Employees Salary: ಸಂಬಳದಲ್ಲಿ 15% ಹೆಚ್ಚಳದ ಜೊತೆಗೆ ಇನ್ನುಮುಂದೆ ವಾರದಲ್ಲಿ 5 ದಿನ ಮಾತ್ರ ಕೆಲಸ, ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್.
ಈ ಸರ್ಕಾರೀ ನೌಕರರ ಕೆಲಸ ಸಮಯ ಮತ್ತು ಸಂಬಳದಲ್ಲಿ ಬಹುದೊಡ್ಡ ಬದಲಾವಣೆ.
Bank Employees Salary And Leave Policy Update: RBI ಬ್ಯಾಂಕುಗಳಿಗೆ ದಿನಕ್ಕೊಂದು ನಿಯಮವನ್ನು ಜಾರಿಮಾಡುತ್ತಿದೆ. ಸದ್ಯ ದೇಶದಲ್ಲಿ Banking ನಿಯಮಗಳು ಸಾಕಷ್ಟು ಬದಲಾಗುತ್ತಿವೆ. RBI ನಿಯಮಾನುಸಾರ ಬ್ಯಾಂಕುಗಳು ವಹಿವಾಟನ್ನು ನಡೆಸಬೇಕಿದೆ. ಇನ್ನು RBI ನಿಯಮ ಉಲ್ಲಘಿಸಿದ ಪ್ರತಿ ಬ್ಯಾಂಕ್ ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಇನ್ನು ಸದ್ಯ ದೇಶದ ಎಲ್ಲಾ ಬ್ಯಾಂಕುಗಳು ಕೂಡ ಗ್ರಾಹಕರಿಗೆ ವಿವಿಧ ಸೌಲಭ್ಯವನ್ನು ನೀಡುತ್ತದೆ.ಇತ್ತೀಚಿಗೆ ಆನ್ಲೈನ್ ಮೂಲಕ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗಿದ್ದರೂ ಕೂಡ ಗ್ರಾಹಕರು ಬ್ಯಾಂಕ್ ಗೆ ಭೇಟಿ ನೀಡುವುದು ಕಡಿಮೆಯಾಗಿಲ್ಲ. ಹೀಗಾಗಿ ಬ್ಯಾಂಕ್ ನೌಕರರ ಕೆಲಸದ ಹೊರೆ ಕಡಿಮೆ ಆಗುತ್ತಿಲ್ಲ ಎನ್ನಬಹುದು.
ಈಗಾಗಲೇ ಬ್ಯಾಂಕ್ ನೌಕರರು ಸಿಬ್ಬಂದಿಯ ಕೊರತೆಯ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದೀಗ ಕೇಂದ್ರದಿಂದ ಬ್ಯಾಂಕ್ ನೌಕರರಿಗೆ ಭರ್ಜರಿ ಸಿಹಿಸುದ್ದಿ ಲಭಿಸಿದೆ. ನೌಕರರ ಸಂಬಳದ ಜೊತೆಗೆ ಕೆಲಸದ ಸಮಯವನ್ನು ಕೂಡ ಸರ್ಕಾರ ಕಡಿಮೆ ಮಾಡುವ ಮೂಲಕ ಸರ್ಕಾರೀ ನೌಕರರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ.
ಸರ್ಕಾರೀ ಸಂಬಳದಲ್ಲಿ 15% ಹೆಚ್ಚಳ
ಸದ್ಯ ದೇಶದಲ್ಲಿ ಬ್ಯಾಂಕ್ ನೌಕರರ ಕೆಲಸದ ವಿಚಾರವಾಗಿ ಸಾಕಷ್ಟು ಚರ್ಚೆ ಉಂಟಾಗುತ್ತಿದೆ ಎನ್ನಬಹುದು. ಬ್ಯಾಂಕ್ ನೌಕರರು ತಮ್ಮ ವೇತನ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರೀ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ತಮ ಉದ್ಯೋಗಿ ವೇತನದಲ್ಲಿ ಶೇ. 15 ರಷ್ಟು ಹೆಚ್ಚಳಕ್ಕೆ ಮಾತುಕತೆ ನಡೆಸುತ್ತಿವೆ. ಸರ್ಕಾರೀ ನೌಕರರ ಸಂಬಳ ಶೀಘ್ರದಲ್ಲೇ 15 % ಹೆಚ್ಚಳವಾಗುವ ಸಾಧ್ಯತೆ ಇದೆ.
ಸಂಬಳ ಹೆಚ್ಚಳದ ಜೊತೆಗೆ ಇನ್ನುಮುಂದೆ ವಾರದಲ್ಲಿ 5 ದಿನ ಮಾತ್ರ ಕೆಲಸ
ಇನ್ನು ಸರ್ಕಾರೀ ಬ್ಯಾಂಕುಗಳು ಸಾಮಾನ್ಯವಾಗಿ ಪ್ರತಿ ಭಾನುವಾರದಂದು ರಜೆಯಲ್ಲಿರುತ್ತವೆ. ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ. ಆದರೆ ಬ್ಯಾಂಕ್ ನೌಕರರು ತಿಂಗಳ ಪ್ರತಿ ಭಾನುವಾರ ಮತ್ತು ಶನಿವಾರ ಬ್ಯಾಂಕ್ ಗಳಿಗೆ ರಜೆ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ.
RBI ಈ ನೌಕಾರರ ರಜೆಯ ಮನವಿಯ ಬಗ್ಗೆ ಚರ್ಚೆ ನಡೆಸುತ್ತಿದೆ. ಇನ್ನು ಸಂಬಳ ಹೆಚ್ಚಳದ ಜೊತೆಗೆ ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡುವಂತೆ ನಿಯಮ ಜಾರಿಯಾಗಲಿದೆ. ಹೊಸ ರಜೆ ನಿಯಮ ಜಾರಿಯಾದರೆ ನೌಕರರು ತಮ್ಮ ಪ್ರತಿನಿತ್ಯದ ಕೆಲಸದಲ್ಲಿ 45 ನಿಮಿಷಗಳ ಕಾಲ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಇನ್ನು ದೇಶದಲ್ಲಿ ಬ್ಯಾಂಕುಗಳು ವಾರದಲ್ಲಿ ಕೇವಲ 5 ದಿನಗಳು ಮಾತ್ರ ಗ್ರಾಹಕರಿಗೆ ಸೇವೆಯನ್ನು ನೀಡಲಿದೆ.