Bank Rules: ಇನ್ನುಮುಂದೆ ಪ್ರತಿ ವಾರ 2 ದಿನ ಬ್ಯಾಂಕ್ ರಜೆ, ದೇಶದಲ್ಲಿ ಜಾರಿಗೆ ಬರಲು ಸಿದ್ಧವಾಗಿದೆ ಬಹುದೊಡ್ಡ ಯೋಜನೆ.
ಇನ್ನುಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಬ್ಯಾಂಕುಗಳಿಗೆ ರಜೆ ನೀಡಲು ಸರ್ಕಾರ ಮುಂದಾಗಿದೆ.
Bank Employees Holiday: ಇತ್ತೀಚಿಗೆ ಕೇಂದ್ರ ಸರ್ಕಾರ ಕೇಂದ್ರ ನೌಕರರಿಗೆ ಸಿಹಿ ಸುದ್ದಿ ನೀಡುತ್ತಲೇ ಇದೆ. ನೌಕರರ ವೇತನ ಹೆಚ್ಚಳ, ಹಳೆಯ ಪಿಂಚಣಿ ಜಾರಿಯ ಬಗ್ಗೆ ವಿವಿಧ ರೀತಿಯ ಘೋಷಣೆ ಹೊರಡಿಸುತ್ತಲೇ ಇದೆ.
ಈಗಾಗಲೇ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮತ್ತು ಹಳೆಯ ಪಿಂಚಣಿ ಜಾರಿ ಕುರಿತು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿನಲ್ಲಿ ಕೆಲಸ ಮಾಡುವ ನೌಕರರು ಹಲವು ಸಮಯಗಳಿಂದ ತಮ್ಮ ಬೇಡಿಕೆಯನ್ನ ಸರ್ಕಾರ ಮುಂದೆ ಇಡುತ್ತಲೇ ಬಂದಿದ್ದಾರೆ, ಆದರೆ ಅವರ ಬೇಡಿಕೆ ಈಡೇರಿರಲಿಲ್ಲ.
ಸದ್ಯ ಬ್ಯಾಂಕ್ ನೌಕರರ ಬೇಡಿಕೆಯನ್ನ ಇತ್ಯರ್ಥ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಹೊಸ ನಿಯಮವನ್ನ ಜಾರಿಗೆ ತರಲು ಕೇಂದ್ರ ಸಹಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ನಲ್ಲಿ ಇನ್ನುಮುಂದೆ ವಾರಕ್ಕೆ ಐದು ದಿನ ಮಾತ್ರ ಕೆಲಸ
ಸರ್ಕಾರೀ ಬ್ಯಾಂಕ್ ನೌಕರರು ತಿಂಗಳಿನಲ್ಲಿ ಹೆಚ್ಚಿನ ರಜೆಯನ್ನು ಪಡೆಯುತ್ತಾರೆ. ಪ್ರತಿ ತಿಂಗಳ ಭಾನುವಾರ ಬ್ಯಾಂಕ್ ನೌಕರರಿಗೆ ರಜೆ ಇರುತ್ತದೆ. ಇನ್ನು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ತಿಂಗಳಿನಲ್ಲಿ ಒಂದನೇ, ಮೂರನೇ ಮತ್ತು ಐದನೇ ಶನಿವಾರಗಳು ಬ್ಯಾಂಕ್ ನೌಕರರಿಗೆ ರಜೆ ಇರುವುದಿಲ್ಲ.
ಸರ್ಕಾರೀ ಬ್ಯಾಂಕ್ ನೌಕರು ವಾರದಲ್ಲಿ 5 ದಿನಗಳ ಕೆಲಸವನ್ನು ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ತಿಂಗಳ ಪ್ರತಿ ಶನಿವಾರ ಮತ್ತು ಭಾನುವಾರವೂ ರಜೆ ಬೇಕೆನ್ನುವುದು ಸರ್ಕಾರೀ ಉದ್ಯೋಗಿಗಳ ಬೇಡಿಕೆಯಾಗಿದೆ.
ಬ್ಯಾಂಕುಗಳಿಗೆ ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿವೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ ಸಂಸ್ಥೆಗಳು ಬ್ಯಾಂಕ್ ನೌಕರರ ಬೇಡಿಕೆಗೆ ಒಪ್ಪಿಗೆ ನೀಡಿದೆ.
ಬ್ಯಾಂಕ್ ಕೆಲಸದ ಸಮಯ ಇನ್ನುಮುಂದೆ ಹೆಚ್ಚಳ
ಬ್ಯಾಂಕ್ ನೌಕರರು ಇನ್ನುಮುಂದೆ ವಾರದ ಐದು ದಿನಗಳು ಮಾತ್ರ ಕೆಲಸ ಮಾಡಲಿದ್ದಾರೆ. ತಿಂಗಳ ಪ್ರತಿ ಶನಿವಾರ ಮತ್ತು ಪ್ರತಿ ಭಾನುವಾರ ನೌಕರರಿಗೆ ರಜೆ ನೀಡಲು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಒಪ್ಪಿಗೆ ನೀಡಿದೆ. ಹಾಗೆಯೆ ನೌಕರರ ದಿನದ ಕೆಲಸದ ಅವಧಿಯನ್ನು 40 ನಿಮಿಷ ಹೆಚ್ಚಿಸಿದೆ. ಇನ್ನುಮುಂದೆ ಬ್ಯಾಂಕ್ ನೌಕರರು ಪ್ರತಿದಿನ ಬೆಳಿಗ್ಗೆ 9:45 ರಿಂದ 5:30 ರವರೆಗೆ ಕೆಲಸ ಮಾಡಬೇಕಾಗುತ್ತದೆ.