Bank Holiday: ಇನ್ನುಮುಂದೆ ಪ್ರತಿ ವಾರ ಈ ದಿನ ಬ್ಯಾಂಕ್ ರಜೆ, ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರೇ ಈ ದಿನ ಬ್ಯಾಂಕ್ ಬಂದ್

ಬ್ಯಾಂಕ್ ರಜಾ ವೇಳಾಪಟ್ಟಿಯಲ್ಲಿ ಭಾರಿ ಬದಲಾವಣೆ, ಇನ್ನುಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಬ್ಯಾಂಕ್ ತೆರೆದಿರುತ್ತದೆ

Bank Holiday Updates: ಭಾರತದ ಬ್ಯಾಂಕ್ (Bank) ವಲಯದಲ್ಲಿ ಈಗಾಗಲೇ ರಜೆಯ ಕುರಿತು ಹಲವು ಚರ್ಚೆಗಳು ಮಂಡಿಸಲಾಗಿದ್ದು, ಬ್ಯಾಂಕ್ ಯಾವ ದಿನಗಳು ರಜೆ ಇರುತ್ತದೆ ಹಾಗು ಇನ್ನುಮುಂದೆ ಬ್ಯಾಂಕ್ ರಜಾ ವೇಳಾಪಟ್ಟಿಯಲ್ಲಿ ಬದಲಾವಣೆ ಆಗುವ ಕುರಿತು ಮಾಹಿತಿ ಪಡೆಯೋಣ. ಈಗಾಗಲೇ ಬ್ಯಾಂಕ್ ಎರಡನೇ ಶನಿವಾರ ಹಾಗು ನಾಲ್ಕನೇ ಶನಿವಾರ ಮುಚ್ಚಲ್ಪಟ್ಟಿರುತ್ತದೆ ಹಾಗು ಈ ರಜೆಯನ್ನು ಸಾರ್ವಜನಿಕ ರಜೆಯನ್ನಾಗಿ ಆಚರಿಸಲಾಗುತ್ತಿದೆ.

ಇನ್ನು ಮುಂದೆ ತಿಂಗಳ ಎಲ್ಲಾ ಶನಿವಾರವೂ ಬ್ಯಾಂಕ್ ಗಳು ರಜೆ ಇರುತ್ತದೆ ಎಂದು ಸಂಸತ್ತಿನಲ್ಲಿ ಇಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ವಾರಕ್ಕೆ ಐದು ದಿನಗಳ ಕೆಲಸದ ಅವಧಿಯ ಅನುಷ್ಠಾನಕ್ಕೆ ಕೋರಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(ಐಬಿಎ) ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್, ಐಬಿಎ ವಾಸ್ತವವಾಗಿ ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ದೃಢಪಡಿಸಿದರು.

Five days work week for banks
Image Credit: Goodreturns

ವಾರದಲ್ಲಿ ಐದು ದಿನಗಳು ಮಾತ್ರ ಬ್ಯಾಂಕ್ ಓಪನ್ ಇರುತ್ತದೆ

ಭಾರತದಲ್ಲಿನ ಬ್ಯಾಂಕ್ ವಲಯವು 2015 ರಿಂದ, ಪ್ರತಿ ತಿಂಗಳ ಎರಡನೇ ಮತ್ತು ಕೊನೆಯ ನಾಲ್ಕನೇ ಶನಿವಾರದಂದು ಸಾರ್ವಜನಿಕ ರಜಾದಿನಗಳನ್ನಾಗಿ ಆಚರಿಸುತ್ತವೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು, ಭಾರತದಲ್ಲಿ ಇರುವ ವಿದೇಶಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು,

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಎಲ್ಲ ಭಾರತೀಯ ಹಣಕಾಸು ಸಂಸ್ಥೆಗಳನ್ನು ಒಳಗೊಂಡಂತೆ ಭಾರತದಲ್ಲಿನ ವಿಶಾಲ ವ್ಯಾಪ್ತಿಯ ಬ್ಯಾಂಕುಗಳನ್ನು ಪ್ರತಿನಿಧಿಸುತ್ತದೆ. ಪ್ರಸ್ತುತ ಬ್ಯಾಂಕಿಂಗ್‌ ವಲಯದಲ್ಲಿ 15 ಲಕ್ಷ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಸಾರ್ವಜನಿಕ ಬ್ಯಾಂಕ್‌ಗಳಿಂದ ಐದು ದಿನಗಳ ಕೆಲಸದ ವಾರದ ಬೇಡಿಕೆಯು ಒಕ್ಕೂಟದ ಸುದೀರ್ಘವಾದ ಬೇಡಿಕೆಯಾಗಿದೆ.

Join Nadunudi News WhatsApp Group

Bank Holiday Updates
Image Credit: India

ಬ್ಯಾಂಕ್ ಕೆಲಸದ ಅವಧಿಯಲ್ಲಿ ಹೆಚ್ಚಳ

ಹಣಕಾಸು ಸಚಿವಾಲಯದ ಪ್ರತಿಕ್ರಿಯೆಯು ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆಯೇ ಅಥವಾ ಮುಂದಿನ ದಿನಗಳಲ್ಲಿ ಅದನ್ನು ಪರಿಗಣಿಸಬಹುದೇ ಎಂದು ನಿರ್ದಿಷ್ಟಪಡಿಸಿಲ್ಲ. ಪ್ರಸ್ತಾವಿತ ಬದಲಾವಣೆಯು ಕಾರ್ಯಗತಗೊಂಡರೆ ಬ್ಯಾಂಕಿಂಗ್ ಉದ್ಯಮದ ಕಾರ್ಯಾಚರಣೆಯು ಉದ್ಯೋಗಿಗಳು ಮತ್ತು ಗ್ರಾಹಕರು ಎರಡು ವರ್ಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆಯಾಗಿದೆ.

ಪ್ರಸ್ತಾವನೆಯನ್ನು ಅನುಮೋದಿಸಿದರೆ, ವಾರಕ್ಕೆ ಐದು ದಿನದ ಕೆಲಸದ ಅವಧಿಯ ಕಾರ್ಯಾಚರಣೆಯು ಉಳಿದ ದಿನಗಳ ಕೆಲಸದ ಸಮಯವನ್ನು ಒಂದೆರಡು ಗಂಟೆಗಳಿಗೆ ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ.

Join Nadunudi News WhatsApp Group