Ads By Google

Education Loan: ಶಿಕ್ಷಣಕ್ಕೆ ಸಾಲ ಪಡೆಯುವ ಸಾಕಷ್ಟು ವಿದ್ಯಾರ್ಥಿಗಳಿಗೆ ಈ ನಿಯಮ ತಿಳಿದಿಲ್ಲ, ಎಚ್ಚರ ಬಹಳ ಅಗತ್ಯ.

Before availing loan for education it is very important to understand some rules of banks.
Ads By Google

Education Loan Information: ಉನ್ನತ ಶಿಕ್ಷಣಕ್ಕಾಗಿ ಸಾಕಷ್ಟು ವಿದ್ಯಾರ್ಥಿಗಳು ಎಜುಕೇಷನ್ ಲೋನ್ (Education Loan) ಮಾಡುತ್ತಾರೆ. ಇದೀಗ ಸುಲಭವಾಗಿ ಎಜುಕೇಷನ್ ಲೋನ್ ಸಿಗುವ ಬಗ್ಗೆ ಮಾಹಿತಿ ಒಂದು ಹೊರ ಬಿದ್ದಿದೆ. ಹೌದು ಶಿಕ್ಷಣಕ್ಕೆ ಸಾಲ ಪಡೆದುಕೊಳ್ಳುವ ಮುನ್ನ ಬ್ಯಾಂಕುಗಳ ಕೆಲವು ನಿಯಮಗಳನ್ನ ಅರಿತುಕೊಳ್ಳುವುದು ಬಹಳ ಅವಶಕ್ಯವಾಗಿದೆ.

Image Credit: usembassy

ದುಬಾರಿಯಾಗಿದೆ ಶಿಕ್ಷಣ ವೆಚ್ಚ
ಇದೀಗ ಕಾಲದಲ್ಲಿ ಎಲ್ಲವೂ ಸಹ ಹೆಚ್ಚು ದುಬಾರಿಯಾಗಿದೆ. ಹಾಗೆ ಶಿಕ್ಷಣ ವೆಚ್ಚವು ಸಹ ದುಬಾರಿಯಾಗಿದೆ. ಅದರಲ್ಲೂ ವೃತ್ತಿಪರ ಉನ್ನತ ಶಿಕ್ಷಣ ಪಡೆಯಲು ಬಹಳ ಹಣ ವ್ಯಯವಾಗುತ್ತದೆ. ವಿದೇಶಗಳಲ್ಲಿ ಕಲಿಯಬೇಕಾದರಂತು ಲಕ್ಷ ಲಕ್ಷ ಹಣ ನೀರಿನಂತೆ ಖರ್ಚಾಗಿ ಹೋಗುತ್ತದೆ.

ಅಮೇರಿಕ ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಗಳಿಗೆ ಭಾರತೀಯ ಉನ್ನತ ವ್ಯಾಸಂಗಕ್ಕೆ ಹೆಚ್ಚಾಗಿ ಹೋಗುವುದುಂಟು. ಅಲ್ಲಿಯ ಸಾಧಾರಣ ಶಿಕ್ಷಣ ಸಂಸ್ಥೆಗಳ ಶುಲ್ಕವೇ ಕೋಟಿ ರೂಪಾಯಿ ಆಗಿರುತ್ತದೆ. ಅದರ ಜೊತೆಗೆ ಕಲಿಕಾ ಅವಧಿಯಲ್ಲಿ ಜೀವನ ವೆಚ್ಚ ಬೇರೆ ಇರುತ್ತದೆ.

Image Credit: wsj

ವಿದ್ಯಾರ್ಥಿಗಳಿಗೆ ಎಜುಕೇಷನ್ ಲೋನ್ ಪಡೆದುಕೊಳ್ಳಲು ಹೊಸ ಮಾಹಿತಿ
ಸಾಮಾನ್ಯ ವ್ಯಕ್ತಿಗಳ ಮಕ್ಕಳು ಓದಲು ಬುದ್ದಿದಂತರಾಗಿದ್ದರೂ ಸಹ ಅವರಿಗೆ ಉನ್ನತ ಶಿಕ್ಷಣ ಪಡೆಯಲು ಆಗುವುದಿಲ್ಲ. ಅಂತಹ ಮಕ್ಕಳು ಎಜುಕೇಷನ್ ಲೋನ್ ಮಾಡಿ ಓದಬಹುದು. ವಿದ್ಯಾರ್ಥಿ ಓದಿಗೆ ಆಗುವ ಖರ್ಚು ನಿಭಾಯಿಸಲು ಸಾಲ ನೀಡಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಓದುವ ಕೋರ್ಸ್ ನ ಶುಲ್ಕ ಮೊತ್ತ, ಕೋರ್ಸ್ ಮುಗಿಯುವ ಅಷ್ಟು ಕಾಲ ಊಟ, ಬಾಡಿಗೆ ಇತ್ಯಾದಿ ವೆಚ್ಚ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಲದ ಮೊತ್ತ ನಿರ್ಧರಿಸಬಹುದು.

Image Credit: livemint

ಸಾಮಾನ್ಯವಾಗಿ ಸಾಲದಲ್ಲಿ 7.5 ಲಕ್ಷ ರೂಪಾಯಿಯ ವರೆಗೆ ಯಾವುದೇ ಪ್ರೂಫ್ ನ ಅವಶ್ಯಕತೆ ಇರುವುದಿಲ್ಲ. ಇದಕ್ಕಿಂತ ಹೆಚ್ಚಿನ ಮೊತ್ತ ಪಡೆದುಕೊಳ್ಳಲು ಮೊತ್ತಕ್ಕೆ ಏನಾದರೂ ಗಿರವಿ ಇಡಬೇಕಾಗುತ್ತದೆ. ಇನ್ನು ವಿದ್ಯಾರ್ಥಿಯು ಎಜುಕೇಷನ್ ಲೋನ್ ಪಡೆದುಕೊಳ್ಳಬೇಕಾದರೆ ಅವರು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಅಲ್ಲದೆ ಅವರು ಎಜುಕೇಷನ್ ಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಹೊಂದಿರಬೇಕು.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field