Diwali Bank Offer: ಬ್ಯಾಂಕ್ ಖಾತೆ ಇದ್ದವರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡಿದ ಕೇಂದ್ರ, ಡಿ 31 ರ ತನಕ ಯಾವುದೇ ಶುಲ್ಕ ಇಲ್ಲ.
ಈ ಬ್ಯಾಂಕ್ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಬಂಪರ್ ರಿಯಾಯಿತಿ.
Bank Diwali Offer: ದೇಶದೆಲ್ಲಡೆ ಜನರು ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಾಚರಣೆಗಾಗಿ ಕಾಯುತ್ತಿದ್ದಾರೆ. November 12 ರಂದು ಎಲ್ಲೆಡೆ ದೀಪಾವಳಿ ಹಬ್ಬದ ಸಡಗರ ಮನೆಮಾಡಲಿದೆ.
ಇನ್ನು ವಿಶೇಷವಾಗಿ ಈ ಬೆಳಕಿನ ಹಬ್ಬಕ್ಕೆ ಆಟೋ ಮೊಬೈಲ್ ಕಂಪನಿಗಳು, ಇ-ಕಾಮರ್ಸ್ ಪ್ಲಾಟ್ ಫಾರಂ ಗಳುಅನೆಕ್ ರೀತಿಯ ರಿಯಾಯಿತಿಯನ್ನು ಬಿಡುಗಡೆ ಮಾಡುತ್ತಿದೆ. ಇನ್ನು UPI Payment ಅಪ್ಲಿಕೇಶನ್ ಕೂಡ ದಿವಾಲಿ ಹಬ್ಬಕ್ಕೆ ಆಫರ್ ಬಿಡುಗಡೆ ಮಾಡುತ್ತಿದೆ. ದಿವಾಲಿ ವಿಶೇಷಕ್ಕೆ ಜನರು ಅತಿ ಅಗ್ಗದ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ.
ಬ್ಯಾಂಕ್ ಖಾತೆ ಇದ್ದವರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡಿದ ಕೇಂದ್ರ
ಸದ್ಯ ದೇಶದ ಕೆಲ ಪ್ರತಿಷ್ಠಿತ ಬ್ಯಾಂಕ್ ಗಳು ಕೂಡ ಗ್ರಾಹಕರಿಗೆ ಬಂಪರ್ ಆಫರ್ ಹಾಗೂ ವಿವಿಧ ಕೊಡುಗೆಯನ್ನು ನೀಡಿದೆ. ಬ್ಯಾಂಕ್ ವಿವಿಧ ರೀತಿಯಲ್ಲಿ ಸಾಲ ಪರಿಹಾರ ನೀಡುವ ಮೂಲಕ ಗ್ರಾಹಕರಿಗೆ ದಿವಲಿ ಗಿಫ್ಟ್ ನೀಡುತ್ತಿದೆ. Bank of India, Bank of Baroda and Punjab National Bank ಇದೀಗ ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೆ ಬಂಪರ್ ರಿಯಾಯಿತಿಯನ್ನು ನೀಡುತ್ತಿದೆ. ನೀವು ಈ ಮೂರು ಬ್ಯಾಂಕ್ ನ ಗ್ರಾಹಕರಾಗಿದ್ದರೆ ಈ ದಿವಾಲಿ ಉಡುಗೊರೆ ಲಾಭವನ್ನು ಪಡೆದುಕೊಳ್ಳಿ.
