Bank Holiday: ಬ್ಯಾಂಕ್ ಗ್ರಾಹಕರೇ ಎಚ್ಚರ, ಬರೋಬ್ಬರಿ 10 ದಿನಗಳ ಕಾಲ ಬ್ಯಾಂಕ್ ರಜೆ.

ಈ ತಿಂಗಳಲ್ಲಿ ಬರೋಬ್ಬರಿ 10 ದಿನಗಳ ಕಾಲ ಬ್ಯಾಂಕ್ ರಜೆ

Bank Holiday In May 2024: ಸದ್ಯ 2024 ರ ಐದನೇ ತಿಂಗಳು ಮೇ ಆರಂಭವಾಗಿದೆ. ಮೇ ತಿಂಗಳ ಆರಂಭದಲ್ಲಿ ದೇಶದಲ್ಲಿ ಹಲವಾರು ನಿಯಮಗಳು ಬದಲಾಗಿವೆ. ಇನ್ನು ಹೊಸ ತಿಂಗಳ ಆರಂಭದಲ್ಲಿ ನಿಯಮಗಳು ಹೇಗೆ ಬದಲಾಗುತ್ತವೆಯೋ ಅದೇ ರೀತಿ ಹೊಸ ತಿಂಗಳಿನಲ್ಲಿ ಬ್ಯಾಂಕ್ ರಜಾ ದಿನಗಳು ಕೂಡ ಬದಲಾಗುತ್ತವೆ.

RBI ಪ್ರತಿ ತಿಂಗಳ ಆರಂಭಕ್ಕೂ ಮುನ್ನ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದೀಗ RBI ಮೇ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ ಮೇ ತಿಂಗಳಲ್ಲಿ ಯಾವ ಯಾವ ದಿನ ಬ್ಯಾಂಕುಗಳು ರಜೆ ಇರುತ್ತದೆ ಎಂದು ನಾವೀಗ ತಿಳಿಯೋಣ.

Bank Holiday In May 2024
Image Credit: Mypunepulse

ಬ್ಯಾಂಕ್ ಗ್ರಾಹಕರೇ ಎಚ್ಚರ
ಸದ್ಯ RBI ಮೇ ತಿಂಗಳಿನಲ್ಲಿ ಯಾವೆಲ್ಲ ದಿನಗಳು ಗ್ರಾಹಕರು ಸೇವೆಯನ್ನು ಪಡೆಯಲು ಸಾಧ್ಯವಿಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿದೆ. RBI ಪ್ರಕಾರ, ಮೇ ತಿಂಗಳಿನಲ್ಲಿ ಬ್ಯಾಂಕ್ ಗಳು 10 ದಿನಗಳು ಮುಚ್ಚಲ್ಪಟ್ಟಿರುತ್ತದೆ. ಗ್ರಾಹಕರು ಹತ್ತು ದಿನಗಳ ಕಾಲ ಬ್ಯಾಂಕ್ ನಿಂದ ಯಾವುದೇ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ. ಆದಾಗ್ಯೂ, ಗ್ರಾಹಕರು ಆನ್ಲೈನ್ ನಲ್ಲಿ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ಬ್ಯಾಂಕ್ ರಜಾ ದಿನಗಳ ದಿನದಂದು ಆನ್ಲೈನ್ ಬ್ಯಾಂಕಿಂಗ್ ಸೇವಿಯಲ್ಲಿ ಯಾವುದೇ ತಡೆ ಇರುವುದಿಲ್ಲ. ಇನ್ನು ಮೇ ತಿಂಗಳ 10 ದಿನಗಳ ರಜಾ ದಿನದ ಬಗ್ಗೆ ಮಾಹಿತಿ ಇಲ್ಲಿದೆ.

ಬರೋಬ್ಬರಿ 10 ದಿನಗಳ ಕಾಲ ಬ್ಯಾಂಕ್ ರಜೆ
May 1 : ಕಾರ್ಮಿಕ ದಿನದಂದು ರಾಜ್ಯ ಸೇರಿದಂತೆ 11 ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

May 5: ಭಾನುವಾರ

Join Nadunudi News WhatsApp Group

May 7: ಲೋಕಸಭೆ ಚುನಾವಣೆ ಹಂತ 3 (ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಗೋವಾದಲ್ಲಿ ರಜೆ)

May 2024 Bank Holiday List
Image Credit: Timesofindia

May 10: ಶುಕ್ರವಾರ : ಬಸವ ಜಯಂತಿ/ ಅಕ್ಷಯ ತೃತೀಯ (ಕರ್ನಾಟಕದಲ್ಲಿ ರಜೆ)

May 11: ಎರಡನೇ ಶನಿವಾರ

May 12: ಭಾನುವಾರ

May 19: ಭಾನುವಾರ

May 20: ಸೋಮವಾರ (ಹಂತ 5 ಚುನಾವಣೆಗಳು)

May 23, ಗುರುವಾರ : ಬುದ್ಧ ಪೂರ್ಣಿಮಾ

May 25: ನಾಲ್ಕನೇ ಶನಿವಾರ

May 26: ಭಾನುವಾರ

Bank Holidays May 2024
Image Credit: Timesofindia

Join Nadunudi News WhatsApp Group