Bajaj Scooter: ಹೊಸ ಅವತಾರದಲ್ಲಿ ಬಂತು ಹಳೆಯ ಬಜಾಜ್, 250 ಕೀ ಮೀ ಮತ್ತು ಅತೀ ಕಡಿಮೆ ಬೆಲೆ.
ಲೀಟರ್ ಗೆ 5 ಕಿಲೋಮೀಟರ್ ಮೈಲೇಜ್ ನೀಡುವ ಬಜಾಜ್ ಸ್ಕೂಟರ್ ಬಿಡುಗಡೆ ಮಾಡಲು ತಯಾರಿ ನೆಡೆಸುತ್ತಿರುವ ಬಜಾಜ್ ಮೋಟಾರ್.
Bajaj Chetak Scooter 2023: ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಗಳಲ್ಲಿ ಬಜಾಜ್ (Bajaj) ಕಂಪನಿಯ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದಿವೆ. ಹೊಸ ಮಾದರಿಯ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಬಜಾಜ್ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ವಾಹನ ಖರೀದಿಯ ಮೇಲೆ ವಿವಿಧ ರೀತಿಯ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಕಡಿಮೆ ಬೆಲೆಗೆ ವಾಹನವನ್ನು ಮಾರಾಟ ಮಾಡುತ್ತಿದೆ.
ಬಜಾಜ್ ಚೇತಕ್ ಸ್ಕೂಟರ್
ಇದೀಗ ಬಜಾಜ್ ಮೋಟಾರ್ ತನ್ನ ಚೇತಕ್ ಸ್ಕೂಟರ್ ಅನ್ನು ಪೆಟ್ರೋಲ್ ಎಂಜಿನ್ ರೂಪಾಂತರದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.
ಈಗಾಗಲೇ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಎಲೆಕ್ಟ್ರಿಕ್ ರೂಪಾಂತರಗಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಜಾಜ್ ಚೇತಕ್ ಸ್ಕೂಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನುವ ಬಗ್ಗೆ ವರದಿಯಾಗಿದೆ.
ಬಜಾಜ್ ಚೇತಕ್ ಸ್ಕೂಟರ್ ಎಂಜಿನ್ ಸಾಮರ್ಥ್ಯ
ಬಜಾಜ್ ಚೇತಕ್ ಸ್ಕೂಟರ್ ಏರ್ ಕೋಲ್ಡ್ ಸಿಸ್ಟಮ್ ಅನ್ನು ಅಳವಡಿಸಿ ಎಂಜಿನ್ ಅನ್ನು ತಯಾರಿಸಲಾಗಿದೆ. ಈ ಸ್ಕೂಟರ್ 124 .8 ಸಿಸಿ ಎಂಜಿನ್ ಹೊಂದಿದ್ದು, 9 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನೂ ಅಳವಡಿಸಲಾಗಿದೆ.
ಇನ್ನು ಈ ಬೈಕ್ ನ ಮೈಲೇಜ್ ಬಗ್ಗೆ ಹೇಳುವುದಾದರೆ ಬಜಾಜ್ ಪ್ಲಾಟಿನ ಬೈಕ್ ನ ಮೈಲೇಜ್ ಗಿಂತ ಹೆಚ್ಚಿನ ಮೈಲೇಜ್ ನೀಡಲಿದೆ.
ಬಜಾಜ್ ಚೇತಕ್ ಸ್ಕೂಟರ್ ವಿಶೇಷತೆ
ಈ ಪೆಟ್ರೋಲ್ ಮಾದರಿಯ ಚೇತಕ್ ಸ್ಕೂಟರ್ ನಲ್ಲಿ 5 ಲೀಟರ್ ಇಂಧನ ಟ್ಯಾಂಕರ್ ಅನ್ನು ನೀಡಲಾಗಿದೆ. ಪ್ರತಿ ಲೀಟರ್ ಗೆ 50 ಕಿಲೋಮೀಟರ್ ಮೈಲೇಜ್ ನೀಡಲಿದ್ದು ಒಟ್ಟಾಗಿ 250 ಕಿಲೋಮೀಟರ್ ದೂರವನ್ನು ಕ್ರಮಿಸಬಹುದಾಗಿದೆ.
ವೈಫೈ, ನೇವಿಗೇಷನ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಬ್ಲೂಟೂತ್, ಫ್ಯೂಯಲ್ ಇಂಡಿಕೇಟರ್, ರೈಡಿಂಗ್ ಮೋಡ್, ಡಿಜಿಟಲ್ ಸ್ಕ್ರೀನ್ ಸೇರಿದಂತೆ ಇನ್ನಿತರ ಹತ್ತು ಹಲವು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಬಜಾಜ್ ಚೇತಕ್ ಸ್ಕೂಟರ್ ನ ಬೆಲೆ 1.08 ಲಕ್ಷದಿಂದ 1.37 ಆಗಿರಲಿದೆ.