Bajaj 100cc Bike: 16 ಸಾವಿರಕ್ಕೆ ಸಿಗುತ್ತೆ 70 Km ಮೈಲೇಜ್ ಕೊಡುವ ಈ ಬಜಾಜ್ ಬೈಕ್, ಸ್ಪ್ಲೆಂಡರ್ ಗಿಂತ ಹೆಚ್ಚು ಡಿಮ್ಯಾಂಡ್.

70 Km ಮೈಲೇಜ್ ಕೊಡುವ ಬಜಾಜ್ ಬೈಕ್ ಅನ್ನು ಈಗ 16 ಸಾವಿರಕ್ಕೆ ಖರೀದಿಸಬಹುದಾಗಿದೆ.

Bajaj Platina 100 Financial Planning: ದೇಶಿಯ ಮಾರುಕಟ್ಟೆಯಲ್ಲಿಅತಿ ಹೆಚ್ಚು ಜನಪ್ರಿಯತೆ ಪಡೆದಿರುವ BAJAJ ಕಂಪನಿ ತನ್ನ ಅನೇಕ ಹೊಸ ಹೊಸ ಮಾದರಿಯ ಬೈಕ್ ಗಳನ್ನೂ ಪರಿಚಯಿಸಿದೆ. ಸದ್ಯ ಈ ಹಬ್ಬದ ಸೀಸನ್ ನಲ್ಲಿ ಬೈಕ್ ಖರೀದಿಗೆ ಕೂಡ ಬಂಪರ್ ಆಫರ್ ಲಭ್ಯವಿದೆ. ಸದ್ಯ ದೇಶದಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆ ಆಗಿರುವುದರಿಂದ ಜನರು ಹೆಚ್ಚಾಗಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳನ್ನೂ ಖರೀದಿಸಲು ಇಷ್ಟಪಡುತ್ತಾರೆ.

ಇನ್ನು ಹೆಚ್ಚಿನ ಮೈಲೇಜ್ ನೀಡುವ ಬೈಕ್ ಗಳ ಪಟ್ಟಿಯಲ್ಲಿ Bajaj Platina 100 ಬೈಕ್ ಕೂಡ ಸೇರಿಕೊಂಡಿದೆ. ಕಂಪನಿಯು ಈ ಬೈಕ್ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ಕೂಡ ನೀಡಿದೆ. ನೀವು ಕೇವಲ 16 ಸಾವಿರಕ್ಕೆ 70 Km ಮೈಲೇಜ್ ಕೊಡುವ ಈ ಬಜಾಜ್ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Bajaj Platina 100 Financial Planning
Image Credit: Jansatta

Bajaj Platina 100 ಬೈಕ್
ಈ ಬಜಾಜ್ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಬೈಕ್ ನಲ್ಲಿ 102 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.9 ಪಿಎಸ್ ಪವರ್ ಮತ್ತು 8.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್ 4- ಸ್ಪೀಡ್ ಗೇರ್‌ ಬಾಕ್ಸ್ ಅನ್ನು ಹೊಂದಿದೆ ಹಾಗೆಯೆ ಕಂಪನಿಯು ಪ್ರತಿ ಲೀಟರ್‌ ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ. ಇನ್ನು ಪ್ಲಾಟಿನಾ 100, ಪ್ಲಾಟಿನಾ 110 ಡ್ರಮ್, ಪ್ಲಾಟಿನಾ 110 ABS ಮೂರು ರೂಪಾಂತರಗಳಲ್ಲಿ ಬರುತ್ತದೆ. ಎಂದು ನಾವು ನಿಮಗೆ ಹೇಳೋಣ. Bajaj Platina 100 ಬೈಕ್ ನ ಬೆಲೆ ರೂ. 65,856 ರಿಂದ ರೂ. 72,224 ವರೆಗೆ ಇರುತ್ತದೆ.

16 ಸಾವಿರಕ್ಕೆ ಸಿಗುತ್ತೆ 70 Km ಮೈಲೇಜ್ ಕೊಡುವ ಈ ಬಜಾಜ್ ಬೈಕ್
ನೀವು ಈ ಬೈಕನ್ನು ಖರೀದಿಸಲು ಬಯಸಿದರೆ Bajaj Platina 100 ನ ES ಡ್ರಮ್ ರೂಪಾಂತರವು ದೆಹಲಿಯ ರಸ್ತೆಯಲ್ಲಿ ರೂ. 82,120 ಬೆಲೆನಿಗದಿಪಡಿಸಲಾಗಿದೆ. ಆದರೆ ನಿಮ್ಮ ಬಳಿ ಅಷ್ಟು ಹಣವಿಲ್ಲದಿದ್ದರೆ ನೀವು ಚಿಂತಿಸುವ ಅಗತ್ಯ ಇಲ್ಲ. ನೀವು ಕೇವಲ 16 ಸಾವಿರ ಡೌನ್ ಪೇಮೆಂಟ್ ಪಾವತಿಸುವ ಮೂಲಕ Bajaj Platina 100 ಬೈಕ್ ಅನ್ನು ಮನೆಗೆ ತರಬಹುದು. ಇನ್ನು ಬ್ಯಾಂಕ್ ನಿಮಗೆ ಶೇಕಡಾ 9.7 ರ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಮಾಸಿಕ ಕಂತು 3,042 ರೂ. ಪಾವತಿಸುವ ಮೂಲಕ ನೀವು ಸಾಲವನ್ನು ಮರುಪಾವತಿ ಮಾಡಬಹುದು.

Bajaj Platina 100 Bike Feature
Image Credit: Loankaisemilega

Bajaj Platina 100 Bike Feature
* Anti-skid braking system
*AVB technology
*Fuel Eco Gauge
*Diesel Angel electric start and cell-start halogen-lit headlight
*LED DRL

Join Nadunudi News WhatsApp Group

Join Nadunudi News WhatsApp Group