Ads By Google

Bajaj CNG Bike: ಈ ಕಾರಣಕ್ಕೆ ಬಜಾಜ್ CNG ಖರೀದಿಗೆ ಮುಗಿಬಿದ್ದ ಜನರು, 330 Km ಮೈಲೇಜ್

Bajaj Freedom 125 CNG Bike

Image Credit: Original Source

Ads By Google

Bajaj Freedom 125 CNG  Bike: ಭಾರತೀಯ ಮಾರುಕಟ್ಟೆಯಲ್ಲಿ CNG ಚಾಲಿತ ಕಾರ್ ಗಳು ಲಭ್ಯವಿದ್ದವು. ಕಾರ್ ಗಳ ಹೊರತಾಗಿ ಈವರೆಗೆ ಬೈಕ್ ಗಳು CNG ಮಾದರಿಯಲ್ಲಿ ಸಿಗುತ್ತಿರಲಿಲ್ಲ. ಸದ್ಯ 2024 ರಲ್ಲಿ Bajaj ಕಂಪನಿಯು ತನ್ನ ಮೊತ್ತ ಮೊದಲ CNG ಚಾಲಿತ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ CNG ಚಾಲಿತ ಬೈಕ್ ನ ಕಾರುಬಾರು ಜೋರಾಗಿದೆ. ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದ್ದಂತೆ CNG ಚಾಲಿತ ಬೈಕ್ Bajaj Freedom 125 ಬಾರಿ ಬುಕಿಂಗ್ ಕಾಣುತ್ತಿದೆ ಎನ್ನಬಹುದು. ನಾವೀಗ ಈ ಲೇಖನದಲ್ಲಿ Bajaj Freedom 125 CNG ಬೈಕ್ ನ ಬಗ್ಗೆ ಒಂದಿಷ್ಟು ವಿವರಣೆ ನೀಡಲಿದ್ದೇವೆ.

Image Credit: Financialexpress

ಇನ್ನುಮುಂದೆ ಪೆಟ್ರೋಲ್ ಬೆಲೆ ಹೆಚ್ಚಳದ ಬಗ್ಗೆ ಯೋಚಿಸಬೇಡಿ
ದ್ವಿಚಕ್ರ ವಾಹನ ದೈತ್ಯ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಗಳನ್ನು ಪ್ರವೇಶಿಸಿದಾಗ 30,000 ಕ್ಕೂ ಹೆಚ್ಚು ಜನರು ಸಿಎನ್‌ಜಿ ಬೈಕ್‌ ನಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಈ ಸಿಎನ್‌ಜಿ ಬೈಕ್‌ ಗಾಗಿ ಈಗಾಗಲೇ ಸುಮಾರು 6,000 ಬುಕ್ಕಿಂಗ್‌ ಗಳನ್ನು ಪಡೆದಿರುವುದಾಗಿ ಬಜಾಜ್ ಬಹಿರಂಗಪಡಿಸಿದೆ.

ಇನ್ನು ಫ್ರೀಡಂ 125 ಬುಕ್ಕಿಂಗ್ ಜುಲೈ 18 ರಂದು ಪ್ರಾರಂಭವಾಯಿತು. ಈ ಬೈಕ್ ಅನ್ನು ರೂ. 1,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಈ ಹೊಸ ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್‌ ನ ಬೆಲೆಯು ರೂ.95,000 ದಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಎಂಡ್ ರೂಪಾಂತರಕ್ಕೆ ರೂ.1.10 ಲಕ್ಷದವರೆಗೆ iralide. ಈ CNG-ಚಾಲಿತ ಮೋಟಾರ್‌ಸೈಕಲ್ ಸಾಮಾನ್ಯ ಪೆಟ್ರೋಲ್ ಬೈಕ್‌ ಗೆ ಹೋಲಿಸಿದರೆ ಇಂಧನದ ಮೇಲಿನ ವೆಚ್ಚವನ್ನು 65 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.

Image Credit: India Today

ನಿಮ್ಮ ಪೆಟ್ರೋಲ್ ಖರ್ಚನ್ನು ಉಳಿಸಲು ಲಾಂಚ್ ಆಯ್ತು CNG ಬೈಕ್
ಮಾರುಕಟ್ಟೆಯಲ್ಲಿ ಈ ಬಜಾಜ್ ಫ್ರೀಡಂ 125 ಬೈಕ್ ಡ್ರಮ್, ಡ್ರಮ್ ಎಲ್ಇಡಿ ಮತ್ತು ಡಿಸ್ಕ್ ಎಲ್ಇಡಿ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ನೀವು ಈ ಮೂರು ರೂಪಾಂತರಗಳನ್ನು ಆಕರ್ಷಕ EMI ಆಯ್ಕೆಯಲ್ಲಿ ಕೂಡ ಖರೀದಿಸಬಹುದು.

ಬಜಾಜ್ ಫ್ರೀಡಮ್ ಒಂದು ಸಿಎನ್‌ಜಿ ಟ್ಯಾಂಕ್ ಅನ್ನು ಒಳಗೊಂಡಿರುವ ಪ್ರಯಾಣಿಕರ ವರ್ಗದ ಮೋಟಾರ್‌ ಸೈಕಲ್ ಆಗಿದೆ. ಬಜಾಜ್ ಸಿಎನ್‌ಜಿ ಸ್ಪೋರ್ಟಿ ಸ್ಟೈಲಿಂಗ್, ಎಲ್‌ಇಡಿ ಹೆಡ್‌ ಲ್ಯಾಂಪ್‌ ಗಳು, ಬ್ಲೂಟೂತ್ ಕನೆಕ್ಟಿವಿಟಿ, ಗ್ರಾಫಿಕ್ಸ್‌ ನೊಂದಿಗೆ ಡ್ಯುಯಲ್ ಕಲರ್ ಸ್ಕೀಮ್ ಮತ್ತು ಫಸ್ಟ್-ಇನ್-ಕ್ಲಾಸ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್ ಅನ್ನು ಪಡೆಯುತ್ತದೆ. ಬೈಕ್‌ ನ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಈ ಬೈಕ್ ಡಿಸ್ಕ್ ಬ್ರೇಕ್ ಸೆಟಪ್‌ನೊಂದಿಗೆ ಆಲ್-ಡ್ರಮ್ ರೂಪಾಂತರದಲ್ಲಿ ಲಭ್ಯವಿದೆ.

Image Credit: Bikewale
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in