Chetak EV: ಕೆಲವೇ ದಿನದಲ್ಲಿ 40 ಸಾವಿರ ಸ್ಕೂಟರ್ ಮಾರಾಟ, ಈ ಬಜಾಜ್ ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನರು
ರಿವರ್ಸ್ ಗೇರ್ ಇರುವ ಈ ಸ್ಕೂಟರ್ ಗೆ ಬಾರಿ ಡಿಮ್ಯಾಂಡ್
Bajaj Chetak Electric Scooter: ಮಾರುಕಟ್ಟೆಯಲ್ಲಿ ವಿವಿಧ ಜನಪ್ರಿಯ ಸ್ಕೂಟರ್ ತಯಾರಕ ಕಂಪನಿಗಳು ನೂತನ ಮಾದರಿಯ ಸ್ಕೂಟರ್ ಗಳನ್ನೂ ಲಾಂಚ್ ಮಾಡಿದೆ. ಪ್ರತಿನಿತ್ಯ ಕೆಲಸಕ್ಕೆ ಹೋಗುವವರು ಹೆಚ್ಚಿನ ಮೈಲೇಜ್ ನೀಡುವ ಸ್ಕೂಟರ್ ಗಳನ್ನೂ ಖರೀದಿಸಲು ಬಯಸುತ್ತಾರೆ.
ಬಜೆಟ್ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಗಳೂ ಮಾರುಕಟ್ಟೆಯಲ್ಲಿವೆ. ನಾವೀಗ ಈ ಲೇಖನದಲ್ಲಿ ಬಜಾಜ್ ಕಂಪನಿಯ ಬೆಸ್ಟ್ Electric scooter ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಹೊಸ ಸ್ಕೂಟರ್ ಅನ್ನು ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
ಬುಕಿಂಗ್ ನಲ್ಲಿ ಸುನಾಮಿ ಎಬ್ಬಿಸಿದೆ ಈ EV
ನಾವೀಗ ಬಜಾಜ್ ಕಂಪನಿಯ Chetak Electric Scooter ನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಸ್ಕೂಟರ್ ಮಾರಾಟದಲ್ಲಿ ಕೂಡ ದಾಖಲೆ ಸೃಷ್ಟಿಸಿದೆ ಎನ್ನಬಹುದು. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳು FY 2024 ರಲ್ಲಿ 1,15,702 ಯುನಿಟ್‌ಗಳನ್ನು ಮತ್ತು FY 2025 ರಲ್ಲಿ 40,854 ಯುನಿಟ್‌ಗಳನ್ನು ಮಾರಾಟ ಮಾಡಿದೆ (ಜನವರಿ – ಜೂನ್ 2024 ಅವಧಿ). ಒಟ್ಟು ಸಂಖ್ಯೆ 2,02,590 ಯುನಿಟ್‌ಗಳು. ಪ್ರಸ್ತುತ ದೇಶೀಯವಾಗಿ ಈ ಚೇತಕ್ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಿದೆ.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು 4.2 kW ಸಾಮರ್ಥ್ಯದ BLDC ಮೋಟಾರ್ ಅನ್ನು ಪಡೆಯುತ್ತೀರಿ. ಈ ಸ್ಕೂಟರ್ ನಿಮಗೆ ಉತ್ತಮ ಸವಾರಿಯ ಅನುಭವವನ್ನು ನೀಡುತ್ತದೆ. ಚಾರ್ಜಿಂಗ್ ಕುರಿತು ಹೇಳುವುದಾದರೆ, ಈ ಸ್ಕೂಟರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಕೇವಲ 4.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಈ ಸ್ಕೂಟರ್ ಸಂಪೂರ್ಣ ಚಾರ್ಜ್ ನಲ್ಲಿ 95 ರಿಂದ 115 ಕಿಲೋಮೀಟರ್ ಗಳ ವ್ಯಾಪ್ತಿಯನ್ನು ನೀಡುತ್ತದೆ. ಇನ್ನು ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಹೊಂದಿರುವ Bajaj Chetak Electric Scooter ಸಿಂಗಲ್ ಚಾರ್ಜ್ ನಲ್ಲಿ 127km ಮೈಲೇಜ್ ನೀಡುತ್ತದೆ.
ರಿವರ್ಸ್ ಗೇರ್ ಇರುವ ಈ ಸ್ಕೂಟರ್ ಗೆ ಬಾರಿ ಡಿಮ್ಯಾಂಡ್
ನೀವು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ನೋಡಬಹುದು. ಈ ಸ್ಕೂಟರ್ ಅರ್ಬನ್ ಮತ್ತು ಪ್ರೀಮಿಯಂನಲ್ಲಿ ಲಭ್ಯವಿದೆ. ಅರ್ಬನ್ ರೂಪಾಂತರವು ಸ್ಟ್ಯಾಂಡರ್ಡ್ ಮತ್ತು ಟೆಕ್ ಪ್ಯಾಕ್ ನ ಎರಡು ಮಾದರಿಗಳಲ್ಲಿ ಬರುತ್ತದೆ . ಸ್ಟ್ಯಾಂಡರ್ಡ್ ಮಾದರಿಯಲ್ಲಿ ನೀವು ಇಕೋ ಮೋಡ್ ಅನ್ನು ಪಡೆಯುತ್ತೀರಿ. ಆದರೆ ಟೆಕ್ ಪ್ಯಾಕ್ ಮಾದರಿಯಲ್ಲಿ ನೀವು ಸ್ಪೋರ್ಟ್ ಮೋಡ್ ಪಡೆಯುತ್ತೀರಿ.
ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಮೋಡ್ ಮತ್ತು ಪೂರ್ಣ ಅಪ್ಲಿಕೇಶನ್ ಸಂಪರ್ಕದಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ. ಪ್ರೀಮಿಯಂ ರೂಪಾಂತರದಲ್ಲಿ ಸಹ, ನೀವು ಸ್ಟ್ಯಾಂಡರ್ಡ್ ಮತ್ತು ಟೆಕ್ ಪ್ಯಾಕ್ ಎಂಬ ಎರಡು ಮಾದರಿಗಳನ್ನು ಪಡೆಯುತ್ತೀರಿ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ, ಅದರ ರೆಟ್ರೊ ನೋಟದ ಜೊತೆಗೆ ನೀವು ಮುಂಭಾಗದ ಡಿಸ್ಕ್ ಬ್ರೇಕ್, ಎಲ್ಇಡಿ ಹೆಡ್ಲೈಟ್ ಮತ್ತು ಟೈಲ್ಲೈಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ರಿಮೋಟ್ ಕೀ ಮುಂತಾದ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.