Cyber Scam: ತೆರಿಗೆ ಕಟ್ಟುವಾಗ ಎಚ್ಚರ ತಪ್ಪಿದರೆ ನಿಮ್ಮ ಖಾತೆ ಖಾಲಿ, ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ.
ತೆರಿಗೆ ಇಲಾಖೆಯ ಹೆಸರಿನಲ್ಲಿ ಸೈಬರ್ ಕಳ್ಳರು ನಕಲಿ ಸಂದೇಶ ಕಳುಹಿಸುತ್ತಿದ್ದು ಎಚ್ಚರ ತಪ್ಪಿದರೆ ಅವರು ನಮ್ಮ ಖಾತೆಯಿಂದ ಹಣವನ್ನ ಕೊಳ್ಳೆ ಹೊಡೆಯಲಿದ್ದಾರೆ.
Income Tax Cyber Scam: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ (Cyber Crime) ಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಿದೆ. ಇದೀಗ ಸೈಬರ್ ಕ್ರೈಮ್ ಮಾಡುವವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರ ಮೇಲೆ ಹೊಸ ರೀತಿಯ ಹಗರಣಗಳು ನಡೆಯುತ್ತಿದೆ. ಸೈಬರ್ ಕ್ರೈಮ್ ನಿಂದ ಆಗುತ್ತಿರುವ ವಂಚನೆಯಿಂದ ಎಚ್ಚರವಾಗಿರಿ ಎಂದು ಆದಾಯ ಇಲಾಖೆ ಸೂಚನೆ ನೀಡಿದೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರ ವಿರುದ್ಧ ನಡೆಯುತ್ತಿದೆ ವಂಚನೆ
ಇದೀಗ ಸೈಬರ್ ಅಪರಾಧಿಗಳು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಗಳ ಹಾಕುತ್ತಿದ್ದಾರೆ. ಸೈಬರ್ ಕ್ರೈಮ್ ನ ಮೂಲಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹಣ ಗಳಿಸುತ್ತಿದ್ದಾರೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಈ ನಕಲಿ ಸಂದೇಶಗಳು ಯಾವ ರೀತಿ ಇರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ನಕಲಿ ಸಂದೇಶಗಳ ಬಗ್ಗೆ ಮಾಹಿತಿ
*ಬ್ಯಾಂಕ್ ಖಾತೆಯನ್ನು ನಿರ್ಬಂದಿಸಲಾಗುವುದು ಎಂದು ವಂಚಕರು ನಕಲಿ ಸಂದೇಶಗಳನ್ನು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಕಳುಹಿಸುತ್ತಾರೆ.
*ಈ ಮೂಲಕ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಮಾಹಿತಿಯನ್ನು ನವೀಕರಿಸಲು ವಿನಂತಿಸುತ್ತಾರೆ.
*ಇನ್ನು ಸಂದೇಶಗಳು ಆಂಡ್ರಾಯ್ಡ್ ಪ್ಯಾಕೇಜ್ ಫೈಲ್ ಅನ್ನು ಡೌನ್ಲೋಡ್ ಮಾಡಲು ಲಿಂಕ್ ಅನ್ನು ಸಹ ನೀಡುತ್ತದೆ.
*ಅಪ್ಲಿಕೇಶನ್ ಗಳು ನಿಜವಾದ ಬ್ಯಾಂಕ್ ಅಪ್ಲಿಕೇಶನ್ ನಂತೆ ಕಾಣುತ್ತದೆ ಮತ್ತು ಹಣವನ್ನು ಕದಿಯಲು ಬಯಸುವ ವಂಚಕರು ತಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ನಕಲಿ ಅಪ್ಲಿಕೇಶನ್ ಗೆ ನಮೂದಿಸಿರುತ್ತಾರೆ. ಇನ್ನು ಬ್ಯಾಂಕ್ ಗೆ ಸಂಬಂಧಿಸಿದಂತೆ ಯಾವುದೇ SMS ಗಳು ಬಂದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ.