RBI: ದೇಶದ ಇನ್ನೊಂದು ಬ್ಯಾಂಕಿಗೆ ನಿಷೇಧ ಹೇರಿದ RBI, ಸಂಕಷ್ಟದಲ್ಲಿ ಹಣ ಇಟ್ಟ ಜನರು.
RBI ಈ ಸಹಕಾರಿ ಬ್ಯಾಂಕ್ ನ ವಹಿವಾಟನ್ನು ನಿಷೇಧಿಸಿದೆ.
Bank Licence Cancellation Reason: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇದೆ. ಗ್ರಾಹಕರ ಉಪಯೋಗಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಆದರೆ ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಸಹಕಾರಿ ಬ್ಯಾಂಕ್ ವ್ಯವಹಾರವನ್ನು ಕೆಲವು ಕಾರಣಗಳಿಂದ ನಿಷೇಧಿಸಿದೆ. ಅಂದರೆ ಗಾಜಿಪುರದ ಸಹಕಾರಿ ಬ್ಯಾಂಕ್ ನ ವ್ಯವಹಾರವನ್ನು RBI ನಿಷೇಧಿಸಿದೆ. ಸಹಕಾರಿ ಬ್ಯಾಂಕ್ 6 ತಿಂಗಳವರೆಗೆ ಬ್ಯಾಂಕಿಂಗ್ ವ್ಯವಹಾರ ಮಾಡುವಂತಿಲ್ಲ. ಈ ಬಗ್ಗೆ ಬ್ಯಾಂಕ್ ಗ್ರಾಹಕರಿಗೆ ಕೆಲವು ಭಿನ್ನಾಭಿಪ್ರಾಯಗಳು ಮೂಡಿರುತ್ತದೆ. ಈ ವಿಷಯವಾಗಿ ಗ್ರಾಹಕರು ಗಲಾಟೆ ಆರಂಭಿಸಿದ್ದು, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಏನಿದು ಆರ್ಬಿಐ ಹೊರಡಿಸಿದ ಗಾಜಿಪುರದ ಸಹಕಾರಿ ಬ್ಯಾಂಕ್ನ ವ್ಯವಹಾರದ ನಿಷೇಧಾಜ್ಞೆ
ಹೌದು ಆರ್ಬಿಐ ಗಾಜಿಪುರದ ಸಹಕಾರಿ ಬ್ಯಾಂಕ್ನ ವ್ಯವಹಾರದ ಮೇಲೆ ನಿಷೇಧ ಹೇರಿದೆ. ಘಾಜಿಪುರದಲ್ಲಿರುವ ಪೂರ್ವಾಂಚಲ ಸಹಕಾರಿ ಬ್ಯಾಂಕ್ನ ವಹಿವಾಟುಗಳನ್ನು ನಿಷೇಧಿಸಲು ಆಗಸ್ಟ್ 29 ರಂದು RBI ಸೂಚನೆಗಳನ್ನು ನೀಡಿತ್ತು.
ಹಾಗು 6 ತಿಂಗಳವರೆಗೆ ಮಾತ್ರ ಬ್ಯಾಂಕ್ ವ್ಯವಹಾರಕ್ಕೆ ನಿಷೇಧವಿದೆ ಎಂದು RBI ಹೇಳಿದ್ದು , ಬ್ಯಾಂಕ್ಗಳು ಸಾಲ ನೀಡಲು, ಹೊಸ ಗ್ರಾಹಕರನ್ನು ಪಡೆಯಲು, ಹಣವನ್ನು ಎರವಲು ಪಡೆಯಲು ಮತ್ತು ಕೇಂದ್ರೀಯ ಬ್ಯಾಂಕ್ನ ಒಪ್ಪಿಗೆಯಿಲ್ಲದೆ ಹೂಡಿಕೆ ಮಾಡಲು ಅನುಮತಿಸುವುದಿಲ್ಲ. ಆದರೆ, ಇದನ್ನು ಬ್ಯಾಂಕಿಂಗ್ ಪರವಾನಗಿ ರದ್ದತಿ ಎಂದು ಪರಿಗಣಿಸಬಾರದು ಎಂದ RBI ಸ್ಪಷ್ಟಪಡಿಸಿದೆ.
ಠೇವಣಿ ಗ್ರಾಹಕರ ತಳಮಳ
ಬ್ಯಾಂಕ್ ಅಂದ ಮೇಲೆ ಕೋಟಿ ಕೋಟಿ ಹಣ ಹೂಡಿಕೆ ಇದ್ದೆ ಇರುತ್ತದೆ. ಈ ಬ್ಯಾಂಕ್ ನಲ್ಲಿ 30 ಸಾವಿರ ಗ್ರಾಹಕರ ಸುಮಾರು 40 ಕೋಟಿ ಹಣ ಬ್ಯಾಂಕ್ ನಲ್ಲಿ ಸಿಲುಕಿಕೊಂಡಿದೆ ಎನ್ನಲಾಗಿದೆ. ಇದಕ್ಕಾಗಿ ಠೇವಣಿದಾರರು ಆತಂಕಕ್ಕೊಳಗಾಗಿದ್ದು, DICGC ಕಾಯಿದೆ 2021 ರ ಸೆಕ್ಷನ್ 18A ಅಡಿಯಲ್ಲಿ, ಗ್ರಾಹಕರು 5 ಲಕ್ಷದ ವರೆಗೆ ಠೇವಣಿಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ, ಗ್ರಾಹಕರು ತಮ್ಮ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಇದಲ್ಲದೆ ಅಧಿಕೃತ ವೆಬ್ಸೈಟ್ www.dicgc.org.in ಅನ್ನು ಸಹ ಭೇಟಿ ಮಾಡಬಹುದು.
ಆರ್ಬಿಐ ಹೊರಡಿಸಿದ ಗಾಜಿಪುರದ ಸಹಕಾರಿ ಬ್ಯಾಂಕ್ನ ವ್ಯವಹಾರದ ನಿಷೇಧಾಜ್ಞೆ ನಂತರ ಇಲ್ಲಿಯವರೆಗೆ ಹಲವಾರು ಬಾರಿ ಬ್ಯಾಂಕ್ ಶಾಖೆಯ ಮುಂದೆ ಪ್ರತಿಭಟನೆ ಕೊಡ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಪೂರ್ವಾಂಚಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಮಾಜಿ ಸಿಇಒ ವಿವೇಕ್ ಪಾಂಡೆ, ಮಾಜಿ ಪ್ರವರ್ತಕ ರಾಮ್ ಬಾಬು ಶಾಂಡಿಲ್ಯ, ವ್ಯವಸ್ಥಾಪಕ ಸಮಿತಿ ಬ್ಯಾಂಕ್ ಮಾಲೀಕ, ಲೆಕ್ಕ ಪರಿಶೋಧಕ ಮೆಸರ್ಸ್ ವಿಜಯ್ ಕೆ ಶರ್ಮಾ ಮತ್ತು ಕಂಪನಿ ಮತ್ತು ಇತರರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ.