July Holidays: 15 ದಿನ ಬ್ಯಾಂಕ್ ರಜೆ, ಈಗಲೇ ಎಲ್ಲಾ ಕೆಲಸ ಮುಗಿಸಿ

ಜೂಲೈ ತಿಂಗಳಲ್ಲಿ ಹಲವು ಸರ್ಕಾರೀ ರಜೆಗಳು ಇದ್ದು ಬ್ಯಾಂಕುಗಳು ಬಂದ್ ಆಗಿರಲಿದೆ.

Bank Holidays July 2023:  ಜೂನ್ ತಿಂಗಳ ಬ್ಯಾಂಕ್ ರಜೆಯ ಬಗ್ಗೆ ಈಗಾಗಲೇ ಮಾಹಿತಿ ಹೊರ ಬಿದ್ದಿದೆ. ಇನ್ನು ಜುಲೈ ತಿಂಗಳ ಬ್ಯಾಂಕ್ ರಜೆಗಳ ವಿವರಗಳನ್ನು ಗ್ರಾಹಕರು ತಿಳಿದುಕೊಳ್ಳುವುದು ಉತ್ತಮವಾಗಿದೆ.

ದೇಶದಾದ್ಯಂತ ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಹಾಗೆಯೆ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಮುಂಬರುವ ಜುಲೈ ತಿಂಗಳಲ್ಲಿ ಬ್ಯಾಂಕ್ ಗೆ ಬರೋಬ್ಬರಿ 15 ದಿನಗಳು ರಜೆ ಸಿಗಲಿದೆ. ಬ್ಯಾಂಕ್ ನಲ್ಲಿ ಹೆಚ್ಚು ಹಣದ ವ್ಯವಹಾರ ಮಾಡುವವರು ಬ್ಯಾಂಕುಗಳ ರಜಾ ದಿನಗಳ ಬಗ್ಗೆ ಗಮನ ಕೊಡುವುದು ಅವಶ್ಯಕವಾಗಿದೆ.

Bank Holidays July 2023
Image Source: Jagran

ಬ್ಯಾಂಕ್ ಗ್ರಾಹಕರಿಗೆ ಹೊಸ ಮಾಹಿತಿ
2023 ಜುಲೈ ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ಸೇರಿದಂತೆ ಸುಮಾರು 15 ದಿನಗಳು ರಾಷ್ಟ್ರ ರಾಜ್ಯದಾದ್ಯಂತ ಬ್ಯಾಂಕ್ ಗಳು ರಜೆ ಇರಲಿವೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು, ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ತೆರೆದಿರುತ್ತವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ರಾಜ್ಯ ನಿರ್ದಿಷ್ಟವಾದ ಹಲವಾರು ಪ್ರಾದೇಶಿಕ ರಜಾದಿನಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಪ್ರತ್ಯೇಕ ರಾಜ್ಯಗಳ ಆಡಳಿತ ಮಂಡಳಿಗಳು ಪ್ರಾದೇಶಿಕ ರಜಾದಿನಗಳನ್ನು ನಿರ್ಧರಿಸುತ್ತವೆ. ಹೆಚ್ಚುವರಿಯಾಗಿ, ಹಣಕಾಸು ಪ್ರಾಧಿಕಾರವು ಭಾನುವಾರದಂದು ಬ್ಯಾಂಕುಗಳು ಮುಚ್ಚಿರುವುದನ್ನು ಕಡ್ಡಾಯಗೊಳಿಸಿದೆ.

Bank Holidays July 2023
Image Source: India Today

ಜುಲೈ ತಿಂಗಳ ಬ್ಯಾಂಕ್ ರಜಾ ದಿನಗಳು
ಜುಲೈ 4 ಭಾನುವಾರ ರಜೆ ಇರುತ್ತದೆ.

Join Nadunudi News WhatsApp Group

ಜುಲೈ 5 ಗುರು ಹರಗೋಬಿಂದ್ ಸಿಂಗ್ ಜಯಂತಿ.

ಜುಲೈ 6 MHIP ದಿನ.

ಜುಲೈ 8 ಎರಡನೇ ಶನಿವಾರ ರಜೆ.

ಜುಲೈ 9 ಭಾನುವಾರ.

ಜುಲೈ 11 ಕೇರ್ ಪೂಜೆ.

ಜುಲೈ 13 ಭಾನು ಜಯಂತಿ.

ಜುಲೈ 16 ಭಾನುವಾರ.

ಜುಲೈ 17 ಯು ಟಿರೋತ್ ಸಿಂಗ್ ಡೇ.

ಜುಲೈ 22 ನಾಲ್ಕನೇ ಶನಿವಾರ.

ಜುಲೈ 23 ಭಾನುವಾರ.

ಜುಲೈ 29 ಮೊಹರಂ.

ಜುಲೈ 30 ಭಾನುವಾರ.

ಜುಲೈ 31 ಹುತಾತ್ಮ ದಿನ.

Join Nadunudi News WhatsApp Group