Account Close: ಬ್ಯಾಂಕ್ ಖಾತೆ ಇದ್ದವರಿಗೆ ಜಾರಿಗೆ ಬಂತು 6 ಹೊಸ ನಿಯಮ, ಈ ಕೆಲಸ ಮಾಡುವುದು ಕಡ್ಡಾಯ.
ಬ್ಯಾಂಕ್ ಖಾತೆ ಮುಚ್ಚುವ ಸಮಯದಲ್ಲಿ ಈ 6 ಕೆಲಸ ಕಡ್ಡಾಯವಾಗಿ ಮಾಡಬೇಕು.
Bank Account Closing Process: ಬ್ಯಾಂಕ್ ಖಾತೆ (Bank Account) ಈಗ ಎಲ್ಲರೂ ಮಾಡೇ ಮಾಡುತ್ತಾರೆ. ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದ ಕಾರಣ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆ ಮಾಡಿಸುತ್ತಾರೆ ಎಂದು ಹೇಳಬಹುದು. ಇದರ ನಡುವೆ ಬ್ಯಾಂಕ್ ಖಾತೆ ಇದ್ದವರಿಗೆ RBI ಕೆಲವು ಹೊಸ ನಿಯಮಗಳನ್ನ ಜಾರಿಗೆ ತರುವ ಕೆಲಸವನ್ನ ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹೌದು ಬ್ಯಾಂಕ್ ಗ್ರಾಹಕರ ಹಿತದೃಷ್ಟಿಯಿಂದ ಮತ್ತು ಜನರಿಗೆ ಯಾವುದೇ ರೀತಿಯಲ್ಲಿ ಮೋಸ ಆಗಬಾರದು ಅನ್ನುವ ಉದ್ದೇಶದಿಂದ RBI ಮತ್ತು ಕೇಂದ್ರ ಸರ್ಕಾರ ಕೆಲವು ಅಗತ್ಯ ನಿಯಮಗಳನ್ನ ದೇಶದಲ್ಲಿ ಜಾರಿಗೆ ತರುತ್ತಿದ್ದು ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ನಿಯಮವನ್ನ ಪಾಲನೆ ಮಾಡುವುದು ಉತ್ತಮ ಎಂದು ಹೇಳಬಹುದು.
ಬ್ಯಾಂಕ್ ಖಾತೆ ಇದ್ದವರಿಗೆ ಹೊಸ ನಿಯಮಗಳು
ಹೌದು ಬ್ಯಾಂಕ್ ಖಾತೆ ಹೊಂದಿರುವ ಜನರಿಗೆ RBI ಮತ್ತು ಬ್ಯಾಂಕುಗಳು ಒಗ್ಗೂಡಿಕೊಂಡು ಕೆಲವು ನಿಯಮಗಳನ್ನ ಜಾರಿಗೆ ಬರುತ್ತಿದೆ. ಹೌದು ಬ್ಯಾಂಕ್ ಖಾತೆ ತೆರೆಯುವ ಸಮಯದಲ್ಲಿ ಮತ್ತು ಬ್ಯಾಂಕ್ ಖಾತೆ ಮುಚ್ಚುವ ಸಮಯದಲ್ಲಿ ಕೆಲವು ಅಗತ್ಯ ನಿಯಮಗಳನ್ನ ಜನರು ಪಾಲನೆ ಮಾಡಬೇಕಾಗಿದೆ. ಕೆಲವು ಜನರು ವ್ಯವಹಾರದ ಉದ್ದೇಶದಿಂದ ಹಲವು ಬ್ಯಾಂಕುಗಳಲ್ಲಿ ಖಾತೆಯನ್ನ ತೆರೆಯುವ ಈ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದ್ದು ಈ ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಅನುಭವಿಸಬೇಕಾಗುತ್ತದೆ.
ಬ್ಯಾಂಕ್ ಖಾತೆ ಮುಚ್ಚುವ ಸಮಯದಲ್ಲಿ ಈ 6 ವಿಷಯ ನೆನಪಿನಲ್ಲಿರಲಿ
*ಬಾಕಿ ಉಳಿದಿರುವ ವಹಿವಾಟು
ಹೌದು ಬ್ಯಾಂಕ್ ಖಾತೆ ಮುಚ್ಚುವ ಸಮಯದಲ್ಲಿ ನಿಮ್ಮ ಯಾವುದಾದರೂ ವಹಿವಾಟು ಇದ್ದಲ್ಲಿ ಅದನ್ನ ಕಾರ್ಯಗತ ಮಾಡುವ ತನಕ ಕಾಯಬೇಕಾಗುತ್ತದೆ. ನಿಮ್ಮ ಖಾತೆಯಲ್ಲಿ ಯಾವುದಾದರೂ ವಹಿವಾಟು ಬಾಕಿ ಇದ್ದರೆ ನೀವು ನಿಮ್ಮ ಖಾತೆಯನ್ನು ಮುಚ್ಚಲು ಸಾಧ್ಯವಾಗುವುದಿಲ್ಲ.
