Bank Strike: 13 ದಿನ ಬ್ಯಾಂಕ್ ನೌಕರರ ರಾಷ್ಟ್ರವ್ಯಾಪಿ ಮುಷ್ಕರ, ನಿಮ್ಮ ಬ್ಯಾಂಕ್ ವ್ಯವಹಾರ ಬೇಗನೆ ಮುಗಿಸಿಕೊಳ್ಳಿ.
ಇದೀಗ ದೇಶದಾದ್ಯಂತ ನೌಕರರು ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.
Bank Employees Strike From December 4th: ಸದ್ಯ ದೇಶದೆಲ್ಲೆಡೆ ಬ್ಯಾಂಕ್ ಗಳಿಗೆ RBI ವಿವಿಧ ನಿಯಮವನ್ನು ಪರಿಚಯಿಸುತ್ತಿದೆ. RBI ಹೊಸ ನಿಯಮ ಜಾರಿಗೆ ತರುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತಿದೆ.
ಈ ನಿಟ್ಟಿನಲ್ಲಿ ಬ್ಯಾಂಕ್ ನೌಕರರು ಕೇಂದ್ರ ಬ್ಯಾಂಕ್ ನ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ RBI ಬ್ಯಾಂಕ್ ನೌಕರರ ಕೆಲಸದ ಅವಧಿಯನ್ನು ಹೆಚ್ಚಿಸುವಂತೆ ಆದೇಶ ನೀಡಿತ್ತು. ಇದೀಗ ಈ ನಿಯಮದ ವಿರುದ್ಧ ದೇಶದ ಬ್ಯಾಂಕ್ ನೌಕರರ ಆಕ್ರೋಶ ಹೊರಹಾಕುತ್ತಿದ್ದರೆ. ದೇಶದಾದ್ಯಂತ ನೌಕರರು ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.
ಬ್ಯಾಂಕ್ ನೌಕರರ ಮುಷ್ಕರ
ಬ್ಯಾಂಕಿಂಗ್ ವಲಯದ ಅತಿದೊಡ್ಡ ಉದ್ಯೋಗಿ ಸಂಘವಾದ All India Bank Employees Association ಇದೀಗ ದೇಶದಾದ್ಯಂತ ಮುಷ್ಕರ ನೆಡಸಲು ಮುಂದಾಗಿದೆ. ಬ್ಯಾಂಕುಗಳಲ್ಲಿ ಕೆಲಸ ಹೆಚ್ಚಿದ್ದು ಸಿಬ್ಬಂದಿಗಳು ಇಲ್ಲದ ಕಾರಣ ಕೆಲಸ ಹೊರೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಬ್ಯಾಂಕ್ ನೌಕರರು ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.
ಈ ಹಿಂದೆ ಬ್ಯಾಂಕ್ ನ ಕೆಲಸದ ಅವಧಿಯನ್ನು 40 ನಿಮಿಷಗಳು ಹೆಚ್ಚಿಗೆ ಮಾಡಲಾಗಿತ್ತು. ಇದೀಗ ಈ ಬ್ಯಾಂಕಿಂಗ್ ಸಮಯದ ಹೆಚ್ಚಳದ ಬಗ್ಗೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಸೊತ್ತೋಲೆ ಹೊರಡಿಸಿದೆ. “ಅನೇಕ ಬ್ಯಾಂಕ್ ಶಾಖೆಗಳಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಕಾರಣ ನೌಕರರು ಸಾಮಾನ್ಯವಾದ ಕಚೇರಿ ಸಮಯ ಮೀರಿ ಕೆಲಸ ಮಾಡಬೇಕಿದೆ.
ಈ ಹಿನ್ನಲೆ ಸೂಕ್ತವಾಗಿ ಖಾಲಿ ಹುದ್ದೆಗಳಿಗೆ ನೌಕರರನ್ನು ನೇಮಕ ಮಾಡಬೇಕಿದೆ. ಆದರೆ ಬ್ಯಾಂಕ್ ಆಡಳಿತ ಮಂಡಳಿಗಳು ಈ ಬಗ್ಗೆ ಇನ್ನು ಕ್ರಮ ಕೈಗೊಂಡಿಲ್ಲ. ಹೀಗಾಗಿ ಹೆಚ್ಚಿನ ಕೆಲಸದ ಸಮಯವೂ ಈಗ ಇರುವ ಉದ್ಯೋಗಿಗಳ ಮೇಲೆ ಬೀರುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಡಿಸೇಂಬರ್ ನಲ್ಲಿ 13 ದಿನಗಳ ಕಾಲ ಬ್ಯಾಂಕ್ ನೌಕರರ ಮುಷ್ಕರ
ಉದ್ಯೋಗಿಗಳ ನೇಮಕಾತಿಗೆ ಒತ್ತಾಯಿಸಿ ಡಿಸೆಂಬರ್ 4 ಮತ್ತು ಜನವರಿ 20, 2024 ರ ನಡುವೆ ದೇಶಾದ್ಯಂತ ಸರಣಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಉದ್ಯೋಗಿಗಳ ನೇಮಕಾತಿಗೆ ಒತ್ತಾಯಿಸಿ ಡಿಸೆಂಬರ್ 4 ಮತ್ತು ಜನವರಿ 20, 2024 ರ ನಡುವೆ ದೇಶಾದ್ಯಂತ ಸರಣಿ ಮುಷ್ಕರಕ್ಕೆ ಕರೆ ನೀಡಿದೆ.
ಕ್ಲರಿಕಲ್ ಮತ್ತು ಕಾಂಟ್ರಾಕ್ಟ್ ಕೇಡರ್ ಗಳಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಬ್ಯಾಂಕ್ ಗಳಲ್ಲಿ ಮೇಲ್ವಿಚಾರಣಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಮತ್ತು ಬ್ಯಾಂಕುಗಳಿಂದ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ.
ಎಐಬಿಇಎ ಡಿಸೆಂಬರ್ 4 ರಿಂದ 11 ರವರೆಗೆ ವಿವಿಧ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳಲ್ಲಿ ಮುಷ್ಕರವನ್ನು ಘೋಷಿಸಿದೆ ಮತ್ತು ಜನವರಿ 2 ರಿಂದ 6 ರವರೆಗೆ ವಿವಿಧ ರಾಜ್ಯಗಳಲ್ಲಿ ಬ್ಯಾಂಕರ್ ಗಳು ಮುಷ್ಕರ ನಡೆಸಲಿದ್ದಾರೆ. ಇದರ ನಂತರ, ಜನವರಿ 19-20, 2024 ರಂದು ಎರಡು ದಿನಗಳ ಅಖಿಲ ಭಾರತ ಬ್ಯಾಂಕರ್ ಗಳ ಮುಷ್ಕರ ನಡೆಯಲಿದೆ.