Ads By Google

Account Holder: ನೀವು ಮರಣ ಹೊಂದಿದರೆ ನಿಮ್ಮ ಬ್ಯಾಂಕ್ ಖಾತೆಯ ಹಣ ಯಾರಿಗೆ ಸೇರುತ್ತದೆ…? RBI ರೂಲ್ಸ್.

Bank Account Nominee

Image Credit: Original Source

Ads By Google

Bank Account Rules On Death: ಜನಸಾಮಾನ್ಯರು ತಮ್ಮ ಬಳಿ ಇರುವ ಹಣವನ್ನು ಉಳಿತಾಯ ಮಾಡಲು ಬ್ಯಾಂಕ್ ಖಾತೆಯಲ್ಲಿ ಇರಿಸಲು ಇಷ್ಟಪಡುತ್ತಾರೆ. ಭಾರತೀಯ ಪ್ರತಿ ಪ್ರಜೆಯು ಕೂಡ ಒಂದಾದರು Bank account ಅನ್ನು ಹೊಂದಿರುತ್ತಾರೆ.

ಎಲ್ಲ ವೈಯಕ್ತಿಕ ದಾಖಲೆಗಳ ಜೊತೆಗೆ Bank account ಅನ್ನು ಹೊಂದಿರುವುದು ಕೂಡ ಮುಖ್ಯವಾಗಿದೆ. ಕೆಲ ಕೆಲಸಗಳಿಗೆ ಬ್ಯಾಂಕ್ ಖಾತೆಯ ಮಾಹಿತಿ ಅಗತ್ಯವಾಗಿರುತ್ತದೆ. ಇನ್ನು ತೆರಿಗೆ ಪಾವತಿದಾರರಿಗಂತೂ ಬ್ಯಾಂಕ್ ಅಕೌಂಟ್ ಹೆಚ್ಚು ಮುಖ್ಯವಾಗಿರುತ್ತದೆ.

Image Credit: Economictimes

Bank Account ಹೊಂದಿರುವವರಿಗೆ ಮಹತ್ವದ ಮಾಹಿತಿ
ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಜನರಿಗೆ ಅನೇಕ ರೀತಿಯ ಬ್ಯಾಂಕ್ ಖಾತೆ ಆಯ್ಕೆಯನ್ನು ನೀಡುತ್ತದೆ. ಉಳಿತಾಯ ಖಾತೆ, ಜಂಟಿ ಖಾತೆ, ಚಾಲ್ತಿ ಖಾತೆ, ಸಂಬಳ ಖಾತೆ ಸ್ಥಿರ ಠೇವಣಿ ಖಾತೆ, ಮರುಕಳಿಸುವ ಠೇವಣಿ ಖಾತೆ ಹೀಗೆ ಇನ್ನಿತರ ಖಾತೆಗಳ ಆಯ್ಕೆಗಳು ಜನರಿಗೆ ಲಭ್ಯವಿರುತ್ತದೆ. ಇನ್ನು ಬ್ಯಾಂಕ್ ಖಾತೆಯಲ್ಲಿನ ಹೂಡಿಕೆಯಿಂದಾಗಿ ನೀವು ಲಾಭವನ್ನು ಪಡೆಯಬಹದು. ಬ್ಯಾಂಕ್ ಖಾತೆಯಲ್ಲಿ ನೀವು ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಿದರೆ ಬ್ಯಾಂಕ್ ನಿಮಗೆ ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕ್ ನೀಡುವ ಬಡ್ಡಿ ದರದಿಂದಾಗಿ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದು.

ನೀವು ಮರಣ ಹೊಂದಿದರೆ ನಿಮ್ಮ ಬ್ಯಾಂಕ್ ಖಾತೆಯ ಹಣ ಯಾರಿಗೆ ಸೇರುತ್ತದೆ…?
ಇನ್ನು ಬ್ಯಾಂಕ್ ನಲ್ಲಿ ಮಾಡಿರುವ ಹಣದ ಡೆಪಾಸಿಟ್ ಮೊತ್ತವು ನಿಮ್ಮ ಮರಣದ ನಂತರ ಏನಾಗುತ್ತದೆ ಎನ್ನುವ ಬಗ್ಗೆ ಪ್ರಶ್ನೆಗಳು ನಿಮಗೆ ಬಂದಿರಬಹುದು. ನಿಮ್ಮ ಮರಣದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಜವಾಬ್ದಾರರು ನಾಮಿನಿ ಆಗಿರುತ್ತಾರೆ ಎನ್ನುವ ವಿಚಾರ ನಿಮಗೆ ತಿಳಿದಿರಲಿ. ಹೌದು ನೀವು ಬ್ಯಾಂಕ್ ಖಾತೆಯನ್ನು ತೆರೆಯುವಾಗ ಯಾರನ್ನು ನಾಮಿನಿಯಾಗಿ ಸೇರಿಸಿರುತ್ತೀರೋ ಅವರು ನಿಮ್ಮ ಮರಣದ ನಂತರ ನಿಮ್ಮ ಬ್ಯಾಂಕ್ ಖಾತೆಯ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

Image Credit: Newsncr

ಬ್ಯಾಂಕ್ ಖಾತೆಯನ್ನು ತೆರೆಯುವಾಗ ನಾಮಿನಿ ಆಯ್ಕೆ ಮುಖ್ಯ
ನೀವು ಬ್ಯಾಂಕ್ ಖಾತೆಯನ್ನು ತೆರೆಯುವಾಗ ನಿಮ್ಮ ಖಾತೆಗೆ ಒಬ್ಬರನ್ನು ನಾಮಿನಿಯನ್ನಾಗಿ ಆಯ್ಕೆ ಮಾಡಬೇಕಾಗುತ್ತದೆ. ನಾಮಿನಿಯಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ಆಯ್ಕೆ ಮಾಡಿಕೊಳ್ಳಬಹದು. ನೀವು ಮರಣ ಹೊಂದಿದರೆ ಬ್ಯಾಂಕ್ ನಿಯಮಾನುಸಾರ ಪರಿಶೀಲನೆ ನಡೆಸಿ ನಾಮಿನಿಗೆ ಮೊತ್ತವನ್ನು ನೀಡಲಾಗುತ್ತದೆ.

ಇನ್ನು ಜಂಟಿ ಖಾತೆಯಲ್ಲಿ ನಾಮಿನಿಯನ್ನು ಸೇರಿಸಲು ಎಲ್ಲರಿಂದಲೂ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. ಇನ್ನು Online Banking ನ ಮೂಲಕ ನೀವು ನಾಮಿನಿಯನ್ನು ಬದಲಾಯಿಸುವ ಅವಕಾಶ ಕೂಡಾ ಇರುತ್ತದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.