ಈ ಬ್ಯಾಂಕ್ ಗ್ರಾಹಕರಿಗೆ ಡಿ. 31 ರ ತನಕ ಯಾವುದೇ ಶುಲ್ಕ ಇಲ್ಲ
*Punjab National Bank
PNB ದೀಪಾವಳಿ ಧಮಾಕಾ 2023 ಎಂಬ ಹೊಸ ಕೊಡುಗೆಯನ್ನು ಪ್ರಕಟಿಸಿದೆ. ಬ್ಯಾಂಕ್ ನ ಹೊಸ ಕೊಡುಗೆಯ ಅಡಿಯಲ್ಲಿ, PNB ಗ್ರಾಹಕರು ವರ್ಷಕ್ಕೆ 8.4 ಪ್ರತಿಶತದಷ್ಟು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು ಪಡೆಯಬಹುದು. ಯಾವುದೇ ಪ್ರಕ್ರಿಯೆ ಶುಲ್ಕ ಮತ್ತು ದಾಖಲಾತಿ ಶುಲ್ಕವಿಲ್ಲ. PNB ಯಿಂದ ಗೃಹ ಸಾಲವನ್ನು ಪಡೆಯಲು ಆಸಕ್ತಿ ಹೊಂದಿರುವವರಿಗೆ, ಬಡ್ಡಿ ದರವು 8.4 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಇದಲ್ಲದೆ, ನೀವು PNB ವೆಬ್ ಸೈಟ್ https://digihome.pnb.co.in/pnb/hl/ ಗೆ ಭೇಟಿ ನೀಡಬಹುದು ಮತ್ತು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
*State Bank Of India
SBI ಗ್ರಾಹಕರಿಗೆ ಅವರ ಕ್ರೆಡಿಟ್ ಬ್ಯೂರೋ ಸ್ಕೋರ್ ಆಧಾರದ ಮೇಲೆ ಟರ್ಮ್ ಲೋನ್ ಬಡ್ಡಿದರಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ಗಳನ್ನು ಹೊಂದಿರುವವರಿಗೆ ಶೇಕಡಾ 0.65 ರ ಬಡ್ಡಿದರದಲ್ಲಿ ಪರಿಹಾರವನ್ನು ನೀಡಲಾಗುತ್ತದೆ. ಉದಾಹರಣೆಗೆ, SBI ಗ್ರಾಹಕರು 700 ಮತ್ತು 749 ರ ನಡುವೆ CIBIL ಸ್ಕೋರ್ ಹೊಂದಿದ್ದರೆ, ಅವರು 8.7% ಬಡ್ಡಿ ದರದಲ್ಲಿ ಅವಧಿ ಸಾಲವನ್ನು ಪಡೆಯಬಹುದು. ಡಿ. 31 ರೊಳಗೆ ಈ ಆಫರ್ ಲಭ್ಯವಿರುತ್ತದೆ.
*Bank Of Baroda
ಬ್ಯಾಂಕ್ ಆಫ್ ಬರೋಡಾದ ಬ್ಯಾಂಕ್ ಗೃಹ ಸಾಲದ ಬಡ್ಡಿ ದರಗಳು ಶೇಕಡಾ 8.4 ರಿಂದ ಪ್ರಾರಂಭವಾಗುತ್ತವೆ. ಬ್ಯಾಂಕ್ ಯಾವುದೇ ಪ್ರಕ್ರಿಯೆ ಶುಲ್ಕವನ್ನು ವಿಧಿಸುವುದಿಲ್ಲ. ಇದಲ್ಲದೆ, ಬ್ಯಾಂಕ್ ಗ್ರಾಹಕರು ವರ್ಷಕ್ಕೆ 8.7 ಶೇಕಡಾ ಬಡ್ಡಿ ದರದಲ್ಲಿ ಕಾರು ಸಾಲಗಳನ್ನು ಸಹ ಪಡೆಯಬಹುದು. BOB ಗ್ರಾಹಕರು ಕಾರು ಮತ್ತು ಶಿಕ್ಷಣ ಸಾಲಗಳಿಗೆ ಯಾವುದೇ ಸಂಸ್ಕರಣಾ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ ಎಂದು ಬ್ಯಾಂಕ್ ಹೇಳಿದೆ. ಡಿ. 31 ರವರೆಗೆ BOB ನಲ್ಲಿ ಈ ಆಫರ್ ಗಳು ಲಭ್ಯವಿದೆ.