Bajaj CNG Bike: ಕಡಿಮೆ ಬೆಲೆ ಮತ್ತು 120 Km ಮೈಲೇಜ್, ಮಾರುಕಟ್ಟೆಗೆ ಎಂಟ್ರಿ ಕೊಡಲು ಸಿದ್ದವಾಯಿತು ಬಜಾಜ್ CNG ಬೈಕ್

ಕಡಿಮೆ ಬೆಲೆ, ಬೆಸ್ಟ್ ಮೈಲೇಜ್ ನೊಂದಿಗೆ ಲಾಂಚ್ ಆಗಲಿದೆ CNG ಬೈಕ್

Bajaj CNG Bike Launch In India: ಪ್ರಸ್ತುತ ದೇಶದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಇಂಧನದ ಬೆಲೆಯೇ ದೊಡ್ಡ ಸಮಸ್ಯೆಯಾಗಿದೆ ಎನ್ನಬಹುದು. ಕಚ್ಚಾತೈಲಗಳ ಬೆಲೆಯ ಏರಿಕೆಯು ಜನರನ್ನು ಇಂಧನ ಚಾಲಿತ ವಾಹನವನ್ನು ಖರೀದಿಸಲು ಹಿಂದೇಟು ಹಾಕುವಂತೆ ಮಾಡುತ್ತಿದೆ ಅಂದರೆ ತಪ್ಪಾಗಲಾರದು.

ಇಂಧನಗಳ ಬೆಲೆಯ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ Electric ವಾಹನಗಳು ಪಾರುಪತ್ಯ ಸಾಧಿಸಿವೆ ಎನ್ನಬಹುದು. ಇನ್ನು ಎಲೆಕ್ಟ್ರಿಕ್ ವಾಹನಗಳ ಬೆಲೆ ಕೊಂಚ ಅಧಿಕವಾಗಿರುವುದರಿಂದ ಇತ್ತೀಚಿಗೆ CNG ಚಾಲಿತ ವಾಹನಗಳಿಗೂ ಕೂಡಾ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ನೂತನ ಮಾದರಿಯ CNG ಬೈಕ್ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ವರದಿಯಾಗಿದೆ.

Bajaj CNG Bike Launch In India
Image Credit: Apanabihar

ವಿಶ್ವದ ಮೊದಲ CNG ಬೈಕ್ ಬಿಡುಗಡೆಗಾಗಿ ಸಿದ್ಧತೆ
ಸದ್ಯ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ BAJAJ ಭಾರತದಲ್ಲಿ ತನ್ನ ಮೊತ್ತ ಮೊದಲ CNG ಚಾಲಿತ ಬೈಕ್ ಅನ್ನು ಅನಾವರಣಗೊಳಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಬಜಾಜ್ ಕಂಪನಿಯು ಈಗಗಳು ವಿಶ್ವದ ಮೊದಲ CNG ಬೈಕ್ ಅನ್ನು ಉತ್ಪಾದಿಸಲು ನಿರ್ಧರಿಸಿದ್ದು, ಉತ್ಪಾದನೆಯ ಕೆಲಸ ಕೂಡ ಆರಂಭವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು CNG ಬೈಕ್ ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಎಲೆಕ್ಟ್ರಿಕ್ ವಾಹನದ ಜೊತೆಗೆ CNG ವಾಹನಗಳು ಕೂಡ ಮಾರುಕಟ್ಟೆಗೆ ಬಂದು ಜನಸಾಮಾನ್ಯರ ಇಂಧನದ ಖರ್ಚನ್ನು ಉಳಿಸಲಿದೆ.

Bajaj CNG Bike
Image Credit: Aajtak

ಕಡಿಮೆ ಬೆಲೆ, ಬೆಸ್ಟ್ ಮೈಲೇಜ್ ನೊಂದಿಗೆ ಲಾಂಚ್ ಆಗಲಿದೆ CNG ಬೈಕ್
ಈ CNG ತಂತ್ರಜ್ಞಾನವನ್ನು ಬಳಸಿಕೊಂಡು 100cc ನಿಂದ 160cc ಸಾಮರ್ಥ್ಯದ ಎಂಜಿನ್‌ ಗಳಲ್ಲಿ CNG ಬೈಕ್‌ಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಬಜಾಜ್ ಘೋಷಿಸಿದೆ. ಜಗತ್ತಿನ ಮೊದಲ ಸಿಎನ್ ಜಿ ಬೈಕ್ ಗೆ ಯಾವ ಹೆಸರಿಡುತ್ತಾರೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಬಜಾಜ್ ಕಂಪನಿಯು ಈಗ Bajaj Marathon, Bajaj Freedom, Bajaj Glider ಮತ್ತು Bajaj Tractor ಎಂಬ ನಾಲ್ಕು ಹೆಸರುಗಳನ್ನು ಟ್ರೇಡ್‌ ಮಾರ್ಕ್ ಮಾಡಿದೆ.

ಟ್ರೇಡ್‌ ಮಾರ್ಕ್ ಎನ್ನುವುದು ನಿರ್ದಿಷ್ಟ ಕಂಪನಿಯಿಂದ ನೋಂದಾಯಿಸಲ್ಪಟ್ಟ ನಂತರ ನಿರ್ದಿಷ್ಟ ಹೆಸರನ್ನು ಬಳಸುವುದನ್ನು ಇತರ ಕಂಪನಿಗಳನ್ನು ನಿಷೇಧಿಸುವ ಹೆಸರಾಗಿದೆ. ಇದಕ್ಕಾಗಿ, ಈ ನಾಲ್ಕು ಹೆಸರುಗಳನ್ನು ಈಗ ಬಜಾಜ್‌ ನಿಂದ ಟ್ರೇಡ್‌ ಮಾರ್ಕ್ ಮಾಡಲಾಗಿದೆ. ಸಿಎನ್‌ಜಿ ಬೈಕ್‌ ಗಳು ಹೆಚ್ಚಿನ ಮೈಲೇಜ್ ನೀಡುವುದರಿಂದ, ಸಿಎನ್‌ ಜಿ ಬೈಕ್‌ ಗೆ ಮ್ಯಾರಥಾನ್ ಎಂದು ಹೆಸರಿಸಲು ಬಜಾಜ್‌ ಗೆ ಸಾಕಷ್ಟು ಅವಕಾಶವಿದೆ. ಬಜಾಜ್ ತನ್ನ ಸಿಎನ್‌ಜಿ ಬೈಕ್‌ ನಲ್ಲಿ 1.2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಬೈಕ್‌ ನೊಂದಿಗೆ 120 ಕಿಮೀ ಮೈಲೇಜ್ ನಿರೀಕ್ಷಿಸಬಹುದು.

Join Nadunudi News WhatsApp Group

Bajaj CNG Bike Mileage
Image Credit: Autonexa

Join Nadunudi News WhatsApp Group