Bajaj Pulsar: ಬಜಾಜ್ ಪಲ್ಸರ್ NS 200 ಬೈಕ್ ನ ಹೊಸ ಲುಕ್ ಗೆ ಯುವಕರು ಫಿದಾ, ಕಡಿಮೆ ಬೆಲೆ 50 Km ಮೈಲೇಜ್.
ಬಜಾಜ್ ಪಲ್ಸರ್ NS 200 ಬೈಕಿನ ಹೊಸ ಲುಕ್ ಗೆ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.
Bajaj Pulsar Ns 200 Bike: ಇಂದಿನ ಪೀಳಿಗೆಯವರಿಗೆ ಬೈಕ್ ಗಳ ಮೇಲೆ ಒಲವು ಜಾಸ್ತಿ. ಮಾರುಕಟ್ಟೆಯಲ್ಲಿ ಬರುವ ಪ್ರತಿ ಬೈಕ್ ಗಳ ಮೇಲು ಒಂದು ಕಣ್ಣು ಇಟ್ಟಿರುತ್ತಾರೆ. ಬೈಕ್ ಕ್ರೆಜ್ ಇಲ್ಲದವರು ಇರುವುದು ಕಡಿಮೆ. ಹಾಗೆ ಈಗ ಎಲ್ಲರ ಗಮನ ಬಜಾಜ್ ಪಲ್ಸರ್ NS 200 ಬೈಕ್ ನ ಮೇಲೆ ಎನ್ನಬಹುದು. ಬಜಾಜ್ ಮೋಟಾರ್ (Bajaj Motors) ತನ್ನ ಎಲ್ಲಾ ಹಳೆಯ ಬೈಕ್‌ಗಳಿಗೆ ಹೊಸ ನವೀಕರಣವನ್ನು ನೀಡಲು ಹೊರಟಿದೆ.
ಪಲ್ಸರ್ ಎನ್ಎಸ್ 200 (ಬಜಾಜ್ ಪಲ್ಸರ್ ಎನ್ಎಸ್200) ಹೆಸರನ್ನು ಇದರಲ್ಲಿ ಮೊದಲು ಸೇರಿಸಲಾಗಿದೆ. ಕಂಪನಿಗೆ ಸಂಭಂದಿಸಿದವರು ಬಜಾಜ್ ಪಲ್ಸರ್ ಎನ್ಎಸ್ 200 ಅನ್ನು ಸಂಪೂರ್ಣವಾಗಿ ಹೊಸ ಮಾದರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ . ಅಷ್ಟೇ ಅಲ್ಲದೆ ಶೀಘ್ರದಲ್ಲೇ ಕಂಪನಿಯು 8 ರೂಪಾಂತರಗಳಲ್ಲಿ ಸ್ಪೋರ್ಟ್ಸ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ.
ಬಜಾಜ್ ಪಲ್ಸರ್ NS 200 ಬೈಕ್ ನ ಬೆಲೆ
ಬಜಾಜ್ ಪಲ್ಸರ್ NS 200 ಬೈಕ್ ಇದು ಸಾಕಷ್ಟು ಸ್ಪೋರ್ಟ್ಸ್ ಬೈಕ್ ತರಹದ ಅನುಭವವನ್ನು ನೀಡುತ್ತದೆ. ಅದರ ಹೆಡ್ಲೈಟ್ ಅನ್ನು ವಿಭಿನ್ನ ರೀತಿಯಲ್ಲಿ ಸರಿಹೊಂದಿಸಲಾಗುತ್ತದೆ. ವಿನ್ಯಾಸವು ಸಂಪೂರ್ಣವಾಗಿ ಹೊಸದಾಗಿರಲಿದೆ . ಬಜಾಜ್ ಪಲ್ಸರ್ NS 200 ಬೈಕ್ ನ ಬೆಲೆ 1,60,000 ರೂ.ಗಳ ಅಂದಾಜು ಬೆಲೆಯಲ್ಲಿ ಪ್ರಾರಂಭಿಸಬಹುದು ಎನ್ನಲಾಗಿದೆ .
ಈ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡಲಾಗುವುದು. ಡ್ಯುಯಲ್ ಚಾನೆಲ್ ಎಬಿಎಸ್, ಮೊಬೈಲ್ ಕನೆಕ್ಟಿವಿಟಿ, ಸೈಡ್ ಇಂಡಿಕೇಟರ್, ಸರ್ವಿಸ್ ಇಂಡಿಕೇಟರ್ ಜೊತೆಗೆ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ನ್ಯಾವಿಗೇಷನ್ ಮತ್ತು ಬ್ಲೂಟೂತ್ ಸೌಲಭ್ಯವೂ ಇದರಲ್ಲಿರಲಿದೆ.
ಬಜಾಜ್ ಪಲ್ಸರ್ NS 200 ಬೈಕ್ ನ ಮೈಲೇಜ್
ಬಜಾಜ್ ಪಲ್ಸರ್ NS 200 ಬೈಕ್ ನ ಮೈಲೇಜ್ ತುಂಬ ಚೆನ್ನಾಗಿದ್ದು ಬೇರೆ ಬೈಕ್ ಗಳಿಗೆ ಹೋಲಿಸಿದರೆ ಉತ್ತಮ ಮೈಲೇಜ್ ಎನ್ನಲಾಗಿದೆ. ಈ ಬೈಕ್ ಪ್ರತಿ ಲೀಟರ್ ಗೆ 35 ರಿಂದ 45 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಬಾರಿ ಅದರ ಎಂಜಿನ್ ಅನ್ನು ಇನ್ನಷ್ಟು ಪರಿಷ್ಕರಿಸಲಾಗುತ್ತಿದೆ, ಇದರಿಂದಾಗಿ ಅದರ ಶಕ್ತಿಯು ಹೆಚ್ಚಾಗುತ್ತದೆ. ಹೊಸ ಲುಕ್ ನೊಂದಿಗೆ ಇಂಜಿನ್ ಹಾಗು ಮೈಲೇಜ್ ಸಾಮರ್ಥ್ಯ ಹೆಚ್ಚಿದ್ದರಿಂದ ಈ ಬೈಕ್ ಎಲ್ಲರಿಗೂ ಇಷ್ಟ ಆಗುವ ಸಾಧ್ಯತೆ ಇದೆ .