Ads By Google

Bank Loan Payment: ಬ್ಯಾಂಕ್ ಲೋನ್ ಮಾಡಿದ ಎಲ್ಲರಿಗೂ ಗುಡ್ ನ್ಯೂಸ್ ನೀಡಿದ ಬೊಮ್ಮಾಯಿ, ನಿಯಮದಲ್ಲಿ ಬದಲಾವಣೆ ಮಾಡಲು ನಿರ್ಧಾರ.

farmers bank loan
Ads By Google

ಇತ್ತೀಚಿನ ದಿನಗಳಲ್ಲಿ ಜನರು ಯಾವುದಾದರೂ ಒಂದು ಕಾರಣಕ್ಕೆ ಬ್ಯಾಂಕು ಅಥವಾ ಇತರೆ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಹೌದು ಜನರ ಅವಶ್ಯಕತೆ ಇರುವ ಕಾರಣ ಜನರು ಬ್ಯಾಂಕು ಮತ್ತೆ ಇತರೆ ಹಣಕಾಸು ಸಂಸ್ಥೆಗಳಲ್ಲಿ ದೊಡ್ಡ ಮೊತ್ತದ ಅಥವಾ ಸಣ್ಣ ಮೊತ್ತದ ಹಣವನ್ನ ಸಾಲದ ರೂಪದಲ್ಲಿ ತೆಗೆದುಕೊಂಡು ನಂತರ ಅದನ್ನ ತೀರಿಸಲಾಗದೆ ಅದೆಷ್ಟೋ ಜನರು ಬಹಳ ಕಷ್ಟಪಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ. ಸಾಲ ಮಾಡುವವರು ಬಡವರು ಮತ್ತು ಅವರು ಯಾವುದೇ ಒಂದು ಉದ್ದೇಶದಿಂದ ಬ್ಯಾಂಕು ಅಥವಾ ಇತರೆ ಹಣಕಾಸು ಸಂಸ್ಥೆಯಲ್ಲಿ ಸಾಲವನ್ನ ಮಾಡುತ್ತಾರೆ, ಆದರೆ ಸಮಸ್ಯೆಯ ಕಾರಣ ಅದನ್ನ ತೀರಿಸಲಾಗದೆ ಕೊನೆಗೆ ತಮ್ಮ ಪ್ರಾಣವನ್ನ ಕಳೆದುಕೊಳ್ಳುವುದು ಸರ್ಕಾರದ ಗಮನಕ್ಕೆ ಬಂದಿದೆ.

Bank Loan ಮಾಡುವ ಸಮಯದಲ್ಲಿ ಬ್ಯಾಂಕುಗಳು Loan Document ಮತ್ತು ಇತರೆ ಕೆಲವು ಪತ್ರಗಳಿಗೆ ಸಹಿಯನ್ನ ಹಾಕಿಸಿಕೊಳ್ಳುತ್ತಾರೆ ಮತ್ತು ಜನರು ಲೋನ್ ತೀರಿಸದೆ ಇರುವ ಸಮಯದಲ್ಲಿ ಅವರಿಗೆ ಸಹಿ ಮಾಡಿದ ಪಾತ್ರಗಳನ್ನ ಹಿಡಿಕೊಂಡು ಕಾಟ ಕೊಡಲು ಆರಂಭ ಮಾಡುತ್ತಾರೆ. ರಾಜ್ಯದಲ್ಲಿ ಅದೆಷ್ಟೋ ರೈತರು ವ್ಯವಸಾಯದ ಉದ್ದೇಶದಿಂದ ಸಾಲವನ್ನ ಪಡೆದುಕೊಂಡು ನಂತರ ಸಾಲವನ್ನ ತೀರಿಸಲಾಗದೆ ಕಷ್ಟಪಡುತ್ತಿರುವುದು ಮತ್ತು ಅದೆಷ್ಟೋ ರೈತರು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿರುವುದನ್ನ ಗಮನಿಸಿದ ರಾಜ್ಯ ಸರ್ಕಾರ ಈಗ ದೊಡ್ಡ ನಿಯಮವನ್ನ ಜಾರಿಗೆ ತರಲು ಮುಂದಾಗಿದೆ.

Image Credit: www.indialegallive.com

ಹೌದು Bank Loan Payment ನಿಯಮಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನ ಜಾರಿಗೆ ತರುವುದಾಗಿ ರಾಜ್ಯದ ಮುಖ್ಯಮಂತ್ರಿಗಳು ಈಗ ಭರವಸೆಯನ್ನ ನೀಡಿದ್ದಾರೆ. ಸಮಾರಂಭದಲ್ಲಿ ರೈತರ ಬ್ಯಾಂಕ್ ಲೋನ್ ಬಗ್ಗೆ ಮಾತನಾಡಿದ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಯಾವುದೇ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ರೈತರು ಸಾಲದ ಹಣವನ್ನ ತೀರಿಸಲಿಲ್ಲ ಅನ್ನುವ ಕಾರಣಕ್ಕೆ ಅವರ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳುವುದು ರದ್ದು ಮಾಡಲು ತೀರ್ಮಾನವನ್ನ ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನ ನೀಡಿದ್ದಾರೆ.

ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಸಾಲದ ಮರುಪಾವತಿಗೆ ಸಂಬಂಧಿಸಿದಂತೆ ರೈತರ ಆಸ್ತಿಯನ್ನ ವಶಕ್ಕೆ ಪಡೆದುಕೊಳ್ಳುವ ನಿಯಮವನ್ನ ರದ್ದು ಮಾಡುತ್ತೇವೆ ಎಂದು ರಾಜ್ಯದ ಮುಖ್ಯ ಮಂತ್ರಿಗಳಾದ Basavaraj Bommai ಅವರು ಹೇಳಿಕೆಯನ್ನ ನೀಡಿದ್ದಾರೆ. ಈ ನಿಯಮವನ್ನ ಎಲ್ಲಾ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಜಾರಿಗೆ ತರಲಾಗುತ್ತದೆ ಎಂದು ಸಮಾರಂಭದಲ್ಲಿ ಭಾಷಣ ಮಾಡಿದ ಬೊಮ್ಮಾಯಿಯವರು ಹೇಳಿದ್ದಾರೆ. bank loan repayment ನಿಯಮಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಬದಲಾವಣೆಯನ್ನ ಜಾರಿಗೆ ತರುವ ಭರವಸೆಯನ್ನ ರೈತರಿಗೆ ನೀಡಲಾಗಿದೆ. ಸದ್ಯ ಸರ್ಕಾರದ ಈ ಭರವಸೆಗೆ ರಾಜ್ಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ ಮತ್ತು ಈ ನಿಯಮ ಜಾರಿಗೆ ಬಂದರೆ ಅದೆಷ್ಟೋ ರೈತರ ಆಸ್ತಿಗಳು ಉಳಿಯಲಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field