ್ಯವಾಗಿ ಎಲ್ಲರೂ ಕೂಡ ಮೊಬೈಲ್ ಬಳಕೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ, ಈಗಿನ ಕಾಲದ ತಂತ್ರಜ್ಞ ಬಹಳ ಮುಂದುವರೆದಿದ್ದು ಜನರನ್ನ ಮೋಸ ಮಾಡಲು ಹಲವು ದುಷ್ಟರು ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು.

ಇನ್ನು ನಾವು ಬಳಸುವ ಮೊಬೈಲ್ ಫೋನ್ ನಲ್ಲಿ ಹಲವು ರೀತಿಯ ಅಪ್ಲಿಕೇಶನ್ ಗಳು ಇದ್ದು ನಾವು ಕೆಲವು ಅಪ್ಲಿಕೇಶನ್ ಗಳಿಂದ ಮೋಸ ಹೋಗುತ್ತಿದ್ದೇವೆ ಅನ್ನುವುದು ಯಾರಿಗೂ ತಿಳಿದಿಲ್ಲ ಎಂದು ಹೇಳಬಹುದು. ಹೌದು ಮೊಬೈಲ್ ಫೋನ್ ಬಳಕೆ ಮಾಡುವವರಿಗೆ ಚೆಕ್ ಪಾಯಿಂಟ್ ರಿಸರ್ಚ್ ದೊಡ್ಡ ಶಾಕಿಂಗ್ ಸುದ್ದಿಯನ್ನ ನೀಡಿದ್ದು ಈ 10 ಅಪ್ಲಿಕೇಶನ್ ಗಳನ್ನ ಬಳಕೆ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿಯಾಗುವುದು ಗ್ಯಾರೆಂಟಿ ಎಂದು ಹೇಳಿದೆ. ಹಾಗಾದರೆ ನಾವು ಯಾವ ಹತ್ತು ಅಪ್ಲಿಕೇಶನ್ ಗಳನ್ನ ಬಳಕೆ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ಈ ಅಪ್ಲಿಕೇಶನ್ ಗಳನ್ನ ಬಳಕೆ ಮಾಡುತ್ತಿದ್ದರೆ ಇಂದೇ ಜಾಗೂರತರಾಗಿ.

ಹೌದು ಸ್ನೇಹಿತರೆ ನಾವು ಹಲವು ರೀತಿಯ ಮೊಬೈಲ್ ಅಪ್ಲಿಕೇಶನ್ ಗಳನ್ನ ಬಳಕೆ ಮಾಡುತ್ತಿದ್ದು ಹಲವು ಅಪ್ಲಿಕೇಶನ್ ಗಳನ್ನ ಹಣ ವರ್ಗಾವಣೆ ಮಾಡಲು ಬಳಸುತ್ತೇವೆ ಎಂದು ಹೇಳಬಹುದು. ಚೆಕ್ ಪಾಯಿಂಟ್ ರಿಸರ್ಚ್ʼನ ವರದಿಯ ಪ್ರಕಾರ ಅಪಾಯಕಾರಿ ದುರುದ್ದೇಶಪೂರಿತ ಆಪ್ ಗಳ ಹೊಸ ಸೆಟ್ ಪತ್ತೆಯಾಗಿದೆ, ಈ ಅಪ್ಲಿಕೇಶನ್ ‌ಗಳ ಬಳಕೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗುವ ಸಾಧ್ಯತೆ ಇದೆ. ವರದಿಯ ಪ್ರಕಾರ 10 ಆಂಡ್ರಾಯ್ಡ್ ಅಪ್ಲಿಕೇಶನ್ʼಗಳು Clast82 ಅನ್ನೋ ಡ್ರಾಪರ್ʼನಿಂದ ವೈರಸ್‌ʼಗೆ ತುತ್ತಾಗುತ್ತದೆ, ಇದು ವ್ಯಕ್ತಿಯ ಸ್ಮಾರ್ಟ್ ಫೋನ್ʼನಲ್ಲಿ ಏಲಿಯನ್ ಬಾಟ್ ಬ್ಯಾಂಕರ್ ಮತ್ತು MRAT ಅನ್ನು ಇನ್ ಸ್ಟಾಲ್ ಮಾಡುತ್ತದೆ.

ಏಲಿಯನ್ ಬೋಟ್ ಒಂದು ರೀತಿಯ ಮಾಲ್ ವೇರ್ ಆಗಿದ್ದು, ಇದು ಹಣಕಾಸಿನ ಅಪ್ಲಿಕೇಶನ್‌ʼಗಳ ಮೇಲೆ ಪರಿಣಾಮ ಬೀರಬಹುದು. ಬ್ಯಾಕಿಂಗ್ ವಿವರಗಳನ್ನ ಕದಿಯಲು ಬಳಸಲಾಗುತ್ತೆ. ಈ ಡ್ರಾಪರ್ ಎಷ್ಟು ಶಕ್ತಿಶಾಲಿಯಾಗಿದೆ ಅಂದರೆ ಇದು ಸುಲಭವಾಗಿ ಗೂಗಲ್, ಟು-ಫ್ಯಾಕ್ಟರ್ ದೃಢೀಕರಣ ಕೋಡ್ ಗಳನ್ನು ಟ್ರಿಕ್ ಮಾಡಬಹುದು. ನಿಮ್ಮ ಆಂಡ್ರಾಯ್ಡ್ ಫೋನ್ʼಗಳನ್ನ ಹ್ಯಾಕರ್ʼಗಳಿಂದ ರಕ್ಷಿಸಲ್ಪಟ್ಟ ಈ ಆಪ್ʼಗಳನ್ನ ಕೂಡಲೇ ಅನ್ ಇನ್ಸ್ಟಾಲ್ ಮಾಡಿ. ಆ ಅಪ್ಲಿಕೇಶನ್ʼಗಳ ಪೂರ್ಣ ಪಟ್ಟಿ ಇಲ್ಲಿದೆ ನೋಡಿ. 1) Cake VPN , 2) Pacific VPN , 3) eVPN , 4) BeatPlayer, 5) QR/Barcode, 6) Scanner MAX, 7) eVPN, 8) Music Player, 9) tooltipnatorlibrary, 10) QRecorder.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field