Nominee: ಮದುವೆಯ ನಂತರ ನಾಮಿನಿಯನ್ನು ಬದಲಾಯಿಸದಿದ್ದರೆ ಏನಾಗುತ್ತದೆ…? RBI ರೂಲ್ಸ್ ಎಲ್ಲರಿಗೂ ಅನ್ವಯ.
ಇದೀಗ ಮದುವೆಯ ನಂತರ ಪತಿಯು ನಾಮಿನಿಯನ್ನು ಬದಲಾಯಿಸದಿದ್ದರೆ ಪತಿಯ ಮರಣದ ನಂತರ ಹಣ ಯಾರಿಗೆ ಸಿಗುತ್ತದೆ...?
Bank Account Nominee Rights: ದೇಶದ ವಿವಿಧ ಪ್ರತಿಷ್ಠಿತ Bank ಗಳು ಜನರಿಗೆ ಅನೇಕ ರೀತಿಯ Bank Account ಆಯ್ಕೆಯನ್ನು ನೀಡುತ್ತದೆ. ಉಳಿತಾಯ ಖಾತೆ, ಜಂಟಿ ಖಾತೆ, ಚಾಲ್ತಿ ಖಾತೆ, ಸಂಬಳ ಖಾತೆ ಸ್ಥಿರ ಠೇವಣಿ ಖಾತೆ, ಮರುಕಳಿಸುವ ಠೇವಣಿ ಖಾತೆ ಹೀಗೆ ಇನ್ನಿತರ ಖಾತೆಗಳ ಆಯ್ಕೆಗಳು ಜನರಿಗೆ ಲಭ್ಯವಿರುತ್ತದೆ. ಇನ್ನು ಬ್ಯಾಂಕ್ ಖಾತೆಯಲ್ಲಿನ ಹೂಡಿಕೆಯಿಂದಾಗಿ ನೀವು ಲಾಭವನ್ನು ಪಡೆಯಬಹದು.
ಬ್ಯಾಂಕ್ ಖಾತೆಯಲ್ಲಿ ನೀವು ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಿದರೆ ಬ್ಯಾಂಕ್ ನಿಮಗೆ ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕ್ ನೀಡುವ ಬಡ್ಡಿ ದರದಿಂದಾಗಿ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದು.
ಇನ್ನು ನೀವು ಬ್ಯಾಂಕ್ ಖಾತೆಯನ್ನು ತೆರೆಯುವಾಗ Nominee ಆಯ್ಕೆ ಮಾಡುವುದು ಸಹಜ. ಇನ್ನು ಬ್ಯಾಂಕ್ ಖಾತೆ ತೆರೆಯುವಾಗ Nominee ಎಷ್ಟು ಮುಖ್ಯ ಎನ್ನುವುದು ತಿಳಿದೇ ಇದೆ. ಇದೀಗ ಮದುವೆಯ ನಂತರ ಪತಿಯು ನಾಮಿನಿಯನ್ನು ಬದಲಾಯಿಸದಿದ್ದರೆ ಪತಿಯ ಮರಣದ ನಂತರ ಹಣ ಯಾರಿಗೆ ಸಿಗುತ್ತದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.
ಮರಣದ ನಂತರ ಬ್ಯಾಂಕ್ ಖಾತೆಗೆ ಯಾರು ಜವಾಬ್ದಾರರು..?
ಇನ್ನು ಬ್ಯಾಂಕ್ ನಲ್ಲಿ ಮಾಡಿರುವ ಹಣದ ಡೆಪಾಸಿಟ್ ಮೊತ್ತವು ನಿಮ್ಮ ಮರಣದ ನಂತರ ಏನಾಗುತ್ತದೆ ಎನ್ನುವ ಬಗ್ಗೆ ಪ್ರಶ್ನೆಗಳು ನಿಮಗೆ ಬಂದಿರಬಹುದು. ನಿಮ್ಮ ಮರಣದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಜವಾಬ್ದಾರರು ನಾಮಿನಿ ಆಗಿರುತ್ತಾರೆ ಎನ್ನುವ ವಿಚಾರ ನಿಮಗೆ ತಿಳಿದಿರಲಿ. ಹೌದು ನೀವು ಬ್ಯಾಂಕ್ ಖಾತೆಯನ್ನು ತೆರೆಯುವಾಗ ಯಾರನ್ನು ನಾಮಿನಿಯಾಗಿ ಸೇರಿಸಿರುತ್ತೀರೋ ಅವರು ನಿಮ್ಮ ಮರಣದ ನಂತರ ನಿಮ್ಮ ಬ್ಯಾಂಕ್ ಖಾತೆಯ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.
ಮದುವೆಯ ನಂತರ ನಾಮಿನಿಯನ್ನು ಬದಲಾಯಿಸದಿದ್ದರೆ ಏನಾಗುತ್ತದೆ..?
ನೀವು ಬ್ಯಾಂಕ್ ಖಾತೆಯನ್ನು ತೆರೆಯುವಾಗ ನಿಮ್ಮ ಖಾತೆಗೆ ಒಬ್ಬರನ್ನು ನಾಮಿನಿಯನ್ನಾಗಿ ಆಯ್ಕೆ ಮಾಡಬೇಕಾಗುತ್ತದೆ. ನಾಮಿನಿಯಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ಆಯ್ಕೆ ಮಾಡಿಕೊಳ್ಳಬಹದು. ನೀವು ಮರಣ ಹೊಂದಿದರೆ ಬ್ಯಾಂಕ್ ನಿಯಮಾನುಸಾರ ಪರಿಶೀಲನೆ ನಡೆಸಿ ನಾಮಿನಿಗೆ ಮೊತ್ತವನ್ನು ನೀಡಲಾಗುತ್ತದೆ.
ನೀವು ಮದುವೆಯ ನಂತರ ಬ್ಯಾಂಕ್ ಖಾತೆ ತೆರೆಯುವ ನಿಮ್ಮ ತಂದೆಯನ್ನೋ ಅಥವಾ ತಾಯಿಯನ್ನೋ ಖಾತೆಗೆ ನಾಮಿನಿಯನ್ನಾಗಿ ಮಾಡಿರುತ್ತೀರಿ. ಇನ್ನು ಮದುವೆಯ ನಂತರ ನಿಮ್ಮ ಪತ್ನಿಯ ಹೆಸರನ್ನು ನಾಮಿನಿಗೆ ಬದಲಾಯಿಸಬೇಕಾಗುತ್ತದೆ. ಈ ರೀತಿ ಬದಲಿಸಿದರೆ ಮಾತ್ರ ಪತಿಯ ಮರಣದ ನಂತರ ಪತ್ನಿಗೆ ಪತಿಯ ಬ್ಯಾಂಕ್ ಖಾತೆಯ ಹಣ ಲಭ್ಯವಾಗುತ್ತದೆ. ಇನ್ನು ಪತಿಯು ಮರಣಕ್ಕೂ ಮುನ್ನ ನಾಮಿನಿಯನ್ನು ಬದಲಿಸದಿದ್ದರೆ ಪತ್ನಿಯು ಕಾನೂನಿನ ಮೂಲಕ ತನ್ನ ಹಕ್ಕನ್ನು ಪಡೆಯುವ ಅವಕಾಶ ಇರುತ್ತದೆ.