KSRTC: ಉಚಿತ ಬಸ್ ಪ್ರಯಾಣದ ಬೆನ್ನಲ್ಲೇ ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಸಿಹಿ ಸುದ್ದಿ.
ಬೆಂಗಳೂರಿನಿಂದ ತಿರುಪತಿಗೆ ಹೋಗುವ ಭಕ್ತರಿಗೆ ಶುಭ ಸುದ್ದಿ ನೀಡಿದ ರಾಜ್ಯ ಸರ್ಕಾರ.
Bangalore To Tirumala Package: ಪ್ರತಿನಿತ್ಯ ತಿರುಪತಿ ತಿರುಮಲನ (Venkateshwara Temple Tirumala) ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಿದೇಶದಿಂದಲೂ ಕೂಡ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ.
ಇನ್ನು ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಮಂಡಳಿಯು ವಿವಿಧ ಸೌಲಭ್ಯವನ್ನು ನೀಡುತ್ತದೆ. ಇದೀಗ ರಾಜ್ಯ ಸರ್ಕಾರ ಉಚಿತ ಬಸ್ ನೀಡಿರುವ ಬೆನ್ನಲ್ಲೇ ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಸಿಹಿ ಸುದ್ದಿ ನೀಡಿದೆ.
ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಸಿಹಿ ಸುದ್ದಿ
ಇದೀಗ ತಿರುಪತಿ ತಿರುಮಲನ ದರ್ಶನ ಪಡೆಯುವ ಭಕ್ತ ವೃಂದಕ್ಕೆ ಹೊಸ ಸೌಲಭ್ಯ ನೀಡಲಾಗುತ್ತಿದೆ. ಬೆಂಗಳೂರಿನಿಂದ ತಿರುಪತಿಗೆ ಹೋಗುವ ಭಕ್ತರಿಗೆ KSRTC ಶುಭ ಸುದ್ದಿ ನೀಡಿದೆ. ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. KSRTC ಬೆಂಗಳೂರು ಟು ತಿರುಮಲ ಪ್ಯಾಕೇಜ್ ಅನ್ನು ಘೋಷಿಸುವ ಮೂಲಕ ಸಾವಿರಾರು ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಪ್ಯಾಕೇಜ್ ನ ಜೊತೆಗೆ ಭಕ್ತರು ಶೀಘ್ರ ದರ್ಶನದ ಟಿಕೆಟ್ ಅನ್ನು ಕೂಡ ಪಡೆಯುವ ಅವಕಾಶ ಸಿಗಲಿದೆ.
ಬೆಂಗಳೂರು ಟು ತಿರುಮಲ ಪ್ಯಾಕೇಜ್
KSRTC ಬೆಂಗಳೂರು ಟು ತಿರುಮಲ ಪ್ಯಾಕೇಜ್ ಅನ್ನು ಪ್ರಯಾಣ ಮಾಡಲು ಬಯಸುವ ಪ್ರಯಾಣಿಕರು 30 ದಿನಗಳ ಮುಂಚಿತವಾಗಿಯೇ ಬುಕಿಂಗ್ ಮಾಡಿಕೊಳ್ಳಬೇಕು. ಆನ್ಲೈನ್, ಮೊಬೈಲ್ ಬುಕಿಂಗ್ ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಪ್ರಯಾಣದ ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದು. ಈ ಪ್ಯಾಕೇಜ್ ನ ಅಡಿಯಲ್ಲಿ ಉಪಹಾರ, ತಿರಚೂರಿನಲ್ಲಿರುವ ಪದ್ಮಾವತಿ ದೇವಾಲಯಕ್ಕೆ ಭೇಟಿ, ತಿರುಮಲದಲ್ಲಿ ಶೀಘ್ರ ದರ್ಶನ ಹಾಗು ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸೌಲಭ್ಯವನ್ನು ಪಡೆಯಬಹುದು.
ಈ ವಿಶೇಷ ಪ್ಯಾಕೇಜ್ ನ ಬೆಲೆ ಎಷ್ಟು
KSRTC ಈ ವಿಶೇಷ ಪ್ಯಾಕೇಜ್ ನಲ್ಲಿ ಶುಕ್ರವಾರ ಮತ್ತು ಶನಿವಾರ ಒಬ್ಬರಿಗೆ 2,600 ಮತ್ತು ಜಿಎಸ್ ಟಿ ಹಾಗೂ 6 ವರ್ಷದಿಂದ 12 ವರ್ಷದ ಒಳಗಿನ ಮಕ್ಕಳಿಗೆ 2,000 ಮತ್ತು ಜಿಎಸ್ ಟಿ ವಿಧಿಸಲಾಗುತ್ತದೆ. ಇನ್ನು ಸೋಮವಾರದಿಂದ ಶುಕ್ರವಾರ ಪ್ರಯಾಣಿಸುವವರು ಒಬ್ಬರಿಗೆ 2,200 ಮತ್ತು ಜಿಎಸ್ ಟಿ ಹಾಗೂ 6 ವರ್ಷದಿಂದ 12 ವರ್ಷದ ಒಳಗಿನ ಮಕ್ಕಳಿಗೆ 1,800 ಮತ್ತು ಜಿಎಸ್ ಟಿ ವಿಧಿಸಲಾಗುತ್ತದೆ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಹೊರಟ ಈ ಬಸ್ ಮರುದಿನ ರಾತ್ರಿ 10 ಗಂಟೆಗೆ ತಲುಪುತ್ತದೆ.