Bank Holiday: ಸೆಪ್ಟೆಂಬರ್ ನಲ್ಲಿ 16 ದಿನ ಬ್ಯಾಂಕ್ ಬಂದ್, ರಜಾದಿನಗಳ ವಿವರ ತಿಳಿದುಕೊಳ್ಳಿ.
ಸೆಪ್ಟೆಂಬರ್ ನಲ್ಲಿ ಈ 16 ದಿನಗಳು ನೀವು ಬ್ಯಾಂಕ್ ನ ಸೇವೆಯಿಂದ ವಂಚಿತರಾಗುತ್ತೀರಿ.
Bank Holidays In September 2023: ವರ್ಷದ ಪ್ರತಿ ತಿಂಗಳು ಆರಂಭವಾದಾಗ ಹೆಚ್ಚಿನ ನಿಯಮಗಳು ಬದಲಾಗುತ್ತದೆ. ಹೆಚ್ಚಾಗಿ ಹಣಕಾಸು ವ್ಯವಹಾರದಲ್ಲಿ ಅಂದರೆ ಬ್ಯಾಂಕ್ ನಿಯಮದಲ್ಲಿ ಹೆಚ್ಚಿನ ಹೊಸ ಹೊಸ ನಿಯಮ ಜಾರಿಯಾಗುತ್ತವೆ. ಬದಲಾಗುತ್ತಿರುವ ಬ್ಯಾಂಕ್ ನ ನಿಯಮದ ಬಗ್ಗೆ ಖಾತೆದಾರರು ಗಮನ ಹರಿಸಬೇಕು.
ಇನ್ನು ಬ್ಯಾಂಕ್ ಖಾತೆದಾರರಿಗೆ ಯಾವುದೇ ರೀತಿಯ ತೊಂದರೆ ಆದರೂ ಕೊಡ ಖಾತೆದಾರರು ಶಾಖೆಗೆ ಭೇಟಿ ನೀಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ. ಆದರೆ ಬ್ಯಾಂಕ್ ಗಳು ಎಲ್ಲ ದಿನವೂ ತೆರೆದಿರುವುದಿಲ್ಲ. ಬ್ಯಾಂಕುಗಳಿಗೆ ಸರ್ಕಾರೀ ರಜೆಯನ್ನು ನೀಡಲಾಗುತ್ತದೆ. ಪ್ರತಿ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕುಗಳು ಬಂದ್ ಆಗರುವ ಬಗ್ಗೆ ಎಲ್ಲರಿಗು ತಿಳಿದಿರುವ ವಿಚಾರ.
ಬ್ಯಾಂಕ್ ಖಾತೆದಾರರಿಗೆ ಮಹತ್ವದ ಮಾಹಿತಿ
ಇನ್ನು ಭಾನುವಾರ ಮತ್ತು ಶನಿವಾರವನ್ನು ಹೊರತುಪಡಿಸಿ ಕೆಲವು ದಿನಗಳು ಬ್ಯಾಂಕ್ ತೆರೆದಿರುವುದಿಲ್ಲ. ಮುಖ್ಯ ಹಬ್ಬ, ದಿನಾಚರಣೆಗಳಿಗೆ ಬ್ಯಾಂಕ್ ಗೆ ರಜೆ ನೀಡಲಾಗುತ್ತದೆ. ಸೆಪ್ಟೆಂಬರ್ 30 ರದ್ದಾಗಿರುವ 2,000 ಮುಖಬೆಲೆಯ ನೋಟಿನ ಬದಲಾವಣೆ ಅಥವಾ ವಿನಿಮಯಕ್ಕೆ ಕೊನೆಯ ದಿನಾಂಕವಾಗಿದೆ. ನಿಮ್ಮ ಬಳಿ ಇರುವ 2,000 ಮುಖಬೆಲೆಯ ನೋಟಿನ ವಿನಿಮಯ ಅಥವಾ ಠೇವಣಿಗಾಗಿ ಬ್ಯಾಂಕ್ ಗೆ ಭೇಟಿ ನೀಡುವ ಮುನ್ನ ಯಾವ ಯಾವ ದಿನಗಳು ಬ್ಯಾಂಕ್ ರಜೆಯಲ್ಲಿರುತ್ತವೆ ಎನ್ನುವ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಸೆಪ್ಟೆಂಬರ್ ನಲ್ಲಿ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಒಟ್ಟು 16 ದಿನಗಳು