Bajaj: ಸ್ಪ್ಲೆಂಡರ್ ಬೈಕ್ ಗೆ ಪೈಪೋಟಿ ನೀಡಲು ಬಂತು ಬಜಾಜ್ 125, 70 Km ಮೈಲೇಜ್ ಮತ್ತು ಕಡಿಮೆ ಬೆಲೆ.

70 ಕಿಲೋಮೀಟರ್ ನೀಡುವ ಬಜಾಜ್ ಕಂಪನಿಯ ಹೊಸ ಬೈಕ್ ಬಿಡುಗಡೆ.

Bajaj Discover 125 Bike: ಬಜಾಜ್ (Bajaj) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ನವೀಕರಿಸಿದ ಹೊಸ ಹೊಸ ಮಾದರಿಯ ಬೈಕ್ ಅಗಲನ್ನು ಪರಿಚಯಿಸುತ್ತಿದೆ. ಈಗಾಗಲೇ ಕಂಪನಿಯು ಎಲೆಕ್ಟ್ರಿಕ್ ಹಾಗು ಪೆಟ್ರೋಲ್ ಚಾಲಿತ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ.

ಇನ್ನು ಬಜಾಜ್ ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಅನ್ನು ಬಿಡುಗಡೆ ಮಾಡುತ್ತದೆ. ಕಂಪನಿಯು ತನ್ನ ಹೊಸ ರೂಪಾಂತರದ ಬೈಕ್ ಗಳಲ್ಲಿ ವಿಶೇಷ ಫೀಚರ್ ಅನ್ನು ಅಳವಡಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಇದೀಗ ಬಜಾಜ್ ತನ್ನ ಹೊಚ್ಚ ಹೊಸ ಬೈಕ್ ಅನ್ನು ಬಜೆಟ್ ಬೆಲೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

The specialty of Bajaj Discover 125 bike
Image Credit: Hoshangabadmedia

ಬಜಾಜ್ ಡಿಸ್ಕವರ್ 125 ಬೈಕ್ (Bajaj Discover 125 Bike) 
ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಬಜೆಟ್ ಬೆಲೆಯಲ್ಲಿ ಇದೀಗ ಬಜಾಜ್ ಡಿಸ್ಕವರ್ 125 ಬೈಕ್ ಅನ್ನು ಬಿಡುಗಡೆ ಮಾಡಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ದ್ವಿಚಕ್ರ ವಾಹನದ ಬಜೆಟ್ ವಿಭಾಗದಲ್ಲಿ ಈ ಬೈಕ್ ಉತ್ತಮವಾಗಿದೆ. ಈ ಬೈಕ್ ನ ಮೈಲೇಜ್ ಹೆಚ್ಚಾಗಿದ್ದು ಕಡಿಮೆ ಬೆಲೆಯಲ್ಲಿ ಲಭ್ಯವಿರುವುದು ವಿಶೇಷವಾಗಿದೆ. ಇನ್ನು ಈ ಹೊಸ ಬಜಾಜ್ ಡಿಸ್ಕವರ್ 125 ಬೈಕ್ ನಲ್ಲಿ ಅತ್ಯಾಧುನಿಕ ನೂತನ ಫೀಚರ್ ಅನ್ನು ಅಳವಡಿಸಲಾಗಿದೆ.

ಬಜಾಜ್ ಡಿಸ್ಕವರ್ 125 ಬೈಕ್ ನ ವಿಶೇಷತೆ
ಬಜಾಜ್ ಡಿಸ್ಕವರ್ 125 ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಗಳನ್ನು ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಟ್ವಿನ್-ಶಾಕ್ ಅನ್ನು ಅಳವಡಿಸಲಾಗಿದೆ. ಕೆಂಪು, ನೀಲಿ ಸೇರಿದಂತೆ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ನೀವು ಮಾರುಕಟ್ಟೆಯಲ್ಲಿ ಈ ಬೈಕ್ ಖರೀದಿಗೆ ಲಭ್ಯವಿರುತ್ತದೆ. ಈ ಬಜಾಜ್ ಡಿಸ್ಕವರ್ 125 ಬೈಕ್ ನಲ್ಲಿ 8 ಲೀಟರ್ ಇಂಧನ ಟ್ಯಾಂಕ್ ಅನ್ನು ಅಳವಡಿಸಲಾಗಿದೆ.

Bajaj Discover 125 bike that gives 70 km
Image Credit: Hoshangabadmedia

ಬಜಾಜ್ ಡಿಸ್ಕವರ್ 125 ಬೈಕ್ ಬೆಲೆ
ಬೈಕ್ ಸವಾರರಿಗಾಗಿ ಉತ್ತಮ ಆಸನವನ್ನು ಅಳವಡಿಸಲಾಗಿದ್ದು ಸೀಟ್ 805 mm ಎತ್ತರವನ್ನು ಹೊಂದಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 58752 ರೂ. ಅನ್ನು ಈ ಬೈಕ್ ಗೆ ನಿಗದಿಪಡಿಸಿದೆ. ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ನೀಡಲಾಗಿದೆ.

Join Nadunudi News WhatsApp Group

ಇನ್ನು LED DRL ಜೊತೆಗೆ ಟೈಲ್ ಲ್ಯಾಂಪ್ ಮತ್ತು ಪರಿಷ್ಕೃತ ಸೀಟ್ ಅನ್ನು ನೀಡಲಾಗಿದೆ. ಇನ್ನು 4-ಸ್ಪೀಡ್ ಗೇರ್ಬಾಕ್ಸ್ ಎಂಜಿನ್ ಅನ್ನು ಹೊಂದಿದೆ. ಈ ಬೈಕ್ 110 ಸಿಸಿ ಶಕ್ತಿಶಾಲಿ ಎಂಜಿನ್ ಪಡೆದಿದ್ದು, ಗರಿಷ್ಠ 10.8 bhp ಶಕ್ತಿಯನ್ನು ಮತ್ತು 11 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬಜಾಜ್ ಡಿಸ್ಕವರ್ 125 ಬೈಕ್ ಬರೋಬ್ಬರಿ 70 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group