New Bajaj CNG: ಈಗ ಬೈಕ್ ಓಡಿಸಲು ಪೆಟ್ರೋಲ್ ಅಗತ್ಯವಿಲ್ಲ, ಬಂತು ಬಜಾಜ್ CNG ಬೈಕ್, ಕಡಿಮೆ ಬೆಲೆ 75 Km ಮೈಲೇಜ್.

ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ 75km ಮೈಲೇಜ್ ನೀಡುವ Bajaj CNG Bike.

Bajaj CNG Price In India: ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳ ಜೊತೆ CNG ಚಾಲಿತ ವಾಹನಗಳು ಕೂಡ ಬೇಡಿಕೆ ಪಡೆದುಕೊಂಡಿದೆ. ಈಗಾಗಲೇ ಕಾರ್ ಹಾಗೂ ಬೈಕ್ ಗಳು Electric ರೂಪಾಂತರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಯಿದೆ.

ಆದರೆ CNG ಚಾಲಿತ ಕಾರ್ ಗಳು ಮಾತ್ರ ಇಲ್ಲಿಯವರೆಗೂ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿತ್ತು. ಸದ್ಯ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Bajaj ಇದೀಗ ತನ್ನ ಮೊದಲ CNG ಚಾಲಿತ ಬೈಕ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ CNG ಚಾಲಿತ ಬೈಕ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

New Bajaj CNG
Image Credit: Original Source

ಇನ್ನುಮುಂದೆ ಬೈಕ್ ಓಡಿಸಲು ಪೆಟ್ರೋಲ್ ಅಗತ್ಯವಿಲ್ಲ
ಬಜಾಜ್ ನಿರ್ದೇಶಕ ರಾಜೀವ್ ಅವರು ಕಂಪನಿಯು ಶೀಘ್ರದಲ್ಲೇ ಅಗ್ಗದ CNG ಚಾಲಿತ ಮೋಟಾರ್‌ ಸೈಕಲ್ ಅನ್ನು ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಜಾಜ್ ಬಿಡುಗಡೆ ಮಾಡಲು ನಿರ್ಧರಿಸಿರುವ CNG ಬೈಕ್ ಬಿಡುಗಡೆ ಯಶಸ್ವಿಯಾದರೆ ಜಗತ್ತಿನಲ್ಲೇ ಮೊದಲ CNG ಚಾಲಿತ ಬೈಕ್ ಬಿಡುಗಡೆ ಮಾಡಿದ ಹೆಗ್ಗಳಿಕೆಯನ್ನು BAJAJ ಪಡೆಯಲಿದೆ.

Bjaja CNG ಮಾರುಕಟ್ಟೆಯ ಬೆಲೆ ಎಷ್ಟು..?
Petrol , Electric ಮಾದರಿಗಳಿಗೆ ಹೋಲಿಸಿದರೆ CNG ಚಾಲಿತ ವಾಹನಗಳು ಅಗ್ಗದ ಬೆಲೆಯಲ್ಲಿ ಲಭ್ಯವಾಗಬಹುದು. ಇತ್ತೀಚಿಗೆ ಕೇಂದ್ರ ಸರ್ಕಾರ ದೇಶದಲ್ಲಿನ ವಾಯುಮಾಲಿನ್ಯವನ್ನು ತಡೆಗಟ್ಟಲು ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ Ethanal ಚಾಲಿತ ವಾಹನಗಳ ಬಿಡುಗಡೆಗೆ ಸಜ್ಜಾಗಿದೆ.

Bajaj CNG Price In India
Image Credit: Delhibreakings

ಇದರ ಬೆನ್ನಲ್ಲೇ ಇದೀಗ CNG ಚಾಲಿತ ಬೈಕ್ ಬಿಡುಗಡೆಯ ಬಗ್ಗೆ ಸುದ್ದಿ ಹರಿದಾಡುತ್ತಿದೆ. ನೀವು ನೂತನ CNG ಬೈಕ್ ನಲ್ಲಿ 17 – inch alloy wheels, front telescopic forks, rear dual shock absorber setup, drum brake ಸೇರಿದಂತೆ ಇನ್ನಿತರ ಹಲವು ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ. ಇನ್ನು ನೂತನ ಬಜಾಜ್ CNG ಮಾದರಿಯು ಮಾರುಕಟ್ಟೆಯಲ್ಲಿ 89,792 ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ 75km ಮೈಲೇಜ್ ನ್ Bajaj CNG
ಕಂಪನಿಯು ಬಜಾಜ್ CNG ಬೈಕ್ ನಲ್ಲಿ ಸಾಕಷ್ಟು ವೈಶಿಷ್ಟ್ಯವನ್ನು ನೀಡಿದೆ. ಕಂಪನಿಯು 102cc BS6 ಎಂಜಿನ್ ಅನ್ನು ಅಳವಡಿಸಿದ್ದು, ಈ ಎಂಜಿನ್ 7.79 bhp ಗರಿಷ್ಟ ಪವರ್ ಮತ್ತು 8.34Nm ಪಿಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ನಲ್ಲಿ 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೋಡಬಹುದಾಗಿದೆ. ಇನ್ನು ಈ ಬೈಕ್ ಪ್ರತಿ ಲೀಟರ್ ಗೆ ಬರೋಬ್ಬರಿ 75 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group