Pulsar N150: ಯುವಕರನ್ನು ಸೆಳೆಯಲು ಬಜಾಜ್ 150cc ಬೈಕ್ ಲಾಂಚ್, ಕಡಿಮೆ ಬೆಲೆ 50 Km ಮೈಲೇಜ್.
ಪ್ರತಿ ಲೀಟರ್ ಗೆ 40 ರಿಂದ 50 ಕಿಲೋಮೀಟರ್ ಮೈಲೇಜ್ ನೀಡುವ ಬಜಾಜ್ ನ ನೂತನ ಮಾದರಿಯ ಬೈಕ್ ಮಾರುಕಟ್ಟೆಗೆ ಬಿಡುಗಡೆ.
Bajaj Pulsar N150 Price And Feature: ಇತ್ತೀಚಿಗೆ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯಲು ಬೈಕ್ ಪರಿಚಯವಾಗಿದ್ದು ಗ್ರಾಹಕರಿಗೆ ಸಾಕಷ್ಟು ಆಯ್ಕೆ ಲಭ್ಯವಾಗಿದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಬೈಕ್ ಗಳಿಂದ ಹಿಡಿದು ದುಬಾರಿ ಬೆಲೆಯ ಬೈಕ್ ಗಳು ಸಾಕಷ್ಟಿವೆ. ಇನ್ನು ಜನರು ಹೆಚ್ಚಾಗಿ ತಮ್ಮ ಬಜೆಟ್ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಗಳನ್ನೂ ಖರೀದಿಸಲು ಬಯಸುತ್ತಾರೆ.
ಸದ್ಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಷಯವಾಗಿ Bajaj ಟಾಪ್ ಸ್ಥಾನದಲ್ಲಿದೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ Bajaj ಕಂಪನಿ ಸಾಕಷ್ಟು ಮಾದರಿಯ ಬೈಕ್ ಗಳನ್ನೂ ಪರಿಚಯಿಸಿದೆ. ಇದೀಗ ಕಂಪನಿಯು ನೂತನ ಮಾದರಿಯನ್ನು ಪರಿಚಯಿಸಿದ್ದು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.
Bajaj Pulsar N150
ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಯಾದ Bajaj ಇದೀಗ ತಮ್ಮ Bajaj Pulsar N150 ಬೈಕ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ನೀವು ಈ ನೂತನ ಮಾದರಿಯ ಬೈಕ್ ಅನ್ನು ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಅವುಗಳೆಂದರೆ Racing Red, Ebony Black and Metallic Pearl White ಆಗಿದೆ. ಇನ್ನು ಕಂಪನಿಯು ತನ್ನ ಇನ್ನಿತರ ಮಾದರಿಗಿಂತ Pulsar N150 ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಿದೆ. ಬೈಕ್ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಸಂಯೋಜನೆಯನ್ನು ಅಳವಡಿಸಲಾಗಿದೆ.
Bajaj Pulsar N150 ಎಂಜಿನ್ ಸಾಮರ್ಥ್ಯ
Bajaj Pulsar N150 ನಲ್ಲಿ 149.68 CC Engine ಹಾಗು 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ನ ಎಂಜಿನ್ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, ಗರಿಷ್ಠ 14.3 ಬಿಎಚ್‌ಪಿ ಮತ್ತು ಗರಿಷ್ಠ ಟಾರ್ಕ್ 13.5 ಎನ್‌ಎಂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಬಜಾಜ್ ಪಲ್ಸರ್ N150 ಬೈಕ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದ ಮೊನೊ-ಶಾಕ್ ಹೊಂದಿದೆ. ಈ ಬೈಕ್ ಸವಾರಿಯ ಅನುಭವವನ್ನು ಉತ್ತಮಗೊಳಿಸುತ್ತದೆ.
Bajaj Pulsar N150 ಮೈಲೇಜ್ ಹಾಗೂ ಬೆಲೆ
ಈ ಬೈಕ್ ಸಿಂಗಲ್ ಚಾನೆಲ್ ABS ನೊಂದಿಗೆ ಬರುತ್ತದೆ. ಸಿಂಗಲ್-ಪಾಡ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಎರಡೂ ಬದಿಗಳಲ್ಲಿ ಸ್ಥಾಪಿಸಲಾಗಿದೆ. ಕಂಪನಿಯು ಬಜಾಜ್ ಪಲ್ಸರ್ N150 ನಲ್ಲಿ ಸಿಂಗಲ್-ಪೀಸ್ ಗ್ರಾಬ್ ರೈಲ್ ನೊಂದಿಗೆ ಸಿಂಗಲ್-ಪೀಸ್ ಸೀಟ್ ಗಳನ್ನು ನೀಡಿದೆ. ಇನ್ನು ಪ್ರತಿ ಲೀಟರ್ ಗೆ 40 ರಿಂದ 50 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಬೈಕ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆಯನ್ನು 1.18 ಲಕ್ಷ ರೂ. ಆಗಿದೆ.