Bank Interest: ಈ 5 ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಗುಡ್ ನ್ಯೂಸ್, ಇನ್ನುಮುಂದೆ ಸಿಗಲಿದೆ ಹೆಚ್ಚಿನ ಬಡ್ಡಿ.
ಈ ಐದು ಬ್ಯಾಂಕುಗಳ ಬಡ್ಡಿದರ ಹೆಚ್ಚಳ ಆಗಿದ್ದು ಜನರ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗಲಿದೆ.
Top 5 Bank Saving Account Interest: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಜನರಿಗೆ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ವಿವಿಧ ಆಯ್ಕೆಯನ್ನು ನೀಡುತ್ತದೆ. ಹೆಚ್ಚಾಗಿ ಜನರು ಉಳಿತಾಯ ಖಾತೆಯನ್ನು (Saving Account) ಆರಿಸುತ್ತಾರೆ. ಉಳಿತಾಯ ಖಾತೆಯಲ್ಲಿನ ಹಣದ ಹೂಡಿಕೆ ಹೆಚ್ಚಿನ ಲಾಭವನ್ನು ನೀಡಿತ್ತದೆ.
ಈಗಾಗಲೇ ಕೋಟ್ಯಂತರ ಜನರು ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಯನ್ನು ಹೊಂದಿರುತ್ತಾದೆ. ಇದೀಗ ದೇಶದಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಉಳಿತಾಯ ಖಾತೆಯ ಬಡ್ಡಿದರ
ದೇಶದ ವಿವಿಧ ಬ್ಯಾಂಕ್ ಗಳು ಗ್ರಾಹಕರ ಉಳಿತಾಯ ಖಾತೆಯಲ್ಲಿನ ಹಣಕ್ಕೆ ಆಕರ್ಷಕ ಬಡ್ಡಿದರವನ್ನು ನೀಡುತ್ತವೆ. ಉಳಿತಾಯ ಖಾತೆಯಲ್ಲಿ ಹೆಚ್ಚಿನ ಬಡ್ಡಿದರವನ್ನು ನೀಡುವ ಬ್ಯಾಂಕ್ ಅನ್ನು ಜನರು ಹೆಚ್ಚಾಗಿ ಆರಿಸುತ್ತಾರೆ. ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ದೈನಂದಿನ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
ಇನ್ನು ಬ್ಯಾಂಕ್ ನ ನಿಯಮದ ಪ್ರಕಾರ, ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಮಧ್ಯಂತರದಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಉಳಿತಾಯ ಖಾತೆಗೆ ನೀಡಲಾಗುವ ಬಡ್ಡಿದರವು ಆಯಾ ಬ್ಯಾಂಕ್ ಗಳಿಗೆ ಅನುಗುಣವಾಗಿರುತ್ತದೆ. ಇದೀಗ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಉಳಿತಾಯ ಖಾತೆಗಳಿಗೆ ಯಾವ ಯಾವ ಬಡ್ಡಿದರವನ್ನು ನೀಡುತ್ತದೆ ಎನ್ನುವ ಬಗ್ಗೆ ವಿವರವನ್ನು ತಿಳಿಯೋಣ.
*HDFC ಬ್ಯಾಂಕ್ (HDFC Bank)
ಹೆಚ್ ಡಿಎಫ್ ಸಿ ಬ್ಯಾಂಕ್ ನ ಉಳಿತಾಯ ಖಾತೆಯು 50 ಲಕ್ಷದವರೆಗೆ ಬಾಕಿ ಇದ್ದರೆ 3% ಬಡ್ಡಿಯನ್ನು ನೀಡುತ್ತದೆ. 50 ಲಕ್ಷಕ್ಕಿಂತ ಹೆಚ್ಚಿನ ಬ್ಯಾಲೆನ್ಸ್ ಮೇಲೆ ಶೇ.3.50 ಬಡ್ಡಿ ನೀಡುತ್ತದೆ.
*ICICI ಬ್ಯಾಂಕ್ (ICICI Bank)
ಐಸಿಐಸಿಐ ಬ್ಯಾಂಕ್ ಒಂದು ದಿನದ ಅಂತ್ಯದಲ್ಲಿ 50 ಲಕ್ಷ ರೂ. ಗಿಂತ ಕಡಿಮೆ ಮೊತ್ತದ ಮೇಲಿನ ಬಡ್ಡಿ ದರವು ಶೇ. 3 ಆಗಿರುತ್ತದೆ. ದಿನದ ಅಂತ್ಯದ ವೇಳೆಗೆ 50 ಲಕ್ಷ ರೂ. ಗಿಂತ ಹೆಚ್ಚಿನ ಬಾಕಿಯು ಶೇ. 3 .5 ರ ಬಡ್ಡಿದರವನ್ನು ಆಕರ್ಷಿಸುತ್ತದೆ.
*ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB Bank)
ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ 10 ಲಕ್ಷ ರೂ. ಗಿಂತ ಕಡಿಮೆ ಬ್ಯಾಲೆನ್ಸ್ ಮೇಲೆ 2 .70 % ಬಡ್ಡಿ ದರವನ್ನು ನೀಡುತ್ತದೆ. 10 ಲಕ್ಷದಿಂದ 100 ಕೋಟಿ ರೂ. ಗಿಂತ ಕಡಿಮೆ ಇರುವ ಖಾತೆಯಲ್ಲಿ ಶೇ. 2 .75 ಬಡ್ಡಿ ಲಭ್ಯವಾಯಿರಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 100 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಖಾತೆಗಳಿಗೆ 3 % ಬಡ್ಡಿಯನ್ನು ನೀಡುತ್ತದೆ.
*ಕೆನರಾ ಬ್ಯಾಂಕ್ (Canara Bank)
ಕೆನರಾ ಬ್ಯಾಂಕ್ ಉಳಿತಾಯ ಖಾತೆಗೆ ಶೇ. 2.90 ರಿಂದ 4 ರಷ್ಟು ಬಡ್ಡಿಯನ್ನು ನೀಡುತ್ತದೆ. 2000 ಕೋಟಿ ರೂ. ಬಾಕಿ ಇದ್ದಾರೆ ಶೇ. 4 ರಷ್ಟು ಬಡ್ಡಿ ನೀಡುತ್ತದೆ.