Ads By Google

Accounts Limits: ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಹೊಂದಬಹುದು, RBI ನಿಯಮ ಹೇಳುವುದೇನು…?

rbi rules on bank accounts limits for one person

Image Credit: Original Source

Ads By Google

Bank Account Limits In India: ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಯನ್ನು (Bank Account) ಸಾಮಾನ್ಯವಾಗಿ ಎಲ್ಲರೂ ಹೊಂದಿರುತ್ತಾರೆ. ಹಣದ ವ್ಯವಹಾರವನ್ನು ಮಾಡಲು ಬ್ಯಾಂಕ್ ಖಾತೆ ಬಹಳ ಅವಶ್ಯಕವಾಗಿದೆ. ಬ್ಯಾಂಕ್ ಖಾತೆ ಇಲ್ಲದೆ ಹಣದ ವ್ಯವಹಾರ ಮಾಡುದು ಕಷ್ಟ ಸಾಧ್ಯ. ಈ ಕಾರಣಕ್ಕೆ ಜನರು ಒಂದಾದರು ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ RBI ಬ್ಯಾಂಕ್ ಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಇದೀಗ RBI ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದೆ.

Image Credit: Informal News

ಎಲ್ಲರಿಗೂ ಅವಶ್ಯಕ ಬ್ಯಾಂಕ್ ಖಾತೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ಅನೇಕ ಪ್ರಯೋಜನಗಳನ್ನು ಪಡೆಯಲು ಬ್ಯಾಂಕ್ ಖಾತೆ ಬಹಳ ಅವಶ್ಯಕವಾಗಿದೆ. ಮಕ್ಕಳಿಗೂ ಕೂಡ ಬ್ಯಾಂಕ್ ಖಾತೆ ಅಗತ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ವಯಕ್ತಿಕ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಖಾತೆಯನ್ನು ತೆರೆಯುತ್ತಾರೆ. ಆದರೆ ಈಗ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಖಾತೆಯನ್ನು ತೆರೆಯಬಹುದು ಎನ್ನುದಕ್ಕೆ RBI ಹೊಸ ನಿಯಮವನ್ನ ನಿಗದಿಪಡಿಸಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಹೊಂದಬಹುದು…?
ಪ್ರಸ್ತುತ ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬ್ಯಾಂಕ್ ಖಾತೆಯನ್ನು ತೆರೆಯುವ ಆಯ್ಕೆಯನ್ನು ಹೊಂದಿರುತ್ತಾರೆ. ಬ್ಯಾಂಕ್ ಖಾತೆಯಲ್ಲಿ ಸಂಬಳ ಖಾತೆ, ಜಂಟಿ ಖಾತೆ, ಉಳಿತಾಯ ಖಾತೆ ಸೇರಿದೆ. ಸಾಮಾನ್ಯವಾಗಿ ಎಲ್ಲರೂ ಉಳಿತಾಯ ಖಾತೆಯನ್ನು ತೆರೆಯುತ್ತಾರೆ. ಏಕೆಂದರೆ ಉಳಿತಾಯವು ಹೂಡಿಕೆ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ಪಡೆಯುತ್ತದೆ.

Image Credit: India TV News

ಭಾರತದಲ್ಲಿ ಒಬ್ಬ ವ್ಯಕ್ತಿ ತೆರೆಯಬಹುದಾದ ಖಾತೆಗೆ ಯಾವುದೇ ನಿರ್ಧಿಷ್ಟ ಮಿತಿ ಇಲ್ಲ. ಯಾವುದೇ ವ್ಯಕ್ತಿ ತನ್ನ ಇಚ್ಛೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಹಲವು ಬ್ಯಾಂಕ್ ಖಾತೆಯನ್ನ ತೆರೆಯಬಹುದಾಗಿದೆ. ಬ್ಯಾಂಕ್ ಖಾತೆ ತೆರೆಯಲು RBI ಯಾವುದೇ ಮಿತಿಯನ್ನ ವಿಧಿಸಿಲ್ಲ. ಆದರೆ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮಿತಿಯನ್ನ ಇರಿಸಿರಬೇಕು. ಇನ್ನು ಹೆಚ್ಚು ಬ್ಯಾಂಕ್ ಖಾತೆಯನ್ನ ಹೊಂದಿದ್ದು ಯಾವುದೇ ವ್ಯವಹಾರ ಮಾಡದೆ ಇದ್ದರೆ ನೀವು ದಂಡವನ್ನ ಪ್ರತಿ ವರ್ಷ ಕಟ್ಟಬೇಕಾಗುತ್ತದೆ. ಬ್ಯಾಂಕಿನ ಖಾತೆಯಲ್ಲಿ ಮಿನಿಮಮ್ ಹಣವನ್ನ ಕಡ್ಡಾಯವಾಗಿ ಇರಿಸಬೇಕು ಮತ್ತು ಮಿನಿಮಮ್ ಹಣವನ್ನ ಇರಿಸದೆ ಇದ್ದರೆ ದಂಡವನ್ನ ಕಟ್ಟಬೇಕಾಗುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in