Bajaj: Ola S1 Air ಗೆ ಪೈಪೋಟಿ ನೀಡಲು ಬಜಾಜ್‌ನ ಹೊಸ ಎಲೆಕ್ಟ್ರಿಕ್ ಸ್ಕೂಟರ್

1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಬಜಾಜ್ ನ ಹೊಸ ಎಲೆಕ್ಟ್ರಿಕ್ ಸ್ಕೂಟರ್

Bajaj New Electric Scooter: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ವಾಹನಗಳು ಬಿಡುಗಡೆಯಾಗಿ ಸದ್ದುಮಾಡುತ್ತಿರುತ್ತವೆ. ದೇಶದಲ್ಲಿ ಪೆಟ್ರೋಲ್(Petrol) ಮತ್ತು ಡಿಸೇಲ್(Dieseal) ಬೆಲೆ ದಿನದಿಂದ ದಿನಕ್ಕೆ ಏರಿಕೆಯನ್ನ ಕಾಣುತ್ತಿರುವುದರ ಕಾರಣ ಜನರು ಹೆಚ್ಚು ಎಲೆಕ್ಟ್ರಿಕ್ ಕಾರ್(Electric Car) ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನ ಖರೀದಿ ಮಾಡಲು ಇಷ್ಟಪಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಬೇಡಿಕೆ ಇದೆ ಎನ್ನಬಹುದು. ಇದೀಗ ಭಾರತದಲ್ಲಿನ ವಿಶ್ವಾಸಾರ್ಹ ಕಂಪನಿಯಾದ ಬಜಾಜ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಹೊರಟಿದೆ.

Bajaj New Electric Scooter
Image Credit: Financialexpress

Bajaj New Electric Scooter
ಬಜಾಜ್ ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ಬಜಾಜ್‌ನ ಅಸ್ತಿತ್ವದಲ್ಲಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ ನಂತೆಯೇ ಇದೆ. Bajaj New Electric Scooter ಚೇತಕ್‌ನ ನವೀಕರಿಸಿದ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಬಜಾಜ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗಿಂದ ಕಡಿಮೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಹಾಗೆ ಕಂಪನಿಯು ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

Ola S1 Air ಗೆ ಪೈಪೋಟಿ ನೀಡಲು ಬಜಾಜ್‌ನ ಹೊಸ ಎಲೆಕ್ಟ್ರಿಕ್ ಸ್ಕೂಟರ್
ಬಜಾಜ್ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. Bajaj New Electric Scooter ಬೆಲೆ 1 ಲಕ್ಷಕ್ಕಿಂತ ಕಡಿಮೆ ಇದೆ. ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಬಜೆಟ್ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ ಜನಪ್ರಿಯ ಆಯ್ಕೆಯಾಗಿರುವ ಕಾರಣ OlaS1 Air ಗೆ ನೇರ ಸ್ಪರ್ಧೆಯನ್ನು ಒಡ್ಡುತ್ತದೆ.

Bajaj New Electric Scooter Price
Image Credit: Bikewale

Bajaj New Electric Scooter Price And Feature
ಬಜಾಜ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹಬ್ ಮೋಟಾರ್ ಮತ್ತು ಮುಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಯುನಿಟ್ ಸೇರಿದಂತೆ ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷೆ ಇದೆ. ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದಾದ ತೆಗೆಯಬಹುದಾದ ಬ್ಯಾಟರಿ ಅಳವಡಿಸಲಾಗಿದೆ ಎನ್ನುವ ವರದಿ ಇದೆ. ಇದರ ಬೆಲೆ 1 ಲಕ್ಷಕ್ಕಿಂತ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group