Bagar Hukum: ಸರ್ಕಾರೀ ಜಾಗದಲ್ಲಿ ವ್ಯವಸಾಯ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್, ಇನ್ನುಮುಂದೆ ಭೂಮಿ ನಿಮ್ಮದೇ.

ರೈತರ ಭೂಮಿ ಸಕ್ರಮ ಮಾಡಲು ನಿರ್ಧರಿಸಿದ ರಾಜ್ಯ ಸರ್ಕಾರ.

Bagar Hukum Application 2023: ಸದ್ಯ ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಇದೀಗ ರಾಜ್ಯ ಸರ್ಕಾರ ರೈತರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ರೈತರ ಏಳಿಗೆಗಾಗಿ ಸರ್ಕಾರ ಮುಂದಾಗಿಗೆ. ರೈತರ ಬಹುದಿನದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ನಿರ್ಧರಿಸಿದೆ.

ಅಕ್ರಮ ಸಕ್ರಮ ಸಾಗುವಳಿ ಭೂಮಿಯ ಬಗ್ಗೆ ರೈತರಿಗೆ ಬಿಗ್ ಅಪ್ಡೇಟ್ ಲಭಿಸಿದೆ. ಅಕ್ರಮ ಬಗರ್ ಹುಕುಂ ಸಾಗುವಳಿ ಭೂಮಿ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರೈತರ ಭೂಮಿ ಸಕ್ರಮ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Bagar Hukum Land
Image Credit: Oneindia

ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್
ಬಗರ್ ಹುಕುಂ ಅಥವ ಕೃಷಿ ಜಮೀನು ಅಕ್ರಮ ಸಕ್ರಮ ಅಂದರೆ ಅನಾದಿ ಕಾಲದಿಂದ ರೈತರು ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು, ಅವರ ಹೆಸರಿಗೆ ಖಾತೆ ಆಗಿರುವುದಿಲ್ಲ. ಇಂತಹ ಜಮೀನುಗಳನ್ನು ನಿಯಮ ಪ್ರಕಾರ ಕೃಷಿ ಮಾಡುವ ರೈತನಿಗೆ ಕೆಲವು ನಿಬಂಧನೆ ಪ್ರಕಾರ ಖಾತೆ ಅಥವಾ ಅಕ್ರಮ ಸಾಗುವಳಿಯನ್ನು ಸಕ್ರಮ ಮಾಡಿಕೊಡುವುದಾಗಿದೆ.

ಸರ್ಕಾರೀ ಭೂಮಿಗಳಲ್ಲಿ ಸಾಗುವಳಿ ಮಾಡುವ ರೈತರಿಗೆ ಆ ಭೂಮಿಯನ್ನು ರೈತರಿಗೆ ಸಕ್ರಮ ಮಾಡಿಕೊಡಬೇಕು ಎಂದು ರೈತರು ಈಗಾಗಲೇ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದೀಗ ರಾಜ್ಯ ಸರ್ಕಾರ ರೈತರ ಈ ಬೇಡಿಕೆಗೆ ಸ್ಪಂದಿಸಿದೆ. ಈ ಮೂಲಕ ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದೆ.

Bagar Hukum Scheme
Image Credit: HMTV

15 ವರ್ಷ ಬಗರ್ ಹುಕುಂ ಸಾಗುವಳಿ ಮಾಡಿದವರ ಭೂಮಿ ಸಕ್ರಮ
ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತರು 15 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೆ ಮಾತ್ರ ಉಳುಮೆ ಭೂಮಿ ಸಕ್ರಮ ಮಾಡಲು ಸರ್ಕಾರ ತೀರ್ಮಾನಿಸಿದೆ. ಬಗರ್ ಹುಕುಂ ನಲ್ಲಿ ಅನೇಕರು ಸುಳ್ಳು ಅರ್ಜಿ ಸಲ್ಲಿಸಿದ್ದು, ಆಪ್ ಮೂಲಕ ನೈಜ್ಯ ಉಳುಮೆದಾರರನ್ನು ಗುರುತಿಸಿ ಅರ್ಹ ರೈತರ ನೆರವಿಗೆ ಮುಂದಾಗಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ. ಅರ್ಹ ಬಡ ರೈತರಿಗೆ ಹಕ್ಕು ನೀಡಲು ಬಗರ್ ಹುಕುಂ ಸಕ್ರಮಕ್ಕೆ ಸರ್ಕಾರ ಹೆಚ್ಚಿನ ನಿಯಮ ಜಾರಿಗೊಳಿಸಿದೆ. ಶೀಘ್ರದಲ್ಲೇ 15 ವರ್ಷ ಸಾಗುವಳಿ ಮಾಡಿದ ರೈತರ ಭೂಮಿ ಸಕ್ರಮವಾಗಲಿದೆ.

Join Nadunudi News WhatsApp Group

Join Nadunudi News WhatsApp Group