New Bajaj Pulsar 150: ದೈನಂದಿನ ಜೀವನದಲ್ಲಿ ಯುವಕರು ಕೆಲಸಕ್ಕೆ ಹೋಗುವಾಗ ಅಥವಾ ಕಡಿಮೆ ದೂರದ ಪ್ರಯಾಣಗಳಿಗೆ ಬೈಕ್ ಹೆಚ್ಚು ಹೆಚ್ಚು ಬಳಸುತ್ತಾರೆ. ಇದೀಗ ನಾವು ದೈನಂದಿನ ಪ್ರಯಾಣಿಕರಿಗೆ ಉತ್ತಮ ಕಾರ್ಯಕ್ಷಮತೆ ಹಾಗೂ ಇಂಧನ ದಕ್ಷತೆಯನ್ನು ನೀಡುವ Bajaj Pulsar 150 ಬೈಕ್ ಬಗ್ಗೆ ಮಾಹಿತಿ ನೀಡುತ್ತೇವೆ. ಇದೀಗ Bajaj Pulsar 150 ಹೊಸ ಅವತಾರದಲ್ಲಿ ಭಾರತದಲ್ಲಿ ಲಾಂಚ್ ಆಗಿದೆ. ಇದೀಗ ನಾವು ನವೀಕರಿಸಿದ Bajaj Pulsar 150 ಬೆಲೆ ಮತ್ತು ಮೈಲೇಜ್? Bajaj Pulsar 150 ಹೊಸ ಮಾದರಿ ಬೈಕಿನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಹೊಸ ಬಜಾಜ್ ಪಲ್ಸರ್ 150
Bajaj Pulsar 150 ನಲ್ಲಿ ಡಿಸೈನ್ ಮತ್ತು ಫೀಚರ್ ಗಳಲ್ಲಿ ಕೆಲವು ಬದಲಾವಣೆಯನ್ನು ನಾವು ಕಾಣಬಹುದಾಗಿದೆ. ಹೊಸದಾಗಿ LED headlight and LED turn indicator ಸೇರ್ಪಡೆ ಮಾಡಲಾಗಿದೆ. ಹೊಸ ಗ್ರಾಫಿಕ್ಸ್ ಮತ್ತು ಕಲರ್ ಆಯ್ಕೆಗಳು ಬೈಕ್ ಗೆ ಆಧುನಿಕ ಲುಕ್ ನೀಡಿವೆ. ಬ್ಲೂಟೂತ್ ಸಂಪರ್ಕ ಮತ್ತು ಮೊಬೈಲ್ ನೋಟಿಫಿಕೇಶನ್ ಬೆಂಬಲಿಸುವ ಸಂಪೂರ್ಣ Digital instrument cluster ಅಳವಡಿಸಲಾಗಿದೆ, ಇದನ್ನು ಯುವ ಜನರು ಬಹಳ ಇಷ್ಟ ಪಡುತ್ತಾರೆ. Bajaj Pulsar 150 ದೈನಂದಿನ ಬಳಕೆಗೆ ಉತ್ತಮವಾದ ಬೈಕ್ ಎಂದರೆ ತಪ್ಪಾಗಲ್ಲ.
Bajaj Pulsar 150 Engine Capacity
ನವೀಕರಿಸಿದ Bajaj Pulsar 150 ನಲ್ಲಿ ಯಾವುದೇ ಬದಲಾವಣೆ ಇಲ್ಲ. 149.5 cc ಸಿಂಗಲ್ ಸಿಲಿಂಡರ್ ಎಯ್ರ್-ಕೂಲ್ಡ್ ಎಂಜಿನ್ ಸುಮಾರು 13.8 bhp ಪವರ್ ಮತ್ತು 13.4 Nm ಟಾರ್ಕ್ ನೀಡುತ್ತದೆ. 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಪಲ್ಸರ್ 150 ಯಾವಾಗಲೂ ಉತ್ತಮ ಮೈಲೇಜ್ ಮತ್ತು ಪರ್ಫಾರ್ಮೆನ್ಸ್‌ಗೆ ಹೆಸರುವಾಸಿ. 47.5 ರಿಂದ 49 kmpl ಮೈಲೇಜ್ ಅನ್ನು ನೀಡುತ್ತದೆ.
Bajaj Pulsar 150 Price
ಕೈಗೆಟುಕುವ ಬೆಲೆಯಲ್ಲಿ ಶಕ್ತಿಶಾಲಿ ಬೈಕ್ ಬಯಸುವವರಿಗೆ Bajaj Pulsar 150 ಉತ್ತಮ ಆಯ್ಕೆ ಆಗಿದೆ. ಇದೀಗ 2026 ರ ಬಜಾಜ್ ಪಲ್ಸರ್ 150 ಮೂರು ಪ್ರಮುಖ ರೂಪಾಂತರಗಳಲ್ಲಿ ಲಭ್ಯವಿದೆ. ಈ ರೂಪಾಂತರಗಳ ಎಕ್ಸ್-ಶೋರೂಂ ಬೆಲೆಗಳು ( ದೆಹಲಿಯಲ್ಲಿ ) ಈ ಕೆಳಗಿನಂತಿವೆ,
- ಬಜಾಜ್ ಪಲ್ಸರ್ 150 SD (ಸಿಂಗಲ್ ಡಿಸ್ಕ್) ಬೆಲೆ – 1,08,772
- ಬಜಾಜ್ ಪಲ್ಸರ್ 150 SD UG (ಸಿಂಗಲ್ ಡಿಸ್ಕ್ ಅಪ್‌ಗ್ರೇಡ್) – 1,11,669
- ಬಜಾಜ್ ಪಲ್ಸರ್ 150 TD UG (ಟ್ವಿನ್ ಡಿಸ್ಕ್ ಅಪ್‌ಗ್ರೇಡ್) – 1,15,481
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಕಟಿಸಲಾಗುವುದಿಲ್ಲ. ಇದು ನಿಖರವಾದ ಮಾಹಿತಿ ಆಗಿದ್ದು ಹೆಚ್ಚಿನ ಮಾಹಿತಿಯನ್ನು ಶೋ ರೂಮ್ ನಲ್ಲಿ ತಿಳಿದುಕೊಳ್ಳಬಹುದು.