*ಬ್ಯಾಂಕ್ ಖಾತೆಯಲ್ಲಿ ಋಣಾತ್ಮಕ ಬ್ಯಾಲೆನ್ಸ್
ನೀವು ನಿಮ್ಮ ಖಾಯೆಯಲ್ಲಿ ಮಿನಿಮಂ ಹಣವನ್ನ ಕಾಯ್ದುಕೊಳ್ಳದೆ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಮುಚ್ಚಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ನೀವು ಬ್ಯಾಂಕ್ ಖಾತೆಯನ್ನು ಮುಚ್ಚಲು ಬಯಸಿದರೆ ನೀವು ಮೊದಲು ಬಾಕಿ ಇರುವ ಹಣವನ್ನ ಪಾವತಿ ಮಾಡಿ ನಂತರ ಖಾತೆಯನ್ನು ಮುಚ್ಚಬೇಕಾಗುತ್ತದೆ.
*ಖಾತೆ ಮುಚ್ಚುವ ಸಮಯದಲ್ಲಿ ಅಗತ್ಯವಾಗಿ ಶುಲ್ಕ ಕಟ್ಟಬೇಕು
ಹೌದು ನೀವು ಯಾವುದೇ ಬ್ಯಾಂಕಿನ ಖಾತೆಯನ್ನು ಮುಚ್ಚಲು ಬಯಸಿದರೆ ಅದರ ಶುಲ್ಕವನ್ನ ಕಡ್ಡಾಯವಾಗಿ ಪಾವತಿ ಮಾಡಬೇಕು. ಖಾತೆ ಮುಚ್ಚುವ ಶುಲ್ಕ ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಬೇರೆಬೇರೆ ಆಗಿರುತ್ತದೆ.
*ಮಾಸಿಕ ಪಾವತಿ ಆದೇಶ
ನಿಮ್ಮ ಖಾತೆಯಲ್ಲಿ ಯಾವುದೇ ರೀತಿಯ ಮಾಸಿಕ ಪಾವತಿ ಆದೇಶವು ಸಕ್ರಿಯವಾಗಿದ್ದರೆ ನೀವು ಖಾತೆಯನ್ನು ಮುಚ್ಚಲು ಸಾಧ್ಯವಿಲ್ಲ. ನೀವು ಮೊದಲು ಮಾಸಿಕ ಪಾವತಿಯನ್ನು ನಿಷ್ಕ್ರಿಯ ಮಾಡಬೇಕಾಗುತ್ತದೆ, ನಿಮ್ಮ ಖಾತೆ ಡಿಫಾಲ್ಟ್ ಆಗಿದ್ದರೆ ನೀವು ಖಾತೆಯನ್ನು ಮುಚ್ಚಲು ಸಾಧ್ಯವಿಲ್ಲ.
*ಬ್ಯಾಂಕ್ ಲಾಕರ್ ಬಾಡಿಗೆಗೆ ಲಿಂಕ್ ಮಾಡುವುದು
ನೀವು ಬ್ಯಾಂಕಿನಲ್ಲಿ ಲಾಕರ್ ಪಡೆದಿದ್ದರೆ ನಿಮ್ಮ ಖಾತೆಯನ್ನು ಬ್ಯಾಂಕ್ ಲಾಕರ್ ಲಿಂಕ್ ಮಾಡಲಾಗಿರುತ್ತದೆ, ಅಂತಹ ಸಮಯದಲ್ಲಿ ಬ್ಯಾಂಕ್ ಖಾತೆಯನ್ನು ಮುಚ್ಚಲು ಬಯಸಿದರೆ ನೀವು ಮೊದಲು ಬ್ಯಾಂಕ್ ಲಾಕರ್ ಅನ್ನು ಡೀಲಿಂಕ್ ಮಾಡಬೇಕಾಗುತ್ತಾದೆ.
*ಎಲ್ಲಾ ದಾಖಲೆಗಳನ್ನು ಡೌನ್ಲೋಡ್ ಮಾಡಿ
ನೀವು ಬ್ಯಾಂಕ್ ಖಾತೆಯನ್ನು ಮುಚ್ಚುವ ಸಮಯದಲ್ಲಿ ಎಲ್ಲಾ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಹೀಗೆ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಎಲ್ಲಾ ದಾಖಲೆಗಳನ್ನ ಪಡೆದು ಖಾತೆ ಮುಚ್ಚಿದರೆ ಮತ್ತೆ ನಿಮ್ಮ ಖಾತೆ ಪರಿಶೀಲನೆ ಮಾಡಲು ಸಾಧ್ಯವಾಗುವುದಿಲ್ಲ.