Bank Holiday: ಆಗಸ್ಟ್ ತಿಂಗಳು 14 ದಿನಗಳು ಬ್ಯಾಂಕುಗಳು ಬಂದ್, ನಿಮ್ಮ ವ್ಯವಹಾರ ಇಂದೇ ಮುಗಿಸಿಕೊಳ್ಳಿ
ಆಗಸ್ಟ್ ನಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ
Bank Holiday In August 2024: ಪ್ರಸ್ತುತ 2024 – 25 ರ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಇದೀಗ 2024 ರ ಜುಲೈ ತಿಂಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಸದ್ಯ RBI ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. RBI ರಜಾ ದಿನದ ವೇಳಾಪಟ್ಟಿಯ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಸುಮಾರು 14 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿದೆ. ತಿಂಗಳ ಪ್ರತಿ ಭಾನುವಾರ ಬ್ಯಾಂಕ್ ಗೆ ರಜೆ ಇರುವುದು ಸಾಮಾನ್ಯವಾದ ವಿಷಯ.
ಹಾಗೆಯೇ ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಆಗಸ್ಟ್ ತಿಂಗಳಿನಲ್ಲಿ ಒಟ್ಟು 14 ದಿನಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಬ್ಯಾಂಕ್ ರಜಾ ದಿನಗಳ ಸಮಯದಲ್ಲಿ ಗ್ರಾಹಕರು Online Banking ಸೇವೆಯನ್ನು ಪಡೆಯಬಹುದು. ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾ ದಿನದ ಕಾರಣ ಬ್ಯಾಂಕ್ ಗಳು ಮುಚ್ಚಿರುತ್ತದೆ. ಇದೀಗ ನಾವು ಬ್ಯಾಂಕ್ ಯಾವ ದಿನ…? ಯಾವ ಕಾರಣಕ್ಕೆ…? ಬಂದ್ ಆಗಿರಲಿದೆ ಎಂದು ನೋಡೋಣ.
ಆಗಸ್ಟ್ ನಲ್ಲಿ 14 ದಿನಗಳು ಈ ಕಾರಣಕ್ಕೆ ಬ್ಯಾಂಕ್ ರಜೆ
August 3 – ಕೇರ್ ಪೂಜಾ, ಅಗರ್ತಲಾ ದಲ್ಲಿ ರಜೆ ಇರುತ್ತದೆ
August 4 – ಭಾನುವಾರ, ದೇಶದಲ್ಲಿ ರಜೆ ಇರುತ್ತದೆ
August 7 – ಹರಿಯಾಲಿ ತೀಜ್, ಹರಿಯಾಣದಲ್ಲಿ ರಜೆ ಇರುತ್ತದೆ
August 8 – ಟೆಂಡಾಂಗ್ ಲೋ ರಮ್ ಫಾತ್, ಗ್ಯಾಂಗ್ಟಾಕ್ನಲ್ಲಿ ರಜೆ ಇರುತ್ತದೆ
August 10 – ಎರಡನೇ ಶನಿವಾರ, ದೇಶಾದ್ಯಂತ ರಜಾದಿನ
August 11 – ಭಾನುವಾರ, ದೇಶದಲ್ಲಿ ರಜೆ ಇರುತ್ತದೆ
August 13 – ದೇಶಭಕ್ತ ದಿನ, ಇಂಫಾಲ್ನಲ್ಲಿ ರಜೆ ಇರುತ್ತದೆ
August 15 – ಸ್ವಾತಂತ್ರ್ಯ ದಿನ ಕಾರಣ ದೇಶದಲ್ಲಿ ರಜೆ ಇರುತ್ತದೆ
August 18 – ಭಾನುವಾರ, ದೇಶದಲ್ಲಿ ರಜೆ ಇರುತ್ತದೆ
August 19 – ರಕ್ಷಾ ಬಂಧನ
August 20 – ಶ್ರೀ ನಾರಾಯಣ ಗುರು ಜಯಂತಿ
August 24 – ನಾಲ್ಕನೇ ಶನಿವಾರ, ದೇಶಾದ್ಯಂತ ರಜೆ ಇರುತ್ತದೆ
August 25 – ಭಾನುವಾರ, ದೇಶಾದ್ಯಂತ ರಜೆ ಇರುತ್ತದೆ
August 26 – ಜನ್ಮಾಷ್ಟಮಿ ಕಾರಣ ದೇಶದಲ್ಲಿ ರಜೆ ಇರುತ್ತದೆ