ಬ್ಯಾಂಕ್ ಬಂದ್ ಆಗಿರುತ್ತವೆ. ಈ 16 ದಿನಗಳು ನೀವು ಬ್ಯಾಂಕ್ ನ ಸೇವೆಯಿಂದ ವಂಚಿತರಾಗುತ್ತೀರಿ. ಇನ್ನು ಬ್ಯಾಂಕ್ ಗಳು ಬಂದ್ ಆಗಿದ್ದರು ಆನ್ಲೈನ್ ಬೇಕಿಂಗ್ ಸೇವೆಗಳು ಗ್ರಾಹಕರಿಗೆ ಲಭ್ಯವಿರುತ್ತದೆ. ಇದೀಗ ಸೆಪ್ಟೆಂಬರ್ ನಲ್ಲಿ ಯಾವ ದಿನಾಂಕಕ್ಕೆ, ಯಾವ ಕಾರಣಕ್ಕೆ ಬ್ಯಾಂಕ್ ಗಳಿಗೆ ರಜೆ ಇರುತ್ತವೆ ಎನ್ನುವ ಬಗ್ಗೆ ವಿವರವನ್ನು ತಿಳಿಯೋಣ.
ಸೆಪ್ಟೆಂಬರ್ ನಲ್ಲಿ 16 ದಿನ ಬ್ಯಾಂಕ್ ಬಂದ್
*ಸೆಪ್ಟೆಂಬರ್ 6 ಭುಧವಾರ ಕೃಷ್ಣಾ ಜನ್ಮಾಷ್ಠಮಿಯ ದಿನ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 18 ಮಂಗಳವಾರ ಗಣೇಶ ಚತುರ್ಥಿಯ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 19 ಮತ್ತು 20 ಗಣೇಶ ಚತುರ್ಥಿಯ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 22 ಶ್ರೀ ನಾರಾಯಣ ಗುರು ಸಮಾಧಿ ದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 23 ಮಹಾರಾಜಾ ಹರಿಸಿಂಗ್ ಜಿ ಅವರಾ ಜನ್ಮದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 25 ಶ್ರೀಮಂತ ಶಂಕರ ಜನ್ಮದಿನೋತ್ಸವ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 27 ಪ್ರವಾದಿ ಮೊಹಮದ್ದ್ ಅವರ ಜನ್ಮದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 28 ಈದ್ -ಮಿಲಾದ್ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಸೆಪ್ಟೆಂಬರ್ 29 ಈದ್ -ಮಿಲಾದ್ ನಂತ್ರ ಇಂದ್ರಜಾತಾ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
*ಇನ್ನು ಸೆಪ್ಟೆಂಬರ್ 3, 10, 17, 24 ಭಾನುವಾರ ಇರುವ ಕಾರಣ ದೇಶದಾದ್ಯಂತ ಬ್ಯಾಂಕ್ ರಜೆಯಲ್ಲಿರುತ್ತದೆ.
*ಇನ್ನು ಸೆಪ್ಟೆಂಬರ್ 9 ಮತ್ತು 23 ಎರಡನೇ ಮತ್ತು ನಾಲ್ಕನೇ ಶನಿವಾರ ಆದ ಕಾರಾಣ ಬ್ಯಾಂಕ್ ಒಟ್ಟು 16 ದಿನ ಮುಚ್ಚಲ್ಪಟ್ಟಿರುತ್ತದೆ.