January 2024: ಜನವರಿ 1 ರಿಂದ ಬದಲಾಗಲಿವೆ ಬ್ಯಾಂಕ್ ನ ಈ ಎಲ್ಲಾ ನಿಯಮಗಳು, ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ

ಜನವರಿ 1 ರಿಂದ ಬ್ಯಾಂಕ್ ನ ಈ ಎಲ್ಲಾ ನಿಯಮಗಳು ಬದಲಾಗಲಿವೆ

Bank And Locker Rules Changes From January 2024: 2023 ರ ಆರಂಭದಿಂದ ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತ ಬಂದಿದೆ. ಅದರಲ್ಲೂ ಹೆಚ್ಚಾಗಿ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಬ್ಯಾಂಕುಗಳ ನಿಯಮಗಳು ಹಲವಾರು ಬದಲಾಗಿವೆ.

ಸದ್ಯ ನಾವೀಗ 2023 ರ ಕೊನೆಯ ತಿಂಗಳಿನಲ್ಲಿದ್ದೇವೆ. ಇನ್ನೇನು ಕೆಲವೇ ದಿನಗಳು ಮುಗಿದರೆ ಹೊಸ ವರ್ಷ 2024 ಆರಂಭವಾಗಲಿದೆ. 2024 ರ ಆರಂಭದಲ್ಲಿ ಕೂಡ ಸಾಕಷ್ಟು ನಿಯಮಗಳು ಬದಲಾಗಲಿವೆ. ನೀವು ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಜನವರಿ 1 ರಿಂದ ಬದಲಾಗುವಂತಹ ಬ್ಯಾಂಕ್ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಜನವರಿ 1 ರಿಂದ ಬ್ಯಾಂಕ್ ನ ಈ ಎಲ್ಲಾ ನಿಯಮಗಳು ಬದಲಾಗಲಿವೆ.

Bank Locker Agreement Rule Change
Image Credit: Goalbridge

ಜನವರಿ 1 ರಿಂದ ಬದಲಾಗಲಿವೆ ಬ್ಯಾಂಕ್ ನ ಈ ಎಲ್ಲಾ ನಿಯಮಗಳು
•ಹೆಚ್ಚಿನ ಎಲ್ಲಾ ಬ್ಯಾಂಕುಗಳು ಗ್ರಾಹಕರ ಹಕ್ಕುಗಳನ್ನು ಒಳಗೊಂಡಿರುವ ಪರಿಷ್ಕೃತ Bank Locker Agreement ನೀಡಿವೆ. ಬ್ಯಾಂಕ್ ಲಾಕರ್ ಹೊಂದಿರುವ ಗ್ರಾಹಕರು ಅದರಲ್ಲಿ ಸಹಿ ಮಾಡಬೇಕಾಗುತ್ತದೆ. ಬ್ಯಾಂಕ್‌ ಗಳು ತಮ್ಮ ಗ್ರಾಹಕರನ್ನು ಫೋನ್ ಕರೆಗಳು, SMS ಮತ್ತು ಇಮೇಲ್‌ ಗಳ ಮೂಲಕ ಬ್ಯಾಂಕ್‌ ಗೆ ಭೇಟಿ ನೀಡುವಂತೆ ಕೇಳುತ್ತಿವೆ.

ಗ್ರಾಹಕರು ಬ್ಯಾಂಕ್‌ ಗೆ ಹೋಗಿ ತಮ್ಮ ಆಧಾರ್, ಪ್ಯಾನ್ ಮತ್ತು ಫೋಟೋವನ್ನು ನೀಡಬೇಕು. ಅಲ್ಲದೆ ಸ್ಟಾಂಪ್ ಪೇಪರ್ ಮತ್ತು ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ. 31 ಡಿಸೆಂಬರ್ 2023 ರೊಳಗೆ ಬ್ಯಾಂಕ್ ಲಾಕರ್ ಹೊಂದಿರುವವರು ಹೊಸ ಒಪ್ಪಂದಕ್ಕೆ ಸಹಿ ಹಾಕುವಂತೆ RBI ಎಲ್ಲಾ ಬ್ಯಾಂಕ್‌ ಗಳಿಗೆ ಆದೇಶಿಸಿದೆ. ಬ್ಯಾಂಕ್‌ ಗಳು ಅಸ್ತಿತ್ವದಲ್ಲಿರುವ ಲಾಕರ್ ಗ್ರಾಹಕರೊಂದಿಗೆ ತಮ್ಮ ಲಾಕರ್ ಒಪ್ಪಂದಗಳನ್ನು ಜನವರಿ 1, 2024 ರ ವರೆಗೆ ನವೀಕರಿಸುತ್ತವೆ.

Bank Locker Agreement Rule Change From January 1st
Image Credit: News NCR

•SBI ಪ್ರಕಾರ, ಲಾಕರ್‌ ನ ಪ್ರದೇಶ ಮತ್ತು ಗಾತ್ರವನ್ನು ಅವಲಂಬಿಸಿ ಬ್ಯಾಂಕ್ ಲಾಕರ್ ಶುಲ್ಕಗಳು 500 ರಿಂದ 3,000 ರೂ. ವರೆಗೆ ಇರಲಿದೆ. ದೊಡ್ಡ ನಗರಗಳು ಮತ್ತು ಮಹಾನಗರಗಳಲ್ಲಿನ ಬ್ಯಾಂಕ್‌ ಗಳು ಸಣ್ಣ, ಮಧ್ಯಮ, ದೊಡ್ಡ ಮತ್ತು ಹೆಚ್ಚುವರಿ ದೊಡ್ಡ ಗಾತ್ರದ ಲಾಕರ್‌ ಗಳಿಗೆ ವಾರ್ಷಿಕವಾಗಿ 2,000, 4,000, 8,000 ಮತ್ತು 12,000 ರೂ. ಶುಲ್ಕವನ್ನು ವಿಧಿಸಲಾಗುತ್ತದೆ. ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಬ್ಯಾಂಕ್ ಸಣ್ಣ, ಮಧ್ಯಮ, ದೊಡ್ಡ ಮತ್ತು ಹೆಚ್ಚುವರಿ ದೊಡ್ಡ ಗಾತ್ರದ ಲಾಕರ್‌ ಗಳಿಗೆ ರೂ 1,500, ರೂ 3,000, ರೂ 6,000 ಮತ್ತು ರೂ 9,000 ವಿಧಿಸಲಾಗುತ್ತದೆ.

Join Nadunudi News WhatsApp Group

•ಜನವರಿ 2022 ರ ನಂತರ, ಬ್ಯಾಂಕ್ ಲಾಕರ್‌ ನಿಂದ ಸರಕುಗಳ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ಬ್ಯಾಂಕ್‌ ಗಳು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿ ಪ್ರಕಾರ, ಬ್ಯಾಂಕಿನ ನಿರ್ಲಕ್ಷ್ಯದಿಂದ ಯಾವುದೇ ಲಾಕರ್ ನಲ್ಲಿ ಇರಿಸಲಾದ ವಸ್ತು ನಷ್ಟವಾದರೆ ಬ್ಯಾಂಕ್ ಗ್ರಾಹಕರಿಗೆ ಪರಿಹಾರವನ್ನು ನೀಡಬೇಕಾಗುತ್ತದೆ. ಬ್ಯಾಂಕ್‌ನಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯದಿಂದ ಬೆಂಕಿ, ಕಳ್ಳತನ, ದರೋಡೆಯಂತಹ ಪ್ರಕರಣಗಳು ಸಂಭವಿಸದಂತೆ ನೋಡಿಕೊಳ್ಳುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ.

Join Nadunudi News WhatsApp Group