Bagar Hukum: ಬಗರ್ ಹುಕುಂ ಸಾಗುವಳಿ ರೈತರಿಗೆ ಬಂಪರ್ ಗುಡ್ ನ್ಯೂಸ್, 8 ತಿಂಗಳ ಡೆಡ್ ಲೈನ್ ಘೋಷಣೆ.

ಬಗರ್ ಹುಕುಂ ಸಾಗುವಳಿ ರೈತರಿಗೆ ಬಂಪರ್ ಗುಡ್ ನ್ಯೂಸ್

Bagar Hukum New Update: ಸದ್ಯ ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಇದೀಗ ರಾಜ್ಯ ಸರ್ಕಾರ ರೈತರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ರೈತರ ಏಳಿಗೆಗಾಗಿ ಸರ್ಕಾರ ಮುಂದಾಗಿಗೆ. ರೈತರ ಬಹುದಿನದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ನಿರ್ಧರಿಸಿದೆ.

ಅಕ್ರಮ ಸಕ್ರಮ ಸಾಗುವಳಿ ಭೂಮಿಯ ಬಗ್ಗೆ ರೈತರಿಗೆ ಬಿಗ್ ಅಪ್ಡೇಟ್ ಲಭಿಸಿದೆ. ಅಕ್ರಮ ಬಗರ್ ಹುಕುಂ ಸಾಗುವಳಿ ಭೂಮಿ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ರೈತರಿಗೆ ಸಿಹಿ ಸುದ್ದಿ ಲಭಿಸಿದೆ.

Bagar Hukum Latest News
Image Credit: Original source

ಬಗರ್ ಹುಕುಂ ಸಾಗುವಳಿ ರೈತರಿಗೆ ಬಂಪರ್ ಗುಡ್ ನ್ಯೂಸ್
ರಾಜ್ಯದ ಸಾವಿರಾರು ಬಗರ್ ಹುಕುಂ ಸಾಗುವಳಿದಾರ ರೈತರು ಸಾಗುವಳಿ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಸಂತಸದ ಸುದ್ದಿ ಎಂಬಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಸಾಗುವಳಿ ಪ್ರಮಾಣ ಪತ್ರಕ್ಕಾಗಿ ರೈತರು ಸಲ್ಲಿಸಿರುವ ಅರ್ಜಿಯನ್ನು 8 ತಿಂಗಳೊಳಗೆ ತೆರವುಗೊಳಿಸಲು ಗಡುವು ನೀಡಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಮಾಡಲು ತಹಸೀಲ್ದಾರ್ ಗಳಿಗೆ 8 ತಿಂಗಳ ಗಡುವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬಡ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಕ್ರಮ ಸಾಗುವಳಿ ಸಕ್ರಮಕ್ಕೆ ಬಗರ್ಹುಕುಂ ಅಡಿಯಲ್ಲಿ ರಾಜ್ಯ ಸರಕಾರ ಅರ್ಜಿ ಸ್ವೀಕರಿಸಿದೆ. ಈಗಾಗಲೇ ಲಕ್ಷ ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಮುಂದಿನ 8 ತಿಂಗಳಲ್ಲಿ ಈ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

Bagar Hukum Land
Image Credit: Hosakannada

8 ತಿಂಗಳ ಡೆಡ್ ಲೈನ್ ಘೋಷಣೆ
ರಾಜ್ಯಾದ್ಯಂತ 163 ಕ್ಷೇತ್ರಗಳಲ್ಲಿ ಬಗರ್ ಹುಕುಂ ಸಾಗುವಳಿ ಸಮನ್ವಯ ಸಮಿತಿ ರಚಿಸಲಾಗಿದೆ. ಜುಲೈ ತಿಂಗಳಿನಿಂದ ಪ್ರತಿ ತಾಲೂಕಿಗೆ ಈ ಮೊತ್ತದ ಅರ್ಜಿಯನ್ನು ಜಿಲ್ಲಾಧಿಕಾರಿಗಳು ತಹಸೀಲ್ದಾರ್‌ ಗೆ ಸೂಚಿಸಬೇಕು. ಈ ಎಲ್ಲ ಅರ್ಜಿಗಳಲ್ಲಿ ರೈತರಿಗೆ ಭೂಮಿ ಮಂಜೂರು ಮಾಡುವ ಮುನ್ನ ಶಾಸಕರ ನೇತೃತ್ವದ ಸಮಿತಿಯಲ್ಲಿ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಬೇಕು. ಆ ಸ್ಥಳದ ಕಳೆದ 10 ವರ್ಷಗಳ ಉಪಗ್ರಹ ಚಿತ್ರವನ್ನು ಅವರಿಗೆ ಒದಗಿಸಲಾಗುತ್ತದೆ. ಇದನ್ನು ಆಧರಿಸಿ ಸಾಗುವಳಿ ಖಾತ್ರಿ ನೀಡಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಹಾಗೂ ಬೋಗಸ್ ಅರ್ಜಿಗಳಿಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ.

Join Nadunudi News WhatsApp Group

Bagar Hukum New Update
Image Credit: Prajavani

Join Nadunudi News WhatsApp Group