Bank Closure: ನೀವು ಹಣ ಇಟ್ಟ ಬ್ಯಾಂಕ್ ಮುಚ್ಚಿದರೆ ನಿಮ್ಮ ಹಣಕ್ಕೆ ಹೊಣೆ ಯಾರು…? ಸ್ಪಷ್ಟನೆ ನೀಡಿದ RBI.

ನೀವು ಹಣ ಇಟ್ಟಿರುವ ಬ್ಯಾಂಕ್ ಬಂದ್ ಮಾಡಿದರೆ ನಿಮ್ಮ ಹಣ ಏನಾಗಲಿದೆ.

Bank Closure Rules By RBI: ಸದ್ಯ RBI ದೇಶದಲ್ಲಿ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. RBI ಇತ್ತೀಚಿಗೆ ಬ್ಯಾಂಕುಗಳಿಗೆ ವಿವಿಧ ನಿಯಮವನ್ನು ಜಾರಿಗೊಳಿಸಿತ್ತು. ಯಾವ ಯಾವ ಬ್ಯಾಂಕುಗಳು RBI ನಿಯಮವನ್ನು ಉಲ್ಲಂಘನೆ ಮಾಡಿದೆಯೋ ಅಂತಹ ಬ್ಯಾಂಕ್ ಗಳ ವಿರುದ್ಧ RBI ಕಠಿಣ ಕ್ರಮ ಕೈಗೊಂಡಿದೆ.

ಇಅಗ್ಗಲೇ ದೇಶದಲ್ಲಿ RBI ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಮಾಡಿದೆ. ಈ ಮೂಲಕ ಸಹಕಾರಿ ಬ್ಯಾಂಕ್ ನಲ್ಲಿ ಹಣ ಇರಿಸಿದವರಿಗೆ RBI ಶಾಕ್ ನೀಡಿದೆ.

Bank Closure Rules By RBI
Image Credit: Informalnewz

ಸಹಕಾರಿ ಬ್ಯಾಂಕ್ ಗಳ ಪರವಾನಗಿ ರದ್ದು ಮಾಡಲು ಮುಂದಾದ RBI
ಸದ್ಯ ದೇಶದಲ್ಲಿ RBI ಕಳೆದ ಎರಡು ತಿಂಗಳಿನಿಂದ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ. ಗ್ರಾಹಕರಿಗೆ ಹೆಚ್ಚಿನ ಭದ್ರತೆಯನ್ನು ನೀಡುವ ಉದ್ದೇಶದಿಂದ RBI ಈ ಕ್ರಮ ಕೈಗೊಂಡಿದೆ. ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡುವುದರ ಜೊತೆಗೆ RBI ಪರವಾನಗಿ ರದ್ದಿಗಿರುವ ಬ್ಯಾಂಕ್ ಗ್ರಾಹಕರಿಗೆ ಹಣವನ್ನು ಹಿಂಪಡೆಯುವ ಮಿತಿಯನ್ನು ಕೂಡ ಅಳವಡಿಸಿದೆ.

ಈಗಾಗಲೇ ಲೈಸೆನ್ಸ್ ರದ್ದಾಗಿರುವ ಬ್ಯಾಂಕ್ ಗಳ ವಿವರ
*Urban Co-operative Bank Limited
*Sushruti Souharda Sahakari Bank (Bangalore,
*Shree Sharada Mahila Sahakari Bank in Tumkur,

RBI latest update
Image Credit: Oneindia

*Karnataka and Harihareshwar Bank in Satara,
*Maharashtra, United India Cooperative Bank Limited,
*Thiruvananthapuram Anantashayaman Shakari Bank (Kerala)
*Mallikarjuna Town Co-operative Bank Niamita (Maski, Karnataka)
*National Cooperative Bank Limited (Bahraich, UP)
*Nasik District Girna Sahkari Bank Limited (Maharashtra)

Join Nadunudi News WhatsApp Group

ಬ್ಯಾಂಕುಗಳ ಪರವಾನಗಿ ರದ್ದಾಗಲು ಕಾರಣವವೇನು..?
ಈ ಎಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ RBI ಈ ಕ್ರಮ ಕೈಗೊಂಡಿದೆ. ಇನ್ನು ಪರವಾನಗಿ ರದ್ದಾದ ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಬ್ಯಾಂಕ್ ನ ಪರವಾನಗಿ ರದ್ದಾದ ಬಳಿಕ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದಾಗಲಿ ಅಥವಾ ಗ್ರಾಹಕರು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ ಎಂದು RBI ಆದೇಶ ಹೊರಡಿಸಿದೆ.

Bank Closure Rules By RBI
Image Credit: Goodreturns

ನೀವು ಹಣ ಇಟ್ಟ ಬ್ಯಾಂಕ್ ಬಂದ್ ಆದರೆ ನಿಮ್ಮ ಹಣಕ್ಕೆ ಹೊಣೆ ಯಾರು..?
ಹಾಗೆಯೆ ಪ್ರತಿ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಅಡಿಯಲ್ಲಿ ರೂ. 5 ಲಕ್ಷದವರೆಗೆ ಠೇವಣಿಗಳನ್ನು ಪಡೆಯಬಹುದು. ಇದಕ್ಕಿಂತ ಹೆಚ್ಚಿನ ಠೇವಣಿ ಮೊತ್ತವನ್ನು ಕ್ಲೈಮ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು RBI ಮಾಹಿತಿ ನೀಡಿದೆ.

ಇನ್ನು ಬ್ಯಾಂಕ್ ನಲ್ಲಿ ಹಣ ಇಟ್ಟಿರುವ ಗ್ರಾಹಕರು ಚಿಂತಿಸುವಂತಾಗಿದೆ. ಬಂದ್ ಆಗಿರುವ ಬ್ಯಾಂಕ್ ನಲ್ಲಿ ಹಣ ಇಟ್ಟರೆ ಆ ಹಣಕ್ಕೆ ಗ್ರಾಹಕರೇ ಹೊಣೆಯಾಗುತ್ತಾರೆ ಹೊರತು ಬ್ಯಾಂಕ್ ಹೊಣೆಯಾಗುವುದಿಲ್ಲ. ಹೀಗಾಗಿ ನೀವು ಬ್ಯಾಂಕ್ ನಲ್ಲಿ ಹಣ ಇರಿಸುವ ಮೊದಲು ಬ್ಯಾಂಕ್ ನ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

Join Nadunudi News WhatsApp Group